ಪ್ರೀತಿಯಲ್ಲಿ ಮೊದಲ ಡೇಟ್ ತುಂಬಾ ಮುಖ್ಯ, ನಿಮ್ಮ ಪ್ರಿಯತಮ ಅಥವಾ ಪ್ರಿಯತಮೆಯೊಂದಿಗೆ ಮೊದಲ ಭೇಟಿಯಾಗುವಾಗ ಸುಂದರವಾಗಿ ಕಾಣಲು ಕೇವಲ 5 ರೂ. ನಲ್ಲಿ ಮನೆಯಲ್ಲೇ ಫೇಸ್ ಪ್ಯಾಕ್ ತಯಾರಿಸಿ.
ಎಲ್ಲರೂ ಆಕರ್ಷಕವಾಗಿ ಕಾಣಲು ಬಯಸುತ್ತಾರೆ. ಒತ್ತಡದ ಜೀವನಶೈಲಿ & ಕಲುಷಿತ ವಾತಾವರಣದಿಂದ ಮುಖವು ಮಂದವಾಗುತ್ತದೆ. ಹೀಗಾಗಿ ಹುಡುಗಿಯರು ಪಾರ್ಲರ್ನ ಮೊರೆ ಹೋಗುತ್ತಾರೆ. ಇದು ತುಂಬಾ ದುಬಾರಿಯಾಗಬಹುದು.
ಮುಖವನ್ನು ಬಿಳಿಯಾಗಿಸಲು ಆಂಟಿ ಆಕ್ಸಿಡೆಂಟ್ & ಉರಿಯೂತ ನಿವಾರಕ ಗುಣ ಹೊಂದಿರುವ ಕಾಫಿ ಪುಡಿಯಿಂದ ಫೇಸ್ ಪ್ಯಾಕ್ ತಯಾರಿಸಿ. ಇದು ಮುಖಕ್ಕೆ ತಕ್ಷಣದ ಹೊಳಪನ್ನು ನೀಡುವುದರ ಜೊತೆಗೆ ಮೃದುವಾಗಿಸುತ್ತದೆ.

ಕಾಫಿ ಪುಡಿ ಫೇಸ್ ಪ್ಯಾಕ್ ತಯಾರಿಸಲು, ಕಾಫಿ ಪುಡಿ 1 ಚಿಕ್ಕ ಚಮಚ, ಜೇನುತುಪ್ಪ 1 ಚಿಕ್ಕ ಚಮಚ, ಮೊಸರು 1 ಚಿಕ್ಕ ಚಮಚ, ಹಾಲು 1 ಚಿಕ್ಕ ಚಮಚದಷ್ಟು ಈ ಎಲ್ಲಾ ಪದಾರ್ಥಗಳನ್ನು ತೆಗೆದುಕೊಳ್ಳಿ.
ಒಂದು ಬಟ್ಟಲಿನಲ್ಲಿ ಕಾಫಿ ಪುಡಿ, ಜೇನುತುಪ್ಪ & ಮೊಸರು ಅಥವಾ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಚೆನ್ನಾಗಿ ಪೇಸ್ಟ್ನಂತೆ ಮಾಡಿ. ನಂತರ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ. ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ. ಸ್ವಲ್ಪವೆ ಮಸಾಜ್ ಮಾಡಿ. 15 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ಮುಖ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಮಾತ್ರ ಹಚ್ಚಬೇಕು. ಇದರಿಂದ ನಿಮಗೆ ವ್ಯತ್ಯಾಸ ಕಾಣಿಸುತ್ತದೆ.
ಈ ಫೇಸ್ ಪ್ಯಾಕ್ ಹಚ್ಚುವುದರಿಂದ ಮುಖದ ಮೇಲೆ ಹೊಳಪು ಬರುತ್ತದೆ. ಚರ್ಮದ ಮೇಲೆ ಸಂಗ್ರಹವಾಗಿರುವ ಸತ್ತ ಚರ್ಮ ತೆಗೆದುಹಾಕುತ್ತದೆ. ಕಪ್ಪು ಕಲೆಗಳು ಮತ್ತು ವರ್ಣದ್ರವ್ಯ ಕಡಿಮೆಯಾಗುವ ಸಾಧ್ಯತೆಯಿದೆ.
ಗಮನಿಸಿ- ಯಾವುದೇ ಫೇಸ್ ಪ್ಯಾಕ್ ಹಚ್ಚುವ ಮೊದಲು ಪ್ಯಾಚ್ ಪರೀಕ್ಷೆ ಮಾಡಿ. ಅಲರ್ಜಿ ಇದ್ದರೆ ಬಳಸಬೇಡಿ.




