ಬೈಲಹೊಂಗಲ್: ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಅವರು ಬೈಲಹೊಂಗಲ ನಗರದಲ್ಲಿ ನೂತನವಾಗಿ ಪ್ರಾರಂಭಿಸಿದ ಮಲಪ್ರಭಾ ಮಲ್ಟಿ ಸ್ಪೇಷಾಲಿಟಿ ಹಾಸ್ಪಿಟಲ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಮಾತನಾಡಿದರು.

ಈ ಸಂದರ್ಭದಲ್ಲಿ ಇಂಚಲ ಶ್ರೀ ಶಿವಯೋಗೀಶ್ವರ ಸಾಧುಸಂಸ್ಥಾನ ಮಠದ ಸದ್ಗುರು ಡಾ|| ಶಿವಾನಂದ ಭಾರತಿ ಮಹಾಸ್ವಾಮಿಗಳು, ಮುರಗೋಡ ಶ್ರೀ ಮಹಾಂತ ದುರದುಂಡೀಶ್ವರ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು, ಬೈಲಹೊಂಗಲ ಮೂರುಸಾವಿರಮಠದ ಶ್ರೀ ಮ.ನಿ.ಪ್ರ.ಸ್ವ. ಪ್ರಭುನೀಲಕಂಠ ಮಹಾಸ್ವಾಮಿಗಳು, ನಯಾನಗರ ಶ್ರೀ ಸುಖದೇವಾನಂದ ಪುಣ್ಯಾಶ್ರಮದ ತಪೋನಿಷ್ಠ ಪ.ಪೂ. ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, ಕರ್ನಾಟಕ ಸರಕಾರ ಧರ್ಮದತ್ತಿ ಇಲಾಖೆಯ ನಿರ್ದೇಶಕರು ಹಾಗೂ ಆರಾದ್ರಿಮಠದ ಶ್ರೀ ವೇದಮೂರ್ತಿ ಡಾ|| ಮಹಾಂತಯ್ಯ ಶಾಸ್ತ್ರೀಗಳು, ಬ್ರ.ಕು.ಈ ವಿಶ್ವವಿದ್ಯಾಲಯ ಸ್ಥಳೀಯ ಸೇವಾ ಕೇಂದ್ರದ ಮುಖ್ಯ ಸಂಚಾಲಕ ರಾಜಯೋಗಿನಿ ಬಿ.ಕೆ. ಪ್ರಭಾ ಅಕ್ಕನವರು, ಬೈಲಹೊಂಗಲ ಮುಸ್ಲಿಂ ಸಮಾಜದ ಧರ್ಮಗುರುಗಳು ಮತ್ತು ಮದರಸಾ ಮುಖ್ಯಸ್ಥರು ಮೌಲಾನಾ ಶೌಖತಾದ ಬಾದಿ ಹಾಗೂ ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




