ಕೊಪ್ಪಳ : ಜೀವನದ ಯಾವ ಘಟ್ಟದಲ್ಲಾದರೂ ಸರಿಯೇ ಮೋಸ ಹೋಗುವವರು ಇರುವ ತನಕ ಯಾಮಾರಿಸುವವರು ಖದೀಮರು ಇದ್ದೇ ಇರುತ್ತಾರೆ.
ಇಲ್ಲೂ ಆಗಿದ್ದು ಅದೇ.. ಎರಡು ಮಕ್ಕಳ ತಾಯಿಯನ್ನು ಕನ್ಯೆ ಎಂದು ನಂಬಿಸಿ ಕೊಪ್ಪಳದ ಯುವಕನೋರ್ವನಿಗೆ ಬರೋಬ್ಬರಿ 4 ಲಕ್ಷ ರೂಪಾಯಿ ಪಡೆದು ಮದುವೆ ಮಾಡಿಸಿರುವ ಘಟನೆ ನಡೆದಿದೆ.
ಮಧ್ಯವರ್ತಿಗಳನ್ನು ನಂಬಿ ಜಿಲ್ಲೆಯ ಗಂಗಾವತಿಯ ದುರ್ಗಾ ಪ್ರಸಾದ್ ಎಂಬುವವರನ್ನು ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಅಮಾನಿ ಎಂಬ ಮಹಿಳೆಯೊಂದಿಗೆ ಬ್ರೋಕರ್ಗಳು ಮದುವೆ ಮಾಡಿ ಯುವಕನ ಬದುಕನ್ನೇ ಮುಂಡಾಮೋಚಿದ್ದಾರೆ.
ಕಳೆದ ಜೂ.5ರಂದು ಇಬ್ಬರು ಮಕ್ಕಳ ತಾಯಿಯನ್ನು ಅವಿವಾಹಿತೆ ಎಂದು ನಂಬಿಸಿ ವಿವಾಹ ಮಾಡಿಸಲಾಗಿತ್ತು. ನಂತರ ಆಕೆ ಪತಿಯೊಂದಿಗೆ ಇರಲು ನಿರಾಕರಿಸಿ ಕೈಕೊಟ್ಟಿದ್ದಾಳೆ.
ಬಳಿಕ ತಾನು ಮೋಸ ಹೋಗಿರುವುದಾಗಿ ಅರಿತ ದುರ್ಗಾ ಪ್ರಸಾದ್, ಈ ಕುರಿತು ವಿಜಯವಾಡ ಪೊಲೀಸರಿಗೆ ದೂರು ನೀಡಿದ್ದಾರೆ. ಅಮಾನಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡಿದ್ದಾರೆ.
ವಧುವಾಗಿ ನಟಿಸಿದರೆ 50 ಸಾವಿರ ರೂಪಾಯಿ ಕೊಡುವುದಾಗಿ ಮಧ್ಯವರ್ತಿಗಳು ಹೇಳಿದ್ದರು ಎಂದು ಮಹಿಳೆ ಬಾಯಿಬಿಟ್ಟಿದ್ದಾಳೆ.




