ಗಾಲೇ (ಶ್ರೀಲಂಕಾ): ಮುಶ್ಫೀಕಿರ ರಹೀಂಮ್ ಅವರ ಆಕರ್ಷಕ ಶತಕದ ನೆರವಿನಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡ ಆತಿಥೇಯ ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ 4 ವಿಕೆಟ್ ಗೆ 412 ರನ್ ಗಳಿಸಿದ್ದು, ಬೃಹತ್ ಮೊತ್ತದತ್ತ ಮುನ್ನಡೆದಿದೆ.
ಇಲ್ಲಿನ ಅಂತಾರಾಷ್ಟ್ರೀಯ ಗಾಲೆ ಮೈದಾನದಲ್ಲಿ ಎರಡನೇ ದಿನದಾಟದ ಭೋಜನ ವಿರಾಮದ ನಂತರದ ಆಟ ಮುಂದುವರೆದಿದ್ದು, ಮುಶ್ಪೀಕಿರ್ ರಹೀಮ್ 157 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಇವರೊಂದಿಗೆ ಲ್ಯಾಟಿನ್ ದಾಸ್ 56 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು.




