Ad imageAd image

ನಮ್ಮ ನೀರು ನಮ್ಮ ಹಕ್ಕು ಎಂಬ ಬೃಹತ್ ಪ್ರತಿಭಟನೆ

Bharath Vaibhav
ನಮ್ಮ ನೀರು ನಮ್ಮ ಹಕ್ಕು ಎಂಬ ಬೃಹತ್ ಪ್ರತಿಭಟನೆ
WhatsApp Group Join Now
Telegram Group Join Now

 

 

——————————————————————————————-ನಮ್ಮ ಜಲಾಶಯ ನಮ್ಮ ಹಕ್ಕು

ಹುಕ್ಕೇರಿ : ನಗರದಲ್ಲಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘದ ಕಾರ್ಯಕರ್ತರು ಪ್ರತಿಭಟನೆ ಜರಗಿಸಿ ಹುಕ್ಕೇರಿ ತಾಲೂಕಿನ ರಾಜಾ ಲಖಾಮ ಗೌಡ ಜಲಾಶಯದಿಂದ ಬೇರೆ ಜಿಲ್ಲೆ ಬೇರೆ ತಾಲೂಕುಗಳಿಗೆ ನೀರು ಕಾಲುವೆಗಳ ಮೂಲಕ ಸರಬರಾಜ ಆಗುತ್ತಿದ್ದು ನಾವು ಜಲಾಶಯದ ಪಕ್ಕ ಇದ್ದರೂ ಕೂಡ ಇವತ್ತು ನಮಗೆ ಕುಡಿಯಲು ಸರಿಯಾಗಿ ನೀರು ಪೊರೈಸುತ್ತಿಲ್ಲ ರಾಜಕಾರಣಿಗಳ ಕುತಂತ್ರಕ್ಕೆ ಹುಕ್ಕೇರಿ ತಾಲೂಕಿನ ಭಾಗದ ಶೇಕಡ 75% ಜಮೀನುಗಳಿಗೆ ಕಾಲುವೆಗಳಿಲ್ಲ ನೀರಿಲ್ಲ ನಮ್ಮ ಕ್ಷೇತ್ರದ ರೈತರು ಹಾಗೂ ಜನಸಾಮಾನ್ಯರು ನೀರು ವಂಚಿತರಾಗಿ ಕಷ್ಟ ನಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ಕಣ್ಣ ಮುಚ್ಚಾಲೆ ಆಟ ಆಡುತ್ತಿದ್ದಾರೆ ಇವತ್ತು ಹುಬ್ಬಳ್ಳಿ ಧಾರವಾಡ ಕೈಗಾರಿಕಾ ಕ್ಷೇತ್ರಗಳಿಗೆ ನಮ್ಮ ಜಲಾಶಯದಿಂದ ನೀರು ಸರಬರಾಜು ಮಾಡಲು ಮುಂದಾಗಿದ್ದಾರೆ ಹಾಗಾದರೆ ನಾವೇನು ಪಾಪ ಮಾಡಿದ್ದೇವೆ ನಮ್ಮ ತಾಲೂಕಿನಲ್ಲಿರುವ ಜಲಾಶಯದ ನೀರು ನಮಗಿಲ್ಲವೇ ಜಲಾಶಯದಿಂದ ಹತ್ತಿರ ಇರುವ ಸುಮಾರು 30 ಕಿಲೋ ಮೀಟರ್ ಅಂತರ ಗ್ರಾಮಗಳಾದ ಅಮ್ಮಣಗಿ, ಎಲಿಮುನ್ನೋಳಿ, ನೇರಲಿ ಕಮತನೂರ, ನಿಡಸೋಸಿ, ಬೋರಗಲ, ಕೇಸ್ತಿ, ಅಟ್ಟಿ ಆಲೂರ, ಮಸರಗುಪ್ಪಿ, ಹೆಬ್ಬಾಳ, ಚಿಕಾಲಗುಡ್ಡ, ಕಣಗಲಾ, ಬಾಡ, ಕರಜಗಾ, ಇನ್ನು ಸಾಕಷ್ಟು ಗ್ರಾಮಗಳಿಗೆ ಕಾಲುವೆ ಗಳಿಲ್ಲ ಹುಕ್ಕೇರಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಆದಷ್ಟು ಬೇಗನೆ ಕಾಲುವೆ ನಿರ್ಮಾಣ ಮಾಡಬೇಕು ಮತ್ತು ಹುಬ್ಬಳ್ಳಿ ಧಾರವಾಡಕ್ಕೆ ನೀರು ಸರಬರಾಜು ಕಾಮಗಾರಿಯನ್ನು ನಿಲ್ಲಿಸಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ರೈತರಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಈ ವೇದಿಕೆಯ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಹಾಂತೇಶ ಕಮತ, ಶಶಿಕಾಂತ ನಾಯಕ, ಗೋಪಾಲ ಮರಬಸನ್ನವರ, ಗುರುಸಿದ್ದ ಮಡಿವಾಳ, ರವಿ ಬಿ ಕಾಂಬಳೆ, ಕೆ ಬಿ ಕುರಬೇಟ, ಸುಬಾಷ ನಾಯಿಕ, ಆರ್ ವ್ಹಿ ಜೋಶಿ,
ಜಿಯಾವುಲ್ಲಾ ವಂಟಮುರಿ, ಬಸವಪ್ರಭು ವಂಟಮುರಿ,ಶಶಿಶೇಖರ ಧಾಮಣೇಮಠ, ರಾಮಪ್ಪ ವಾಸೇದಾರ, ಬಸವರಾಜ ಹುಲಕುಂದ ಸಲಿಂ ಮುಲ್ಲಾ, ಶಾಂತಿನಾಥ ಮಗದುಮ್ಮ, ಮುಂತಾದ ಕಾರ್ಯಕರ್ತರು ಮತ್ತು ಸದಸ್ಯರು ಭಾಗವಹಿಸಿದ್ದರು.

ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!