ನವದೆಹಲಿ: ಕೆಲವು ವರ್ಷಗಳ ಹಿಂದೆ ನಟಿ ಇಶಾ ಗುಪ್ತಾ ಅವರು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇತ್ತೀಚೆಗೆ ಸಿದ್ಧಾರ್ಥ್ ಕಣ್ಣನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಕಾಣಿಸಿಕೊಂಡಾಗ ನಟಿ ಈ ವದಂತಿಗಳ ಕುರಿತು ಮಾತನಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ನಟಿ-ಮಾಡೆಲ್ ನತಾಶಾ ಸ್ಟಾಂಕೋವಿಕ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಒರ್ವ ಮಗನಿದ್ದಾನೆ. ಆದರೆ, ಕಳೆದ ವರ್ಷ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ತಾವು ವಿಚ್ಛೇಧನ ಪಡೆದಿರುವುದಾಗಿ ಘೋಷಿಸಿದರು.
ಸಂದರ್ಶನದ ಸಮಯದಲ್ಲಿ ಇಶಾ, ಆಗ ಸಂಬಂಧವೊಂದರ ಸಾಧ್ಯತೆ ಇತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ತಿಳಿಸಿದ್ದಾರೆ.
‘ಹೌದು, ನಾವು ಸ್ವಲ್ಪ ಸಮಯದಿಂದ ಮಾತನಾಡುತ್ತಿದ್ದೆವು. ನಾವು ಡೇಟಿಂಗ್ ಮಾಡುತ್ತಿರಲಿಲ್ಲ ಅಂತ ನನಗನ್ನಿಸುತ್ತೆ. ಆದರೆ ಹೌದು, ನಾವು ಎರಡು ತಿಂಗಳು ಮಾತನಾಡುತ್ತಿದ್ದೆವು. ‘ಬಹುಶಃ ಅದು ಆಗಬಹುದು ಅಥವಾ ಆಗದೇ ಇರಬಹುದು’ ಎಂಬ ಹಂತದಲ್ಲಿ ನಾವಿಬ್ಬರೂ ಇದ್ದೆವು. ನಾವು ಡೇಟಿಂಗ್ ಹಂತ ತಲುಪುವ ಮೊದಲೇ ಅದು ಕೊನೆಗೊಂಡಿತು. ಹಾಗಾಗಿ ಅದು ಡೇಟಿಂಗ್ ಅಲ್ಲ. ನಾವು ಒಂದು ಅಥವಾ ಎರಡು ಬಾರಿ ಭೇಟಿಯಾದೆವು, ಅಷ್ಟೇ. ಹೌದು, ನಾನು ಹೇಳಿದಂತೆ, ಅದು ಎರಡು ತಿಂಗಳು ನಡೆಯಿತು ಮತ್ತು ನಂತರ ಕೊನೆಗೊಂಡಿತು’ ಎಂದು ಹೇಳಿದರು.




