Ad imageAd image

ಗೋಕಾಕ ಜಾತ್ರೆ ನಿಮಿತ್ಯ ನಗರದಲ್ಲಿ ವಿಶೇಷ ಪೋಲಿಸ್ ಗಸ್ತು ಪಡೆಯ ಪೂರ್ವಭ್ಯಾಸ

Bharath Vaibhav
ಗೋಕಾಕ ಜಾತ್ರೆ ನಿಮಿತ್ಯ ನಗರದಲ್ಲಿ ವಿಶೇಷ ಪೋಲಿಸ್ ಗಸ್ತು ಪಡೆಯ ಪೂರ್ವಭ್ಯಾಸ
WhatsApp Group Join Now
Telegram Group Join Now

ಗೋಕಾಕ : 10 ವರ್ಷಗಳ ನಂತರ ನಡೆಯುವ ಗೋಕಾಕ ಗ್ರಾಮದೇವತೆ ಜಾತ್ರೆ ನಿಮಿತ್ಯ ಗೋಕಾಕ ನಗರ ಪೋಲಿಸರು ಇನ್ಮುಂದೆ ವಿಶೇಷ ಗಸ್ತುಕರ್ತವ್ಯ ನಿರ್ವಹಿಸುವ ಕಾರ್ಯವನ್ನು ಮಾಡಲು ಮುಂದಾಗಿದ್ದಾರೆ.

ಅಂದಾಜು 10 ರಿಂದ 15 ಲಕ್ಷ ಭಕ್ತರು ಆಗಮಿಸುವ ಈ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಶಾಂತಿ ಭಂಗ ಆಗುವದನ್ನು ತಡೆಯುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಆದೇಶ ಮತ್ತು ಮಾರ್ಗದರ್ಶನದಂತೆ ವಿಶೇಷ ಗಸ್ತು ಪೋಲಿಸ್ ಪಡೆಯನ್ನು ರಚಿಸಿದ್ದಾರೆ.

ನಗರದಲ್ಲಿ ಇನ್ಮುಂದೆ ರಾತ್ರಿ10 ಗಂಟೆಗೆ ಎಲ್ಲ ಅಂಗಡಿಗಳು ಬಂದ ಮಾಡಬೇಕೆಂದು ಅಂಗಡಿಕಾರರಿಗೆ ನಗರ ಪೋಲಿಸ್ ಪಿಎಸ್ಐ ಕೆ ವಾಲಿಕಾರ ಇವರು ತಿಳಿಸಿದರು. ಅದರ ಜೊತೆಯಲ್ಲಿ ಅಂಗಡಿಕಾರರು ಸುರಕ್ಷತೆಗಾಗಿ ತಾವೆಲ್ಲರೂ ಸಿಸಿಟಿವಿ ಅಳವಡಿಸಿಕೊಂಡು ಪೋಲಿಸ್ ಇಲಾಖೆಗೆ ಸಹಕರಿಸಲು ತಿಳಿಸಿದರು.

ಅದರ ಜೊತೆಯಲ್ಲಿ ಜಾತ್ರೆಯಲ್ಲಾಗಲಿ ಅದಕ್ಕಿಂತ ಮುಂಚೆಯಾಗಲಿ ಮಹಿಳೆಯರು ಬಂಗಾರದ ಆಬರಣಗಳನ್ನು ದರಿಸಿಕೊಂಡು ರಾತ್ರಿ ಹೊತ್ತು ತಿರುಗಾಡಬಾರದು.ಒಂದು ವೇಳೆ ಸಂಶಯಾಸ್ಪದವಾಗಿ ಯಾರಾದರೂ ಕಂಡು ಬಂದಲ್ಲಿ ತಕ್ಷಣ ಪೋಲಿಸ್ ಇಲಾಖೆಗೆ ತಿಳಿಸಲು ಹೇಳಿದರು.

ಒಂದು ವೇಳೆ ಯಾರಾದರೂ ಉದ್ದೇಶ ಪೂರ್ವಕವಾಗಿ ಶಾಂತಿಬಂಗ ಮಾಡುವ ಕಾರ್ಯ ಮಾಡಿದ್ದಲ್ಲಿ ಅಂತವರ ವಿರುದ್ದ ಯಾವುದೆ ಮತ್ತು ಯಾರದೆ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆಂದರು.

ಈ ಸಂದರ್ಭದಲ್ಲಿ ನಗರ ವಿಶೇಷ ಪೋಲಿಸ್ ಗಸ್ತು ಪಡೆಯ ಸಿಬ್ಬಂದಿಗಳು ನಗರದೆಲ್ಲೆಡೆ ಸುತ್ತಾಡಿ ಪೂರ್ವಬ್ಯಾಸ ಮಾಡಿದರು.

ವರದಿ : ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!