ಮಾನ್ವಿ : ತಾಲ್ಲೂಕಿನ ಬ್ಯಾಗವಾಟ್ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮರಮ್ಮ ವಿರುದ್ದ ಮಂಡಿಸಲಾದ ಅವಿಶ್ವಾಸ ನಿರ್ಣಯಕ್ಕೆ ಕೋರಂ ಕೋರತೆಯಿಂದಾಗಿ ಸೋಲಾಗಿದ್ದು ಹಾಲಿ ಅಧ್ಯಕ್ಷೆ ಅಮರಮ್ಮ ಬಾಕಿ ಇರುವ ೬ ತಿಂಗಳ ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯುವುದಕ್ಕೆ ಅವಕಾಶ ದೊರೆತಂತಾಗಿದೆ.
ಬ್ಯಾಗವಾಟ ಗ್ರಾಮದ ಗ್ರಾಮ ಪಂಚಾಯಿತಿಯ ಹಾಲಿ ಅಧ್ಯಕ್ಷರಾದ ಅಮರಮ್ಮ ರವರ ವಿರುದ್ದ ೧೨ ಗ್ರಾಮ ಪಂಚಾಯಿತಿ ಸದಸ್ಯರು ರಾಯಚೂರು ಸಹಾಯಕ ಆಯುಕ್ತರಿಗೆ ಗ್ರಾ.ಪಂ.ಅಧ್ಯಕ್ಷ ವಿರುದ್ದ ಅವಿಶ್ವಸ ನಿಲುವಳಿ ಮಂಡಿಸಿ ಪತ್ರ ನೀಡಿದರಿಂದ ಶುಕ್ರವಾರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಲೆ ನೇತೃತ್ವದಲ್ಲಿ ಅವಿಶ್ವಸ ನಿಲುವಳಿಗಾಗಿ ಅವಕಾಶ ನೀಡಿ ಸಭೆ ಕರೆದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಒಟ್ಟು ೧೬ ಸದಸ್ಯ ಬಲದಲ್ಲಿ ಸದಸ್ಯೆ ವಿದ್ಯಾಶ್ರೀ ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ಉಳಿದ ೧೫ ಸದಸ್ಯರಲ್ಲಿ ಅವಿಶ್ವಸ ನಿರ್ಣಯ ಮಂಡಿಸಿದ ಸದಸ್ಯರಲ್ಲಿ ಯಾವೋಬ್ಬ ಸದಸ್ಯರು ಕೂಡ ನಿಗದಿತ ಸಮಯದ ಒಳಗಾಗಿ ಸಭೆಗೆ ಹಾಜರಾಗದೆ ಇದ್ದದರಿಂದ ಅಧ್ಯಕ್ಷರ ವಿರುದ್ದದ ಅವಿಶ್ವಾಸ ನಿರ್ಣಯಕ್ಕೆ ಕೊರಂ ಕೋರತೆ ಹಿನ್ನೆಲೆಯಲ್ಲಿ ಸೋಲಾಗಿರುವುದಾಗಿ ಹಾಗೂ ಹಾಲಿ ಅಧ್ಯಕ್ಷೆ ಅಮರಮ್ಮನವರೆ ಮುಂದುವರೆಯಲಿದ್ದಾರೆ ಎಂದು ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಲೆ ತಿಳಿಸಿದರು
ಬ್ಯಾಗವಾಟ ಗ್ರಾ.ಪಂ. ಪಿ.ಡಿ.ಒ. ಶಿವುಕುಮಾರ್, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಬಸವರಾಜ್, ಕಾರ್ಯದರ್ಶಿ ವಿಜಯಕುಮಾರ್, ಚನ್ನಬಸವ ಸೇರಿದಂತೆ ಗ್ರಾಪಂ ಸಿಬ್ಬಂದಿಗಳು ಇದ್ದರು.
27-ಮಾನ್ವಿ-04:
ಮಾನ್ವಿ : ತಾಲ್ಲೂಕಿನ ಬ್ಯಾಗವಾಟ್ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮರಮ್ಮ ವಿರುದ್ದ ಮಂಡಿಸಲಾದ ಅವಿಶ್ವಾಸ ನಿರ್ಣಯ ಸಭೆಯಲ್ಲಿ ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಲೆ ಭಾಗವಹಿಸಿದರು.
ಬ್ಯಾಗವಾಟ್ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ದದ ಅವಿಶ್ವಾಸಕ್ಕೆ ಸೋಲು




