ಬಳ್ಳಾರಿ : ಮಧ್ಯಾಹ್ನ 1 ಗಂಟೆಗೆ ಬಳ್ಳಾರಿ ಜಿಲ್ಲಾ ಸಿರುಗುಪ್ಪ ತಾಲೂಕಿನ ತೆಕ್ಕೆಲಕೋಟೆ ಪಟ್ಟಣದ ಸರ್ಕಾರಿ ಪ್ರೌಡ ಬಾಲಕರ ಶಾಲೆ ಆವರಣದಲ್ಲಿ ಕಾನಿಪ ಧ್ವನಿ ವತಿಯಿಂದ ನಡೆದ ಅತಿ ಹೆಚ್ಚು ಅಂಕ ಗಳಿಸಿದ ಎಸ್.ಎಸ್.ಎಲ್.ಸಿ. ಹಾಗೂ ದ್ವೀತಿಯ ಪಿ.ಯು.ಸಿ. ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಸನ್ಮಾನ ಕಾರ್ಯಕ್ರಮದ ಉದಘಾಟನೆಯನ್ನು ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ವಹಿಸಿದಂತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆಯ ಉಪ ನಿರ್ಶಕರಾದ (ಡಿ.ಡಿ.ಪಿ.ಐ) ಉಮಾದೇವಿ, ಬಿ.ಜೆ.ಪಿ.ಮುಖಂಡರಾದ ದರಪ್ಪ ನಾಯಕ,ಕಾನಿಪ ಧ್ವನಿ ಜಿಲ್ಲಾಧ್ಯಕ್ಷರಾದ ಕಂದುಕೂರು ರಾಮುಡು, ವಕೀಲರ ಸಂಘದ ಅಧ್ಯಕ್ಷರಾದ ವೆಂಕೋಬಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಆನಂದಣ್ಣ,ಕಾಂಗ್ರೇಸ್ ಮುಖಂಡರಾದ ಕೊಡ್ಲೆ ಮಲ್ಲಿಕಾರ್ಜುನ,ಕಾನಿಪ ಧ್ವನಿ ರಾಜ್ಯ ಉಪಾಧ್ಯಕ್ಷರು ಹಾಗೂ ಈ ಕಾರ್ಯಕ್ರಮದ ರೂವಾರಿಗಳಾದ ಎಂ.ಇಸಾಕ್,ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷರಾದ ಚಿಕ್ಕಬಳ್ಳಾರಿ ನಾಗಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು,ಮುಖ್ಯ ಶಿಕ್ಷಕರು ನೂರಾರು ವಿಧ್ಯಾರ್ಥಿಗಳು ಹಾಗೂ ಇನ್ನೀತರ ಪ್ರಮುಖರು ಪಾಲ್ಗೊಂಡಂತ ಈ ಅರ್ಥಪೂರ್ಣ ಸಮಾರಂಭದಲ್ಲಿ ಪ್ರತಿಭಾ ವಿದ್ಯಾರ್ಥಿಗಳನ್ನು ಹೃದಯ ಪೂರ್ವಕವಾಗಿ ಸನ್ಮಾನಿಸಲಾಯಿತು.

ಜೊತೆಗೆ ತಮ್ಮ ಉದ್ಗಾಟನೆಯ ನುಡಿಯಲ್ಲಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ನಿರ್ಧಿಷ್ಟ ಗುರಿ,ಸಮಯ ಪ್ರಜ್ಞೆ ಹಾಗೂ ಕಠಿಣ ಪರಿಶ್ರಮದ ಮುಖಾಂತರ ಐ.ಎ.ಎಸ್. ಐ.ಪಿ.ಎಸ್.ಇನ್ನೀತರ ಪ್ರಮುಖ ಉನ್ನತ ಉದ್ಯೋಗಗಳನ್ನು ವಿಧ್ಯಾರ್ಥಿಗಳಾದ ತಾವುಗಳು ಅಳವಡಿಸಿಕೊಂಡರೆ ಖಂಡಿತ ಗುರಿ ಸಾಧಿಸುತ್ತೀರಿ ಹಾಗೂ ಹೆತ್ತವರ ಆಸೆ, ಶಿಕ್ಷಕರಿಗೆ ಕೀರ್ತಿಯನ್ನು ವಿಧ್ಯಾರ್ಥಿಗಳಾದ ತಾವೆಲ್ಲಾ ನೆರವೇರಿಸುತ್ತೀರಿ ಎಂಬ ಆಶಾ ಭಾವನೆಯನ್ನು ವ್ಯಕ್ತಪಡಿಸಿದರು.
ವರದಿ : ರಾಜು ಮುಂಡೆ




