ಲಿಂಗಸ್ಗೂರು :ಆತ್ಮೀಯ ಕಾರ್ಮಿಕ ಬಂಧುಗಳೆ,
AITUC ತಕ್ಕಡಿ ಸಂಘಟನೆಯು ನನ್ನ ಮೇಲೆ ಜವಾಬ್ದಾರಿಯನ್ನು ಇಟ್ಟು ನನ್ನನ್ನು ಕಾರ್ಮಿಕ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಿದ ಎಐಟಿಯುಸಿ ರಾಜ್ಯ ಸಮಿತಿಗೆ ಹೃತ್ಪೂರ್ವಕ ಧನ್ಯವಾದಗಳು ತಿಳಿಸಲು ಬಯಸುತ್ತೇನೆ.
ಈ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು,ಹಿತೈಷಿಗಳು ಹಾಗೂ ಅಭಿಮಾನಿ ಕಾರ್ಮಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಎಲ್ಲರೂ ತಮ್ಮ ಪ್ರೀತಿ,ಅಭಿಮಾನ ತೋರಿಸಿದ್ದಕ್ಕಾಗಿ ಸಮಸ್ತ ಹಟ್ಟಿ ಚಿನ್ನದ ಗಣಿ ಕಾರ್ಮಿಕ ವರ್ಗಕ್ಕೆ ಎಐಟಿಯುಸಿ ತಕ್ಕಡಿ ಸಂಘಟನೆ ವತಿಯಿಂದ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇನೆ.
ಚುನಾವಣೆಯಲ್ಲಿ ನಮ್ಮ ತಂಡ ಸ್ವಲ್ಪ ಮತಗಳ ಅಂತರದಿಂದ ಸೋತಿರಬಹುದು ಸೋಲು-ಗೆಲುವು ಸಹಜ. ಕಾರ್ಮಿಕರು ನೀಡಿರುವ ತೀರ್ಪನ್ನು ಗೌರವಿಸುತ್ತಾ, ಯಾವತ್ತಿಗೂ ನಾನು ನಿಮ್ಮೊಂದಿಗೆ ಇದ್ದು ಬರುವ ದಿನಗಳಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ.
ಸಂಘಟನೆ ಕಾರ್ಯಕರ್ತರು, ಕಾರ್ಮಿಕ ಬಂಧುಗಳು ಈ ನಿಮ್ಮ ಪ್ರೀತಿ-ವಿಶ್ವಾಸ ಹೀಗೆ ನಮ್ಮ AITUC ಸಂಘಟನೆಯ ಮೇಲೆ ಇರಲಿ. ಒಟ್ಟಾರೆ ಗೆದ್ದವರು ಜವಾಬ್ದಾರಿಯಿಂದ ಕೆಲಸ ಮಾಡಲು ಸಹಕಾರ ನೀಡೋಣ. ನಾವೆಲ್ಲರೂ ಗಣಿ-ಕಾರ್ಮಿಕರ ಅಭಿವೃದ್ಧಿಗಾಗಿ ಶ್ರಮಿಸೋಣ.AITUC Zindabad ತಮ್ಮ ವಿಶ್ವಾಸಿ ಚಂದ್ರಶೇಖರ್
ವರದಿ : ಶ್ರೀನಿವಾಸ ಮಧುಶ್ರೀ




