ಸಿಂಧನೂರು: ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಡಾ. ಚನ್ನಬಸಯ್ಯ ಸ್ವಾಮಿ ಸುಜಾತ ಹಿರೇಮಠ ದಂಪತಿಗಳ 26ನೇ ವರುಷದ ಮದುವೆ ವಾರ್ಷಿಕೋತ್ಸವ ದಿನದಂದು ಶುಭ ಕೋರಿ ಸನ್ಮಾನಿಸಿದ ಅಲೆಮಾರಿ ಸಿಂದೋಳ್ಳು ಸಮಾಜ ಕಲ್ಯಾಣ ಸಂಘ (ರಿ) ಸಿಂಧನೂರು ದಂಪತಿಗಳನ್ನು ಸನ್ಮಾನಿಸಿ ಗೌರವಿಸಿ ಶುಭ ಕೋರಿದರು
ಈ ಸಮಯದಲ್ಲಿ ಅಲೆಮಾರಿ ಸಿಂದೋಳ್ಳು ಸಮಾಜದ ತಾಲೂಕ ಅಧ್ಯಕ್ಷರಾದ ಶ್ಯಾಮಣ್ಣ ಮಾತನಾಡಿ ಕಾರುಣ್ಯ ಆಶ್ರಮವು ನಮ್ಮ ಸಮಾಜಕ್ಕೆ ನಿರಂತರ ಹಸಿವು ನೀಗಿಸುವ ಕುಟುಂಬವಾಗಿದೆ. ತಾಲೂಕಿನ ವಿವಿಧ ಸಭೆ ಸಮಾರಂಭಗಳಲ್ಲಿ ಉಳಿದಿರುವಂತಹ ಆಹಾರವನ್ನು ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಹಾಗೂ ಕಾರುಣ್ಯ ಆಶ್ರಮವು ಶೇಖರಣೆ ಮಾಡಿ ಸುಮಾರು ವರ್ಷಗಳಿಂದ ನಮ್ಮ ಅಲೆಮಾರಿ ಕುಟುಂಬಗಳಿಗೆ ತಲುಪಿಸುತ್ತಿರುವುದು. ನಮ್ಮ ಸಮಾಜದ ಪ್ರೀತಿಗೆ ಪಾತ್ರವಾಗಿದೆ ಎಂದರು,
ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಿಂಧನೂರಿನ ಸಮಾಜಸೇವಕರು ಖ್ಯಾತ ನೇತ್ರ ತಜ್ಞರಾದ ಡಾ. ಚನ್ನನಗೌಡ. ಆರ್. ಪಾಟೀಲ್ ಮಾತನಾಡಿ ಅಲೆಮಾರಿ ಸಿಂದೋಳ್ಳು ಸಮುದಾಯದ ಬಂಧುಗಳು ಕಾರುಣ್ಯ ಆಶ್ರಮದ ದಂಪತಿಗಳನ್ನು ಸನ್ಮಾನಿಸಿರುವುದು ಇನ್ನೂ ಹೆಚ್ಚಿನ ಸೇವೆಗೆ ಪ್ರೋತ್ಸಾಹಿಸಿದಂತಾಗಿದೇ ಕಾರುಣ್ಯಾಶ್ರಮಕ್ಕೆ ಬೆನ್ನೆಲುಬಾಗಿ ನಾವೆಲ್ಲರೂ ಸದಾವಕಾಲ ಜೊತೆಗಿರುತ್ತೇವೇ ಎಂದು ಭರವಸೆ ನೀಡಿದರು
ಸಂದರ್ಭದಲ್ಲಿ ಹಲವಾರು ಸಂಘ ಸಂಸ್ಥೆಗಳು ಹಿರೇಮಠ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು ಮುಖ್ಯ ಅತಿಥಿಗಳಾಗಿ ಬಶೀರ್ ಯತ್ಮಾರಿ ಕೋಶ್ಯಾಧ್ಯಕ್ಷರು. ಮಲ್ಲಿಕಾರ್ಜುನಯ್ಯ ಸ್ವಾಮಿ ಹಿರೇಮಠ ಕರಡಕಲ್. ಅವಿನಾಶ ದೇಶಪಾಂಡೆ ಆಡಳಿತಾಧಿಕಾರಿಗಳು ಅಶೋಕ ನಲ್ಲ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು. ಮಹಾನಂದಿ ಸ್ವಾಮಿ ನವಲಿ ಹಿರೇಮಠ. ಹಿರಿಯರುಸಲಹೆಗರಾರು. ಭೀಮಾಚಾರಿ. ರಾಜಶೇಖರ ಲಿಂಗಸೂಗೂರು. ಬೀರಪ್ಪ ಲಿಂಗಸೂಗೂರು. ಶರಣಪ್ಪ ಲಿಂಗಸೂಗೂರು. ಊರ್ಮಿಳಾ ನಲ್ಲ ಸಂಸ್ಥಾಪಕ ಅಧ್ಯಕ್ಷರು ಅಕ್ಷಯಹಾರ ಜೋಳಿಗೆ ಸೇವಾ ಟ್ರಸ್ಟ್. ಹಾಗೂ ಅಲೆಮಾರಿ ಸಿಂದೋಳ್ಳು ಸಮುದಾಯದ ಹಿರಿಯರುಗಳಾದ ಸಿದ್ದಪ್ಪ ಸಿಂದೋಳ್ಳು. ಸಣ್ಣ ಜಂಬಣ್ಣ ಸಿಂದೋಳ್ಳು. ಜಂಬಣ್ಣ ಸೈಕಲ್. ಜೆ. ಮಾರೆಪ್ಪ. ಹಾಗೂ ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ. ಜ್ಯೋತಿ. ಮರಿಯಪ್ಪ. ಕರಿಯಪ್ಪ. ಹಾಗೂ ಅಲೆಮಾರಿ ಸಿಂದೋಳ್ಳು ಸಮುದಾಯದ ಗುರು ಹಿರಿಯರು ಉಪಸ್ಥಿತರಿದ್ದರು.
ಬಸವರಾಜ: ಬುಕ್ಕನಹಟ್ಟಿ
ವಿವಾಹ ವಾರ್ಷಿಕೋತ್ಸವ: ಸಿಂಧನೂರು ದಂಪತಿಗಳಿಗೆ ಸನ್ಮಾನ, ಗೌರವ




