ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮದಿಂದ ೩ ಕಿ ಮೀ ಅಂತರದಲ್ಲಿರುವ ಐಗಳಿ ತೋಟದ ಶಾಲೆಯ ರಸ್ತೆಯು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ದಿವ್ಯನಿರ್ಲಕ್ಷದಿಂದ ಸಂಪೂರ್ಣ ಹಾಳಾಗಿದ್ದರಿಂದ ಇಂದು ಗ್ರಾ ಪಂ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಅಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಡ್ರೋಣಾಸ್ ಅಕಾಡೆಮಿ ಅಧ್ಯಕ್ಷ ಹಾಗೂ ಅಲ್ಲಿನ ನಿವಾಸಿ ಕಲ್ಮೇಶ ಆಸಂಗಿ ಮಾತನಾಡಿ, ಗ್ರಾಮದ ಐಗಳಿ ತೋಟದ ಶಾಲೆಯ ಮಕ್ಕಳು ಹಾಗೂ ಆ ರಸ್ತೆಯ ನಿವಾಸಿಗಳು ದಿನನಿತ್ಯ ತಿರುಗಾಡಲು ಬಹಳ ಕಷ್ಟವಾಗುತ್ತಿದೆ, ಯಾವುದಾದರೂ ಅನುದಾನದಲ್ಲಿ ಆ ರಸ್ತೆಯನ್ನು ದುರಸ್ತಿ ಮಾಡಲು ಗ್ರಾಮದ ಮುಖಂಡರಿಗೆ ಮನವಿ ಮಾಡಿದರು.

ನಿವೃತ್ತ ಬ್ಯಾಂಕ ವ್ಯವಸ್ಥಾಪಕರಾದ ಎಂ ಎಸ್ ಹಾಲಳ್ಳಿ ಮಾತನಾಡಿ, ಐಗಳಿ ತೋಟದ ಶಾಲೆಯ ಸುತ್ತಮುತ್ತಲಿನ ಮಕ್ಕಳು ಹಾಗೂ ಜಲನಗರದ ಮಕ್ಕಳು ದಿನನಿತ್ಯ ಇದೇ ರಸ್ತೆಯಿಂದ ಶಾಲೆಗೆ ಹೋಗಬೇಕಿದೆ, ಹಲವಾರು ವರ್ಷಗಳಿಂದ ದುರಸ್ತಿ ಕಾಣದ ರಸ್ತೆ ಇದೀಗ ಸಂಪೂರ್ಣ ಹಾಳಾಗಿದೆ, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲಿ, ಕನಿಷ್ಠಪಕ್ಷ ಮಕ್ಕಳು, ವಯೋವೃದ್ದರಿಗಾಗಿ ರಸ್ತೆ ದುರಸ್ತಿ ಆಗಲಿ ಎಂದರು.

ಮನವಿ ಅರ್ಪಿಸುವ ಸಂದರ್ಭದಲ್ಲಿ ಗ್ರಾ ಪಂ ಸದಸ್ಯರಾದ ಸೋಮಣ್ಣ ಬಂಡರಬಟ್ಟಿ, ಅಲ್ಲಿನ ನಿವಾಸಿಗಳಾದ ಅಪ್ಪಾಸಾಬ ತೆಲಸಂಗ, ಅಪ್ಪಾಸಾಬ ಮುಚ್ಚಂಡಿ, ರಾಮು ಹಾಲಳ್ಳಿ, ಮಹಾದೇವ ತೆಲಸಂಗ, ಸುನೀಲ ತೆಲಸಂಗ, ಕೇದಾರಲಿಂಗ ತೆಲಸಂಗ, ಮಹಾದೇವ ಅಥಣಿ, ಹಣಮಂತ ಬಿರಾದಾರ, ಬಾಲಚಂದ್ರ ಬಾಗಲಕೋಟ, ಶಿವಾನಂದ ನಾವಿ, ಸದಾಶೀವ ಹಾಲಳ್ಳಿ, ಮಹಾದೇವ ನಾವಿ, ಮುಂತಾದವರು ಇದ್ದರು.
ಮಾತನಾಡಿ ಹಲವಾರು ಭಾರಿ ಶಾಸಕರಿಗೆ ಮತ್ತು ಸಂಸದರಿಗೆ ಮನವಿ ಸಲ್ಲಿಸಿದರು ಪ್ರಯೋಜನೆ ಆಗಿಲ್ಲ ನಾವೇ ನಮ್ಮ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ -ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಕಾಂಗ್ರೆಸ್ ಮುಖಂಡರಾದ ಅಪ್ಪಾಸಾಬ ಪಾಟೀಲ




