ಹೆಡ್ಡಿಂಗ್ಲೆ (ಲೀಡ್ಸ್): ಪ್ರವಾಸಿ ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ 371 ರನ್ ಗಳ ಗೆಲುವಿನ ಗುರಿ ದೊರೆತಿದೆ.
ಪಂದ್ಯದ ನಾಲ್ಕನೇ ದಿನದಾಟ ಮುಗಿದಾಗ ಇಂಗ್ಲೆಂಡ್ ತನ್ನ ದ್ವಿತೀಯ ಸರದಿಯಲ್ಲಿ ವಿಕೆಟ್ ನಷ್ಟವಿಲ್ಲದೇ 21 ರನ್ ಗಳಿಸಿತ್ತು. ಇದಕ್ಕೆ ಮುನ್ನ ಭಾರತ ತನ್ನ ದ್ವಿತೀಯ ಸರದಿಯಲ್ಲಿ 364 ರನ್ ಗಳಿಗೆ ಆಲೌಟಾಗಿ ಎದುರಾಳಿ ತಂಡಕ್ಕೆ 371 ರನ್ ಗಳ ಗೆಲುವಿನ ಗುರಿ ನೀಡಿತ್ತು. ಪಂದ್ಯದ ಕಡೆಯ ದಿನ ಇಂಗ್ಲೆಂಡ್ ತನ್ನ ಬಳಿ ಹೊಂದಿರುವ ಎಲ್ಲ ಹತ್ತು ವಿಕೆಟ್ ಗಳ ಸಹಾಯದಿಂದ 350 ರನ್ ಗಳಿಸಬೇಕಿದೆ. ಆದರೆ ಟೆಸ್ಟ್ ಪಂದ್ಯದಲ್ಲಿ ದಿನವೊಂದರಲ್ಲಿ 350 ರನ್ ಗಳನ್ನು ಗಳಿಸಿ ಪಂದ್ಯ ಗೆಲ್ಲುವುದು ಕಠಿಣ.




