Ad imageAd image

ಜಾತ್ರೆಯಲ್ಲಿ ಲಾ ಬ್ರೇಕ್ ಮಾಡಿದವರಿಗೆ ಪೋಲಿಸರು ಸುಮ್ಮನೆ ಬೀಡುವುದಿಲ್ಲ:DSP ಖಡಕ್ ಎಚ್ಚರಿಕೆ

Bharath Vaibhav
ಜಾತ್ರೆಯಲ್ಲಿ ಲಾ ಬ್ರೇಕ್ ಮಾಡಿದವರಿಗೆ ಪೋಲಿಸರು ಸುಮ್ಮನೆ ಬೀಡುವುದಿಲ್ಲ:DSP ಖಡಕ್ ಎಚ್ಚರಿಕೆ
WhatsApp Group Join Now
Telegram Group Join Now

ಗೋಕಾಕ :ನಗರದಲ್ಲಿ ನಡೆಯುವ ಹತ್ತು ವರ್ಷಗಳ ನಂತರ ನಡೆಯುವ ಗೋಕಾಕ ಜಾತ್ರೆ ನಿಮಿತ್ಯ ನಗರದ ಆದಿಜಾಂಬವ ನಗರದಲ್ಲಿ ಪೋಲಿಸ್ ಅಧಿಕಾರಿಗಳಿಂದ ಶಾಂತಿ ಸಭೆ ನಡೆಯಿತು.

ಈ ಸಭೆಯಲ್ಲಿ ಡಿಎಸ್ಪಿ ರವಿ ನಾಯಕ ಇವರುಜಾತ್ರೆಯಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದ, ನೀಡುವಂತವರ ಉಪದೃವ ಮಾಡುವಂತವರ ಬಗ್ಗೆ ಮಾಹಿತಿ ನೀಡಿದರೆ ನಿಮಗೆ ಬಹುಮಾನ ನೀಡುತ್ತೇವೆ ಮತ್ತು ಅಂತವರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದರು.

ಒಂದು ವೇಳೆ ಜಾತ್ರೆಯಲ್ಲಿ ಉದ್ದೇಶ ಪೂರ್ವಕವಾಗಿ ಯಾರಾದರೂ ಲಾ ಬ್ರೇಕ್ ಮಾಡಿದರೆ ಅಂತವರನ್ನು ಪೋಲಿಸ್ ಇಲಾಖೆ ಸುಮ್ಮನೆ ಬೀಡುವುದಿಲ್ಲ ಎಂದು ಖಡಕ ಎಚ್ಚರಿಕೆ ನೀಡಿದರು.

ಜಾತ್ರೆ ಬರುವುದು ಭಕ್ತಿ ,ಸಂತೋಷದಿಂದ ಆಚರಿಸಲಿಕ್ಕೆ ಹೊರತು ವೈಮನಸ್ಸನ್ನ ಸಾದಿಸಲಿಕ್ಕೆ ಅಲ್ಲ, ನಮಗೆ ಜಾತ್ರೆ ಶಾಂತಿಯಿಂದ ಸಾಗಬೇಕೆಂದು ತಿಳಿಸಿದರು.

 

ಇನ್ನು ಘಟಪ್ರಭಾದ ಸಿಪಿಆಯ್ ಎಚ್,ಡಿ, ಮುಲ್ಲಾ ಇವರು ಮಾತನಾಡಿ ಜಾತ್ರೆಯಲ್ಲಿ ಯಾರಾದರೂ ರೌಡಿಸಂಗಳಂತಹ ಅಹಿತಕರ ಘಟನೆ ಮಾಡಿದರೆ ಮೊದಲು ನಿಮ್ಮ ಕುಟುಂಬ ನಂತರ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ, ಜಾತ್ರೆಯಲ್ಲಿ 2500 ಪೋಲಿಸ್ ಸಿಬ್ಬಂದಿಗಳು ನಗರಕ್ಕೆ ಆಗಮಿಸಲಿದ್ದಾರೆ.

ಎಲ್ಲರಿಗೂ ಪ್ರಿ ಹ್ಯಾಂಡ ಇದೆ, ಜಾತ್ರೆಯಲ್ಲಿ ಶಾಂತಿ ಬಂಗ ಮಾಡಲು ಪ್ರಯತ್ನಿಸಿದರೆ ಅಂತವರ ವಿರುದ್ದ ಯಾವುದೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಂತರ ನಗರ ಸಿಪಿಆಯ್ ಸುರೇಶಬಾಬು ನಗರ ಪಿಎಸ್ಐ ಕೆ ವಾಲಿಕಾರ, ಗ್ರಾಮೀಣ ಪಿಎಸ್ಐ ಕಿರಣ ಮೊಹಿತೆ ಇವರು ಸಭೆ ಉದ್ದೇಶಿಸಿ ಮಾತನಾಡಿದರು ಶಾಂತಿಯಿಂದ ಜಾತ್ರೆ ಆಚರಿಸಿಲು ಎಚ್ಚರಿಕೆ ನೀಡಿದರು.

ಸಮಾಜದ ಹಿರಿಯ ಮುಖಂಡ ತಳದಪ್ಪ ಅಮ್ಮನಗಿ ಇವರು ನಗರದ 31 ವಾರ್ಡಿನಲ್ಲಿ ಯಾರಾದರೂ ಗೂಂಡಾಗೀರಿ ಮಾಡಿದರೆ ಯಾರೆ ಆಗಲಿ ಅವರನ್ನು ಜೈಲಿಗೆ ಕಳಿಸಬೇಕೆಂದರು,

ಈ ಸಂದರ್ಭದಲ್ಲಿ ಆದಿಜಾಂಬವ ನಗರದ ಮುಖಂಡರು,ಯುವಕರು ಈ ಶಾಂತಿ ಸಭೆಯಲ್ಲಿ ಉಪಸ್ಥಿತರಿದ್ದು ಅದಿಕಾರಿಗಳಿಗೆ ತಮ್ಮ ಅನಿಸಿಕೆ ತಿಳಿಸದರು.

ವರದಿ:ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!