ಖಾನಾಪುರ: ಹೌದು ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಸಹಕಾರ ಬ್ಯಾಂಕ್ ಡಿ.ಸಿ.ಸಿ ಬ್ಯಾಂಕ್ ಚುನಾವಣೆ ಹೊಸ್ತಿಲಲ್ಲೇ ಖಾನಾಪುರ ಕ್ಷೇತ್ರದ ಬಿಜೆಪಿಯಲ್ಲಿ ಹಾಲಿ ಶಾಸಕ ವಿಠಲ್ ಹಲಗೇಕರ್ ಹಾಗೂ ಅರವಿಂದ ಪಾಟೀಲ್ ನಡುವೆ ಮುನಿಸಾಗಿದ್ದು, ಈಗಾಗಲೇ ಹಾಲಿ ಶಾಸಕ ವಿಠಲ ಹಲಗೇಕರ್ ಅವರಿಗೂ ಹೇಳದೇ ಕೇಳದೆ ಮಾಜಿ ಶಾಸಕ ಅರವಿಂದ ಪಾಟೀಲರು ಡಿ.ಸಿ.ಸಿ ಬ್ಯಾಂಕ್ ಚುನಾವಣೆ ಯಲ್ಲಿ ತಾನೇ ಅಭ್ಯರ್ಥಿ ಎಂದು ಘೋಷಿಸಿಕೊಂಡು ಮೊನ್ನೆ ಬಾಲಚಂದ್ರ ಜಾರಕಿಹೊಳಿ ಅವರನ್ನು ಕರೆಯಿಸಿ ಅವರನ್ನು ಸನ್ಮಾನ ಮಾಡಿ ಅವರಿಂದಲೇ ಖಾನಾಪುರ ಕ್ಷೇತ್ರದಿಂದ ಅಭ್ಯರ್ಥಿ ಅರವಿಂದ ಪಾಟೀಲ್ ಎಂದು ಹೇಳಿಸಿರುವುದು ಹಾಲಿ ಶಾಸಕ ವಿಠಲ ಹಲಗೇಕರ್ ಹಾಗೂ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇದರ ಮುಂದುವರಿದ ಭಾಗವಾಗಿ ನಿನ್ನೆ ಖಾನಾಪುರ ಕ್ಷೇತ್ರದ ಇಟಗಿಯ ಗ್ರಾಮ ಪಂಚಾಯಿತಿಯ ಹೊಸ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನ್ಮಾನ ಸ್ವೀಕಾರ ಮಾಡಿ ನಂತರ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಆಡಳಿತದಲ್ಲಿರುವ ಇಟಗಿಯ ಪಿ.ಕೆ.ಪಿ.ಎಸ್ ಅಧ್ಯಕ್ಷರು ಮತ್ತು ಸರ್ವ ಮಂಡಳಿಯ ಸಭೆ ನಡೆಸಿ ನಂತರ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂವಾದದಲ್ಲಿ ಮಾತನಾಡಿ ಡಿ.ಸಿ.ಸಿ ಬ್ಯಾಂಕ್ ಚುನಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾಜಿ ಶಾಸಕ ಅರವಿಂದ ಪಾಟೀಲ ನಡೆಗೆ ಅಸಮಾಧಾನ ಹೊರ ಹಾಕಿದ್ದಾರೆ.
ವರದಿ: ಬಸವರಾಜು




