Ad imageAd image

ಕರ್ನಾಟಕ ರಾಜ್ಯ ಸರ್ಕಾರದ ಹೊಸ ಶಿಕ್ಷಣ ನೀತಿಯಂತೆ ರಚಿಸಲಾದ B.Sc ಪದವಿಯ ಗಣಿತ ಪಠ್ಯಪುಸ್ತಕ ಬಿಡುಗಡೆ

Bharath Vaibhav
ಕರ್ನಾಟಕ ರಾಜ್ಯ ಸರ್ಕಾರದ ಹೊಸ ಶಿಕ್ಷಣ ನೀತಿಯಂತೆ ರಚಿಸಲಾದ B.Sc ಪದವಿಯ ಗಣಿತ ಪಠ್ಯಪುಸ್ತಕ ಬಿಡುಗಡೆ
WhatsApp Group Join Now
Telegram Group Join Now

ಬೀದರ್: ಕರ್ನಾಟಕ ಸರ್ಕಾರದ ಹೊಸ ರಾಜ್ಯ ಶಿಕ್ಷಣ ನೀತಿ (State Education Policy – SEP) ಅನ್ವಯ, ಬೀದರ್ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಗಳಿಗೆ ಸಂಯೋಜಿತವಾಗಿರುವ ವಿವಿಧ ಪದವಿ ಕಾಲೇಜುಗಳಿಗೆ ಮೀಸಲಾದ B.Sc ಪದವಿಯ ಸಾಮಾನ್ಯ ಗಣಿತದ ಪಠ್ಯಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ, ವಿವಿಧ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಗಣಿತ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಡಾ. ಮಲ್ಲಿಕಾರ್ಜುನ ಹಂಗರಗಿ (ಪ್ರಾಂಶುಪಾಲರು, ಕರ್ನಾಟಕ, ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಬೀದರ್), ಪ್ರೊ. ಧನರಾಜ್ ಬಿರಾದಾರ್ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮನ್ನಾಳಿ), ಡಾ. ಹೇಮಾವತಿ ಪಾಟೀಲ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಭಾಲ್ಕಿ) ಹಾಗೂ ಡಾ. ಚನ್ನಕೇಶವ ಮೂರ್ತಿ (ಗಣಿತ ವಿಭಾಗ ಮುಖ್ಯಸ್ಥರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನೌಬಾದ್, ಬೀದರ್) ಇವ್ರು ಈ ಪುಸ್ತಕವನ್ನು ಬಿಡುಗಡೆ ಮಾಡಿದರು.

ಈ ಪಠ್ಯಪುಸ್ತಕವನ್ನು ಡಾ. ಸಿದ್ದನಗೌಡ ಪಾಟೀಲ (ಕಲಬುರ್ಗಿ), ಡಾ. ಜಗದೀಶ್ ತವಡೆ (ಡೋಣಗಾಪುರ, ಭಾಲ್ಕಿ) ಮತ್ತು ಡಾ. ಪದ್ಮಿನಿ ಕಾಜಿ (ಬೀದರ್) ಅವರು ಸಹಲೆಖಕರಾಗಿ ರಚಿಸಿದ್ದಾರೆ. ಹೊಸ ರಾಜ್ಯ ಶಿಕ್ಷಣ ನೀತಿಯ ಅನ್ವಯ ತರಬೇತಿಯ ಸಹಾಯಕ್ಕೆ ವಿನ್ಯಾಸಗೊಳಿಸಿದ ಈ ಪುಸ್ತಕವು ವಿದ್ಯಾರ್ಥಿಗಳಿಗೆ ಆಳವಾದ ವಿಷಯ ಜ್ಞಾನವನ್ನು ನೀಡಲಿದ್ದು, ಶೈಕ್ಷಣಿಕ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಸಹಕಾರಿಯಾಗುವುದಾಗಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಲೇಜಿನ ಇತರ ಅಧ್ಯಾಪಕರು ಮತ್ತು ಆಡಳಿತ ಮಂಡಳಿಯ ಸದಸ್ಯರು ಲೇಖಕರ ಈ ಪ್ರಯತ್ನಕ್ಕೆ ಅಭಿನಂದನೆ ಯನ್ನ ಸಲ್ಲಿಸಿ, ಪುಸ್ತಕದ ಯಶಸ್ವಿಗೆ ಶುಭ ಹಾರೈಸಿದರು.

ವರದಿ:ಸಂತೋಷ ಬಿಜಿ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!