Ad imageAd image

ಎಸ್. ಡಿ.ವಿ.ಎಸ್. ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನ ಆಚರಣೆ

Bharath Vaibhav
ಎಸ್. ಡಿ.ವಿ.ಎಸ್. ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನ ಆಚರಣೆ
WhatsApp Group Join Now
Telegram Group Join Now

ಯಳಂದೂರು: ಪಟ್ಟಣದ ಎಸ್. ಡಿ.ವಿ.ಎಸ್. ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗ ದಿನಾವನ್ನು ಆಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಗುಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯರಾದ ಡಾ. ವಿಶ್ವನಾಥ್ ಉದ್ಘಾಟಿಸಿ ಮಾತನಾಡಿದ ಪ್ರತಿಯೊಬ್ಬರು ನಿಯಮಿತವಾಗಿ ಯೋಗ ಅಭ್ಯಾಸ ಮಾಡುವುದರ ಮೂಲಕ ಒತ್ತಡ ರಹಿತ ಜೀವನ ಶೈಲಿಯನ್ನು ಹೊಂದಬಹುದು. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದರ ಜೊತೆಗೆ ಏಕಾಗ್ರತೆಯನ್ನು ಹೊಂದಿ ಉತ್ತಮವಾದ ಅಭ್ಯಾಸವನ್ನು ರೂಡಿಸಿಕೊಳ್ಳುವುದರ ಮೂಲಕ ಸದೃಢ ಆರೋಗ್ಯವನ್ನು ಹೊಂದುವಲ್ಲಿ ಯೋಗದ ಅಭ್ಯಾಸವನ್ನು ಅಗತ್ಯ.ದೈನಂದಿನ ಜೀವನದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ. ಆರೋಗ್ಯಕರ ಜೀವನ ಶೈಲಿ ಹೊಂದಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

 

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ “ಒತ್ತಡರಹಿತ ಜೀವನ ಶೈಲಿಗೆ ಯೋಗ ಸಹಕಾರಿ” ಎಂಬ ವಿಷಯ ಕುರಿತು ಭಾಷಣ ಸ್ಪರ್ಧೆಯನ್ನು ನೆಡೆಸಲಾಗಿದ್ದು, 10ನೇ ತರಗತಿ ಕನ್ನಿಕಾ ಪ್ರಥಮ, 8ನೇ ತರಗತಿ ಜಾನವಿ ದ್ವಿತೀಯಸ್ಥಾನ, ಹಾಗೂ ತೃತೀಯ ಸ್ಥಾನವನ್ನು ರಂಜಿತ ಕೆ. 10ನೇ ತರಗತಿ, ಪಡೆದುಕೊಂಡಿದರೆ, ಸಮಾಧಾನಕರ ಬಹುಮಾನವನ್ನು 10ನೇ ತರಗತಿಯ ಚೈತ್ರ ಹಾಗೂ ಎಂಟನೇ ತರಗತಿಯ ಸುಷ್ಮಾ ರವರು ಪಡೆದುಕೊಂಡರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಡಾ.ಹರ್ಷ, ಮುಖ್ಯ ಶಿಕ್ಷಕ ವೀರಭದ್ರಸ್ವಾಮಿ, ಶಿಕ್ಷಕರಾದ ಗುಂಬಳ್ಳಿ ಬಸವರಾಜು, ಮಂಜುನಾಥ್, ಶಿವಮೂರ್ತಿ, ಬಂಗಾರು, ಮಹಾದೇವ,ನಂದಿನಿ, ಮಾದಲಾಂಬಿಕೆ, ರೂಪ, ಶೀಲಾ,ಮಣಿ ಸೇರಿದಂತೆ ಇತರರು ಇದ್ದರು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಯೋಗಾಸನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ವರದಿ: ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!