ಶಿವಮೊಗ್ಗ : ಎಣ್ಣೆಯ ಮತ್ತಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಯಡವಾಲ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕರನ್ನು ಗೌತಮ್ ನಾಯ್ಕ್ (22) ಹಾಗೂ ಕುಂಬರಗುಂಡಿ ನಿವಾಸಿ ಚಿರಂಜೀವಿ (22) ಎಂದು ಗುರುತಿಸಲಾಗಿದೆ.ಯಡವಾಲ ಗ್ರಾಮದ ಸ್ನೇಹಿತನ ತಂಗಿಯ ಮಗು ನೋಡಲೆಂದು 10 ಜನ ಯುವಕರು ತೆರಳಿದ್ದರು.
ಮಗುವನ್ನು ನೋಡಿದ ಬಳಿಕ ತೋಟದಲ್ಲಿ ಪಾರ್ಟಿ ಮಾಡಲೆಂದು ಹೋಗಿದ್ದಾರೆ. ಕುಡಿದ ಮತ್ತಿನಲ್ಲಿ ಸ್ನೇಹಿತನೋರ್ವ ಕೃಷಿಹೊಂಡದ ಬಳಿ ಹೋಗಿದ್ದಾನೆ.ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಮತ್ತೋರ್ವ ಸ್ನೇಹಿತ ರಕ್ಷಣೆಗೆ ಧಾವಿಸಿದ್ದಾನೆ.
ಆದರೆ ಈ ವೇಳೆ ಆತ ಕೂಡ ನೀರಿನಲ್ಲಿ ಮುಳುಗಿದ್ದಾನೆ. ಸದ್ಯ ಯುವಕರ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.




