ರಾಂಪುರ: ಮಗ ಮದುವೆಯಾಗಬೇಕಾದ ಹುಡುಗಿಯನ್ನು ತಂದೆಯೇ ಇಷ್ಟಪಟ್ಟು ಮದುವೆಯಾದ ವಿಚಿತ್ರ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ. ಶಕೀಲ್ ತನ್ನ ಮಗನ ಭಾವಿ ಪತ್ನಿಯನ್ನು ಮದುವೆಯಾದ ವ್ಯಕ್ತಿ.
ಶಬಾನ ಎನ್ನುವ ಮಹಿಳೆ ಜೊತೆ ಮದುವೆಯಾಗಿರುವ ಶಕೀಲ್ಗೆ ಈಗಾಗಲೇ ಆರು ಜನ ಮಕ್ಕಳಿದ್ದಾರೆ.ಆರಂಭದಲ್ಲಿ ಶಕೀಲ್ ಅಪ್ರಾಪ್ತ ಮಗನಿಗೆ ಈ ಮಹಿಳೆ ಜೊತೆ ಮದುವೆ ಮಾಡಲು ಮುಂದಾಗಿದ್ದಾನೆ. ಆದರೆ ಕುಟುಂಬ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಬಳಿಕ ಈತನೇ ಆ ಮಹಿಳೆಯ ಜೊತೆ ದಿನವೂ ಮಾತನಾಡಲು ಶುರು ಮಾಡಿದ್ದಾನೆ. ವಿಡಿಯೋ ಕಾಲ್ ಕೂಡ ಮಾಡುತ್ತಿದ್ದ ಶಕೀಲ್, ಪತ್ನಿಯನ್ನು ತೊರೆದು ಆಕೆಯ ಜೊತೆಗೆ ಮದುವೆಯಾಗಲು ನಿರ್ಧರಿಸಿದ್ದಾನೆ.
ಆ ಮಹಿಳೆಯನ್ನು ಮದುವೆಯಾಗುವುದಕ್ಕಾಗಿ ಮನೆ ಬಿಟ್ಟು ಹೋದ ಶಕೀಲ್ ಮನೆಯಿಂದ ಹೋಗುವ ವೇಳೆ 2 ಲಕ್ಷ ನಗದು ಹಾಗೂ 17 ಗ್ರಾಂ ಚಿನ್ನದ ಆಭರಣವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆ ಮಹಿಳೆಗೆ ನನ್ನ ತಂದೆಯ ಜೊತೆಗೆಯೇ ಅನೈತಿಕ ಸಂಬಂಧ ಇರುವುದನ್ನು ತಿಳಿದು ಆಕೆಯನ್ನು ಮದುವೆಯಾಗುವುದಕ್ಕೆ ನಿರಾಕರಿಸಿದ್ದೆ. ನಮ್ಮ ಅಜ್ಜ ಅಜ್ಜಿಗೂ ಆ ಮಹಿಳೆಯ ಬಗ್ಗೆ ತಿಳಿದಿತ್ತು. ಅವರು ಕೂಡ ಈ ಮದುವೆಗೆ ಸಹಾಯ ಮಾಡಿದ್ದಾರೆ ಎಂದು ಶಕೀಲ್ನ 15 ವರ್ಷದ ಮಗ ಆರೋಪಿಸಿದ್ದಾನೆ.




