Ad imageAd image

ಜೆಡಿಎಸ್. ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ನಿಖಿಲ್ ಕುಮಾರಸ್ವಾಮಿಯವರಿಂದ ಚಾಲನೆ

Bharath Vaibhav
ಜೆಡಿಎಸ್. ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ನಿಖಿಲ್ ಕುಮಾರಸ್ವಾಮಿಯವರಿಂದ ಚಾಲನೆ
WhatsApp Group Join Now
Telegram Group Join Now

ಮಾನ್ವಿ: ಪಟ್ಟಣದ ಎ.ಪಿ.ಎಂ.ಸಿ. ಆವರಣದಲ್ಲಿನ ಬೃಹತ್ ವೇದಿಕೆಯಲ್ಲಿ ಜೆಡಿಎಸ್. ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಜೆಡಿಎಸ್ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರು ಹಾಗೂ ಚಲನಚಿತ್ರ ನಟರು ಆದ ನಿಖಿಲ್ ಕುಮಾರಸ್ವಾಮಿ ಮಾತನಾಡಿ .ಜೆಡಿಎಸ್ ಪಕ್ಷದಿಂದ ವಿನೂತನವಾಗಿ ಜನರೊಂದಿಗೆ ಜನತಾದಳ, ಸಶಕ್ತ ಜನತಾದಳ ,ಸಮೃದ್ದ ಕರ್ನಾಟಕ ಹೆಸರಿನಲ್ಲಿ ರಾಜ್ಯಾದ್ಯಾಂತ ಜೆಡಿಎಸ್ ಪಕ್ಷದ ಬಲವರ್ಧನೆಗಾಗಿ ಹಾಗೂ ಸಂಘಟನೆಗಾಗಿ ಪ್ರವಾಸ ಕೈಗೊಂಡಿದ್ದೇನೆ. ಜೆಡಿಎಸ್ ಪಕ್ಷ ಜಾತ್ಯತೀತ ಪಕ್ಷವಾಗಿದೆ ನಮ್ಮ ಪಕ್ಷದಲ್ಲಿ ಎಲ್ಲಾ ಜಾತಿ ಸಮುದಾಯದವರಿಗೆ ಸಮಾನವಾದ ಅವಕಾಶಗಳನ್ನು ನೀಡಿ ದೇವೆಗೌಡರು ನಾಯಕರನ್ನಾಗಿ ರೂಪಿಸಿದರು.

ಆನರಿಗೆ ಕುಮಾರಣ್ಣ ನವರ ಬಗ್ಗೆ ಬರವಸೇ ಇದೆ ಜನರು ಇನ್ನೂ ಅವರ ಆಡಳಿತಕ್ಕಾಗಿ ಕಾಯುತ್ತಿದ್ದಾರೆ. ರಾಜ್ಯ ಸರ್ಕಾರ ಈ ಭಾಗದ ಭತ್ತ,ಜೋಳ ಬೆಳೆದ ರೈತರಿಂದ ಭತ್ತ,ಜೋಳ ಖರೀದಿಸದೆ ಕಣ್ಣಿರುಡುವಂತೆ ಮಾಡುತ್ತಿದ್ದಾರೆ ಕೇಂದ್ರ ಸಚಿವರಾಗಿ ಕುಮಾರಣ್ಣ ಮಾವು ಬೆಳೆಗಾರರಿಗೆ ಕೇಂದ್ರದಿAದ ಉತ್ತಮ ಬೆಲೆ ಕೋಡಿಸಿ ನೆರವಾಗುತ್ತಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ 13 ಸಾವಿರ ಕೋಟಿ ನೀಡಿರುವುದಾಗಿ ಮುಖ್ಯಮಂತ್ರಿಗಳು ಸಭೆಯಲ್ಲಿ ಹೆಳುತ್ತಾರೆ ಅದ್ದರೆ ಈ ಭಾಗದಲ್ಲಿ ಸಂಚಾರ ಮಾಡುತ್ತಿರುವ ನನಗೆೆ ಎಲ್ಲೀಯೂ ಕೂಡ ಹೊಸ ಆಸ್ಪತ್ರೆಗಳು ಕಾಣುತ್ತಿಲ್ಲ,ಆಸ್ಪತ್ರೆಗಳಲ್ಲಿ ವೈದ್ಯರೆ ಇಲ್ಲ, ಸರಿಯಾದ ರಸ್ತೆಗಳೆ ಇಲ್ಲ, ಹಾಗಾದರೆ ಕೆ.ಕೆ.ಆರ್.ಡಿ.ಬಿ.ಗೆ ನೀಡಿದ ಅನುದಾನ ಎಲ್ಲಿಗೆ ಹೋಯಿತು ಎನ್ನುವುದರ ಕುರಿತು ಮುಖ್ಯಮಂತ್ರಿಗಳು ಕೂಡಲೇ ಶ್ವತ ಪತ್ರ ಹೋರಾಡಿಸಬೇಕು, ವಸತಿ ಹಗರಣ ,ವಾಲ್ಮೀಕಿ ಹಗರಣ,ಸೇರಿದಂತೆ ರಾಜ್ಯ ಸರಕಾರ ಹಗರಣದಲ್ಲಿಯೇ ಮುಳಿಗಿದ್ದು ಕಾಂಗ್ರೇಸ್ ಪಕ್ಷದ ಶಾಸಕರೆ ಇಂದು ಬಹಿರಂಗವಾಗಿ ಸರ್ಕಾರದ ವಿರುದ್ದ ಅಸಮಾಧಾನ ಹೋರಹಾಕುತ್ತಿದ್ದಾರೆ.

ಸರ್ಕಾರ ಯಾವ ಕ್ಷಣದಲ್ಲಿಯಾದರು ಪತನವಾಗಬಹುದಾಗಿದೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಕ್ಷವನ್ನು ಬಲಪಡಿಸಿದಲ್ಲಿ ನಮ್ಮ ಪಕ್ಷ 48 ಸ್ಥಾನಗಳಿಗಿಂತಲು ಹೆಚ್ಚಿನ ಸ್ಥಾನವನ್ನು ಪಡೆದೆ ರಾಜ್ಯದಲ್ಲಿ ಕುಮಾರಣನವರು ಮತ್ತೆ ಮುಖ್ಯಮಂತ್ರಿಗಳಾಗುವುದಕ್ಕೆ ಸಾಧ್ಯವಾಗುತ್ತದೆ ಕಾಂಗ್ರೇಸ್ ಪಕ್ಷ ರಾಜ್ಯದ ಜನರಿಗೆ 5 ಗ್ಯಾರಂಟಿಗಳನ್ನು ಘೋಷಿಸಿದರು ಕೂಡ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿಲ್ಲ ಕುಮಾರಣ್ಣ ನವರು ಮತ್ತೆ ಆಧಿಕಾರಕ್ಕೆ ಬರಲಿದ್ದಾರೆ ಉತ್ತಮ ಆಡಳಿತದೊಂದಿಗೆ ಪ್ರತಿ ತಾಯಂದಿರಿಗೆ ಮಾಸಿಕ 5ಸಾವಿರ ನೀಡಲಿದ್ದಾರೆ.

ಪಂಚಗ್ಯಾರAಟಿಗಳ ಜೋತೆಗೆ ಉತ್ತಮ ಆಡಳಿತ ನೀಡಲಿದ್ದಾರೆ ರಾಜ್ಯದಲ್ಲಿ ಪ್ರವಾಸ ಮಾಡುತ್ತಿರುವುದು ರಾಜ್ಯಾಧ್ಯಕ್ಷರಾಗುವುದಕ್ಕಲ್ಲ ಪಕ್ಷವನ್ನು ಸದೃಡಗೊಳ್ಳಿಸುವುದಕ್ಕಾಗಿ ನಾನು ಮೂರುಬಾರಿ ಸೋತ್ತಿರಬಹುದು ಅದ್ದರೆ ಇಲ್ಲಿ ಸೋಲು ಗೇಲುವು ಮುಖ್ಯ ಅಲ್ಲ ಜನರ ಹೃದಯದಲ್ಲಿ ಸ್ಥಾನಗಳಿಸುವುದಕ್ಕಾಗಿ ನಾನು ನಿರಂತರವಾಗಿ ಹೋರಾಟ ಮಾಡುತ್ತೇನೆ . ದೇವೆಗೌಡರ ಗರಡಿಯಲ್ಲಿ ಬೆಳೆದ ಅನೇಕ ನಾಯಕರು ಇಂದು ಪಕ್ಷವನ್ನು ಬಿಟ್ಟು ಅಧಿಕಾರ ಪಡೆದಿರಬಹುದು ಅದರೆ ಜೆಡಿಎಸ್ ಪಕ್ಷ ಕಾರ್ಯಕರ್ತರ ಪಕ್ಷವಾಗಿದ್ದು ಪಕ್ಷವನ್ನು ಮುಗಿಸುವುದಕ್ಕೆ ಸಾಧ್ಯವಿಲ್ಲ ದೇವದುರ್ಗದಲ್ಲಿ ಬಲಾಡ್ಯ ಅಭ್ಯರ್ಥಿಯ ವಿರುದ್ದ ಇಂದು ಸಾಮಾನ್ಯ ಮಹಿಳೆ ಕರೆಮ್ಮ ಗೇಲುವು ಸಾಧಿಸುವುದಕ್ಕೆ ಕ್ಷೇತ್ರದಲ್ಲಿ ದೇವೆಗೌಡರು ತಮ್ಮಅವಧಿಯಲ್ಲಿ ಕೈಗೊಂಡ ನೀರಾವರಿ ಯೋಜನೆಗಳೇ ಕಾರಣವಾಗಿದೆ ಜೂ. 27 ರಂದು ದೇವೆಗೌಡರವರು ದೇವದುರ್ಗ ತಾಲೂಕಿಗೆ ನೀಡಿದ ನೀರಾವರಿ ಯೋಜನೆಗಳಿಗಾಗಿ ಅಲ್ಲಿನ ಜನರು ದೇವೆಗೌಡರ ಮೂರ್ತಿ ಸ್ಥಾಪನೆಯನ್ನು ಸ್ವತಃ ದೇವೆಗೌಡರಿಂದಲೇ ಮಾಡಿಸುತ್ತಿದ್ದಾರೆ ಅಲ್ಲಿ ನಾನು ಕೂಡ ಭಾಗವಹಿಸಬೇಕಾಗಿದೆ ಹಾಗೂ ಕಲ್ಯಾಣ ಕರ್ನಾಟಕ ,ಕಿತ್ತೂರು ಕರ್ನಾಟಕದಲ್ಲಿಯೂ ಕೂಡ ಜೆ.ಡಿ.ಎಸ್. ಪಕ್ಷಕ್ಕೆ ಪ್ರಮಾಣಿಕ ಕಾರ್ಯಕರ್ತರಿದ್ದಾರೆ ಅವರನ್ನು ಮುಂಬರುವ ಗ್ರಾಮ ಪಂಚಾಯಿತಿ ,ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಿಗೆ ಪಕ್ಷದಿಂದ ನಿಲ್ಲಿಸಿ ಗೇಲ್ಲಿಸಿ ಕೊಂಡು ಬರುವುದಕ್ಕೆ ನನ್ನ ಹೋರಾಟವಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ ನೀರಾವರಿ ತಜ್ಞರೆಂದು ಕರೆಸಿಕೊಳ್ಳುವ ಸಚಿವ ಬೋಸರಾಜುರವರೆ ಟಿ.ಎಂ.ಸಿ ಎಂದರೇನೆ ಗೋತ್ತಿಲ್ಲ ನಾವು ಶಾಸಕರಾಗಿದ್ದ ವೇಳೆ 5 ವರ್ಷದಲ್ಲಿ 9 ಬೆಳೆಗಳಿಗೆ ಕಾಲುವೆ ನೀರು ನೀಡಿದೇವೆ ಅದ್ದರೆ ಇಂದು ನಿಮ್ಮಿಂದ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ, ನಮ್ಮ ವಾಲ್ಮೀಕಿ ಸಮುದಾಯದವರ ಅನುದಾನದ ಹಣವನ್ನು ರಾಯಚೂರು,ಬಳ್ಳಾರಿ, ತೆಲಂಗಣ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೇಲುವಿಗೆ ಬಳಸಿದ್ದಿರ ನಮ್ಮ ಸಮುದಾಯದ ಮೀಸಲು 15 ಕ್ಷೇತ್ರಗಳಲ್ಲಿ ವಾಲ್ಮೀಕಿ ಸಮುದಾಯದವರು ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಉತ್ತರ ನೀಡೇ ನೀಡುತ್ತಾರೆ.

ನೀವು 25 ವರ್ಷಗಳಲ್ಲಿ ಮಾಡದೆ ಇರುವ ಅಭಿವೃದ್ದಿ 5 ವರ್ಷಗಳಲ್ಲಿ ಮಾಡಿರುವುದಕ್ಕೆ ನೀವು ಮತದಾರರಿಗೆ ಹಣ ನೀಡಿ ನನ್ನನು ಸೋಲಿಸಿದ್ದಿರ, ಸಿರವಾರ ತಾಲೂಕಿನ ಅಭಿವೃದ್ದಿಗೆ ಸಾಕಷ್ಟು ಕೋಡುಗೆ ನೀಡಿದ್ದೇನೆ ನೂತನ ಬಸ್ ನಿಲ್ದಾಣ, ಸೇರಿದಂತೆ ಹಲವು ಯೋಜನೆಗಳನ್ನು ಜಾರಿ ಮಾಡಿದೇನೆ, ಮಾನ್ವಿ ಕ್ಷೇತ್ರದಲ್ಲಿ ನೂತನ ಮಿನಿ ವಿಧಾನಸೌಧ 10 ಕೋಟಿ ಅನುದಾನ ನೀಡಿ ಟೆಂಡರ್ ಆಗಿರುವ ಕಾಮಗಾರಿಯನ್ನು ಮರು ಟೆಂಡರ್ ಕರೆದಿದ್ದಿರ, ಜನರ ಹೃದಯದಲ್ಲಿ ನಿಖಿಲ್ ಕುಮಾರ ಸ್ವಾಮಿ ಇದ್ದರೆ ಮುಂಬರುವ 2028 ರ ಚುನಾವಣೆಯಲ್ಲಿ ನಿಮ್ಮ ದುಡ್ಡಿನ ಆಟ ನಡೆಯೋಲ್ಲ ಮಾನ್ವಿಗೆ ರಾಜಣ್ಣ, ರಾಜ್ಯಕ್ಕೆ ಕುಮಾರಣ್ಣ ಎಂದು ಜನರು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ ಜಿಲ್ಲೆಯಲ್ಲಿ ಜೋಳ ಬೆಳೆದ ರೈತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ, ರೈತರ ಜೀವದ ಜೋತೆ ಸರ್ಕಾರ ಚೆಲ್ಲಾಟ ವಾಡುತ್ತಿದೆ. 10ಸಾವಿರ ಕ್ವೀಂಟಾಲ್ ಜೋಳ ಖರೀದಿ ಬಾಕಿ ಇದೆ. ತುಂಗಭದ್ರ ಜಲಾಶಯದಲ್ಲಿ 45 ಟಿ.ಎಂ.ಸಿ ನೀರು ಸಂಗ್ರಹವಾಗಿದ್ದು ನಿತ್ಯ ನೀರು ಹರಿದುಬರುತ್ತಿದೆ ಅದ್ದರೆ ನೀರಾವರಿ ತಜ್ಞ ಕನ್ಹಯ್ಯನಾಯ್ಡು ನೀಡಿದ ಸೂಚನೆಯಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬರವಸೆ ನೀಡಿದಂತೆ ಜಲಶಯಕ್ಕೆ ಗೇಟ್ ಗಳನ್ನು ಅಳವಡಿಸದೆ ಇರುವುದರಿಂದ ನೀರು ಸಂಗ್ರಹಣೆಗೆ ತೊಂದರೆಯಾಗುತ್ತಿದೆ. ರೈತರಿಗೆ ಹೆದರಿ ಬೆಂಗಳೂರಿನಲ್ಲಿ ಐ.ಸಿ.ಸಿ.ಸಭೆ ನಡೆಸಲಾಗುತ್ತಿದೆ.ಸಿದ್ದರಾಮಯ್ಯನವರೆ ಹಣಕಾಸಿನ ಮಂತ್ರಿಯಾಗಿದ್ದರು ಪ.ಜಾತಿ.ಪ.ವರ್ಗಗಳ ಅನುದಾನ ದುರುಪಯೋಗವಾಗುತ್ತಿರುವುದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದರೆ ಹೇಗೆ. ಮುಂದಿನ ಚುನಾವಣೆಯಲ್ಲಿ ರಾಜಾ ವೆಂಕಟಪ್ಪನಾಯಕರೆ ಜೆಡಿಎಸ್ ಪಕ್ಷದ ಅಭ್ಯಾರ್ಥಿಯಾಗಲಿದ್ದಾರೆ ಅವರನ್ನು ಗೇಲಿಸುವ ಜವಾಬ್ದಾರಿ ಮಾತ್ರ ಪಕ್ಷದ ಕಾರ್ಯಕರ್ತರದ್ದು ಎಂದು ತಿಳಿಸಿದರು.
ಹಗರಿಬೋಮ್ಮನಾಹಳ್ಳಿ ಶಾಸಕ ನೇಮಿರಾಜ ನಾಯ್ಕ್, ಮಾಜಿ ಸಚಿವ ಹನುಮಂತಪ್ಪ ಅಲ್ಕೋಡ್ ಮಾತನಾಡಿದರು.
ಮಾನ್ವಿ ಪಟ್ಟಣಕ್ಕೆ ಆಗಮಿಸುವ ರಾಜ್ಯ ಜೆಡಿಎಸ್. ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಸಿಂಧನೂರು ರಸ್ತೆಯಲ್ಲಿನ ಕರಡಿಗುಡ್ಡ ವೃತ್ತದಲ್ಲಿ ತಾ.ಜೆ.ಡಿಎಸ್. ಪಕ್ಷದಿಂದ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ವೇದಿಕೆವರೆಗೂ ನೂರಾರು ಜೆಡಿಎಸ್ ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡರು. ವೇದಿಕೆಯಲ್ಲಿ ಜೆಡಿಎಸ್ ತಾಲೂಕು ಘಟಕದಿಂದ ನಿಖಿಲ್ ಕುಮಾರ ಸ್ವಾಮಿಯವರಿಗೆ ಬೃಹತ್ ಹೂವಿನ ಹಾರ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.
ರಾಜ್ಯ ಜೆ.ಡಿ.ಎಸ್. ಯುವ ಘಟಕದ ರಾಜ್ಯ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ, ರಾಜಾ ಮಹೇಂದ್ರ ನಾಯಕ ರಾಜಾ ಅದರ್ಶನಾಯಕ,ರಾಜ್ಯ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿರಾಮೇಗೌಡ,ಮಹಾಂತೇಶ್ ಪಾಟೀಲ್ ಅತ್ತನೂರು, ಸಿದ್ದು ಬಂಡಿ ,ನರಸೀಂಹನಾಯಕ, ಬಳ್ಳಾರಿ ಜೆಡಿಎಸ್ ಅಧ್ಯಕ್ಷರಾದ್ ಮಿನ್ನಾಳ್ಳಿ ತಾಯಣ್ಣ, ಜನತಾದಳ ಜಾತ್ಯತೀತ ಪಕ್ಷದ ಮಾನ್ವಿ ತಾ.ಅಧ್ಯಕ್ಷರಾದ ಡಾ. ಈರಣ್ಣ ಮರ್ಲಟ್ಟಿ ,ಸಿರವಾರ ತಾಲೂಕ ಜೆ.ಡಿ.ಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ತಾ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪಿ.ರವಿಕುಮಾರ ವಕೀಲರು. ತಾ. ಜೆಡಿಎಸ್ ಪಕ್ಷದ ಮುಖಂಡರಾದ ಖಲೀಲ್ ಖುರೇಶಿ, ಎಚ್.ಮೌನೇಶ, ಬಸನಗೌಡ ಬೆಟ್ಟದೂರು, ವಿಜಯ ಕುಮಾರ, ಸುಭಾನ್ ಬೇಗ್, ಶೌಕತ್ ಅಲಿ, ನಾರಾಯಣರಾವ್, ಶಿವರಾಮರೆಡ್ಡಿ, ದೇವರಾಜನಾಯಕ ಇದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!