Ad imageAd image

ಅದ್ದೂರಿಯಾಗಿ ಉದ್ಘಾಟನೆ ಗೊಂಡ ಇಟಗಿ ಗ್ರಾ.ಪಂ ನೂತನ ಹೈಟೆಕ್ ಕಟ್ಟಡ ಮತ್ತು ಸಭಾಭವನ

Bharath Vaibhav
ಅದ್ದೂರಿಯಾಗಿ ಉದ್ಘಾಟನೆ ಗೊಂಡ ಇಟಗಿ ಗ್ರಾ.ಪಂ ನೂತನ ಹೈಟೆಕ್ ಕಟ್ಟಡ ಮತ್ತು ಸಭಾಭವನ
WhatsApp Group Join Now
Telegram Group Join Now

ಇಟಗಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹೆಬ್ಬಾಗಿಲು ಎಂದು ಹೆಸರಾದ ಇಟಗಿಯಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾದ ಹೈ ಟೆಕ್ ಗ್ರಾ.ಪಂ ಕಟ್ಟಡ ಮತ್ತು ಸಭಾಭವನವು ಅದ್ದೂರಿಯಾಗಿ ಉದ್ಘಾಟನೆ ಗೊಂಡಿತು.

ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗಿನ್ದ್ರ ಸ್ವಾಮೀಜಿ, ನಂದಗಡ ಮತ್ತು ಇಟಗಿ ವಿರಕ್ತಮಠಮಠಗಳ ಪೂಜ್ಯರಾದ ಚನ್ನವೀರ ದೇವರು, ಚನ್ನಬಸವ ದೇವರು ವಹಿಸಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಾನಾಪುರ ಕ್ಷೇತ್ರದ ಶಾಸಕ ವಿಠಲ್ ಹಲಗೇಕರ್ ಹಾಗೂ ಗ್ರಾ.ಪಂ ಅಧ್ಯಕ್ಷ ರುದ್ರಪ್ಪ ಮುದುಕಪ್ಪ ತುರಿಮುರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚನ್ನರಾಜು ಹಟ್ಟಿಹೊಳಿ, ಕಾಂಗ್ರೆಸ್ ಮುಖಂಡರು ಆದ ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ವಹಿಸಿದ್ದರು.

ಅತಿಥಿಗಳಾಗಿ ಖಾನಾಪುರ ತಾಲ್ಲೂಕು ಪಂಚಾಯಿತಿ ಕಾರ್ಯವಾಹಕ ಅಧಿಕಾರಿಗಳು ಆದ ರಮೇಶ್ ಮೆಟ್ರಿ, ಸಹಾಯಕ ನಿರ್ದೇಶಕರು ಆದ ವಿಜಯಕುಮಾರ್ ಕೋತಿನ್, ರೂಪಾಲಿ ಬಡಕುದ್ರಿ, ಪಿ.ಡಿ.ಓ ವೀರೇಶ್ ಸಜ್ಜನ ಹಾಗೂ ಉಪಾಧ್ಯಕ್ಷರು ಆದ ರಾಜಶ್ರೀ ಹುಣಸಿಕಟ್ಟಿ, ಇಟಗಿ ಪಿ.ಕೆ.ಪಿ.ಎಸ್ ಅಧ್ಯಕ್ಷರು ಆದ ಶ್ರೀಶೈಲ ತುರುಮುರಿ, ಉಪಾಧ್ಯಕ್ಷ ಇಕ್ಬಾಲ್ ನಾದಪ್, Kmf ಮಾಜಿ ಅಧ್ಯಕ್ಷ ಅದೃಶ್ ತುರುಮುರಿ ಸೇರಿದಂತೆ ಎಲ್ಲಾ ಸದಸ್ಯರ ನೇತೃತ್ವದಲ್ಲಿ ಈ ಕಾರ್ಯಕ್ರಮವು ಉದ್ಘಾಟನೆ ಗೊಂಡಿತು.

ಈ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿ.ಡಿ.ಒಗಳು ಬಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಳೇ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಪಿ.ಡಿ.ಓಗಳು, ನರೇಗಾ ಸಿಬ್ಬಂದಿ, ಇಂಜಿನಿಯರಗಳು ಮತ್ತು ಸಿಬ್ಬಂದಿಗಳನ್ನು ಸತ್ಕರಿಸಲಾಯಿತು.

ಹೈಟೆಕ್ ಗ್ರಾಮ ಪಂಚಾಯಿತಿ ಕಟ್ಟಡದ ನಿರ್ಮಾಣಕ್ಕೆ ಎಲ್ಲಾ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದರು. ನಂತರ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂವಾದದಲ್ಲಿ ಮಾತನಾಡಿದ ಎಂ.ಎಲ್.ಸಿ ಚೆನ್ನರಾಜು ಹಟ್ಟಿಹೊಳಿ ಹಾಗೂ ಖಾನಾಪುರ ಕ್ಷೇತ್ರದ ಶಾಸಕರು ಆದ ವಿಠಲ ಹಲಗೇಕರ್ ಅವರು ಈ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಒಟ್ಟಾರೆ ಖಾನಾಪುರ ಕ್ಷೇತ್ರದ ಹೆಬ್ಬಾಗಿಲು ಇಟಗಿಯಲ್ಲಿ ನಿರ್ಮಿಸಿದ ಗ್ರಾಮ ಪಂಚಾಯಿತಿ ಹೈಟೆಕ್ ಕಟ್ಟಡವು ಅದ್ದೂರಿಯಾಗಿ ಉದ್ಘಾಟನೆ ಗೊಂಡಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!