ಮಾನ್ವಿ : ತಾಲೂಕಿನ ಪೋತ್ನಾಳ್ ಗ್ರಾಮದಲ್ಲಿನ ಗ್ರಾಮ ಪಂಚಾಯತಿ ಆವರಣದಲ್ಲಿ ಖರಾಬಾದಿನ್ನಿ ಗ್ರಾಮದ ನೂರಾರು ನರೇಗಾ ಕೂಲಿ ಕಾರ್ಮಿಕರು ವಿವಿಧ ಬೇಡಿಕೆ ಈಡೆರಿಕೆಗಾಗಿ ಪ್ರತಿಭಟನೆ ನಡೆಸಿದರು.
ಖರಾಬಾದಿನ್ನಿ ಗ್ರಾಮದ ಕೂಲಿ ಕಾರ್ಮಿಕ ಮಹಿಳೆ ಮಂಜಮ್ಮ ಮಾತನಾಡಿ ಪೋತ್ನಾಳ್ ಗ್ರಾಮ ಪಂಚಾಯಿತಿ ವತಿಯಿಂದ ಖರಾಬದಿನ್ನಿ ಗ್ರಾಮದಲ್ಲಿ ನಾಲ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ ಈ ಕಾಮಗಾರಿಯು ನಡೆಯುವ ಸ್ಥಳ ಗ್ರಾಮದಿಂದ ಬಹಳ ದೂರ ಇರುವುದರಿಂದ ಮಹಿಳೆಯರು, ವೃದ್ದರು.ಅಂಗವಿಕಲರು ಕೇಲಸದ ಸ್ಥಳಕ್ಕೆ ತೆರಳುವುದಕ್ಕೆ ತೊಂದರೆಯಾಗುವುದರಿAದ ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಹತ್ತಿರವಿರುವ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳಿ ಗ್ರಾಮ ಪಂಚಾಯಿತಿ ಇಂದ ಬೆಳ್ಳಿಗೆ ೭ ಕ್ಕೆ ಹಾಗೂ ಸಂಜೆ ೪ ಕ್ಕೆ ಎರಡು ಬಾರಿ ಹಾಜಾರತಿ ಪಡೆಯುತ್ತಿರುವುದರಿಂದ ಹೆಚ್ಚಿನ ಸಮಯ ಕೇಲಸದ ಸ್ಥಳದಲ್ಲಿಯೇ ಇರಬೇಕಾಗಿದೆ ಕೇಲಸದ ಸ್ಥಳದಲ್ಲಿ ಕುಡಿಯುವ ನೀರು,ನೆರಳಿನ ವ್ಯವಸ್ಥೆ ಮಾಡಿಲ್ಲ. ಕಾಮಗಾರಿಯನ್ನು ಬೇಗ ಮುಗಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಉದ್ಯೋಗ ಖಾತ್ರಿ ನಿಯಮದಂತೆ ಶೇ೫೦ ರಷ್ಟು ಕೇಲಸ ಮಾಡಿದರು ಕೂಡ ಶೇ ೧೦೦ ರಷ್ಟು ಕೂಲಿ ಹಾಕಬೇಕು ಅದ್ದರೆ ಅಧಿಕಾರಿಗಳು ಕಡಿಮೆ ಮೋತ್ತದಲ್ಲಿ ಕೂಲಿ ಹಾಕುತ್ತಿದ್ದಾರೆ ಎಂದು ಅರೋಪಿಸಿದರು.
ಖರಾಬಾದಿನ್ನಿ ಗ್ರಾಮದ ಕೂಲಿ ಕಾರ್ಮಿಕರಾದ ಮಂಜಮ್ಮ, ಮಲ್ಲಮ್ಮ, ಬಸಮ್ಮ, ಶಾಂತಮ್ಮ, ಯಲ್ಲಮ್ಮ, ಸಿದ್ದಮ್ಮ, ಜಾಲಾಲಭಿ, ಶಿವಮ್ಮ, ಮೂಕಮ್ಮ, ನಾಗರಾಜ, ಅಮರೇಶ ಜೇಡಿ, ಅಯ್ಯಪ್ಪ, ಮಹಾಂತೇಶ, ಸತೀಶ, ಗಾದಿಲಿಂಗಪ್ಪ, ಹಂಪಯ್ಯ ಬಾದರ್ಲಿ ಸೇರಿದಂತೆ ನೂರಾರು ಕೂಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಸವರಾಜ ಕೂಲಿ ಕಾರ್ಮಿಕರಿಂದ ಮನವಿ ಸ್ವೀಕರಿಸಿ ಪರಿಶೀಲಿಸುವುದಾಗಿ ಬರವಸೇ ನೀಡಿದ ನಂತರ ಕೂಲಿ ಕಾರ್ಮಿಕರು ಪ್ರತಿಭಟನೆಯನ್ನು ಹಿಂಪಡೆದರು.
27-ಮಾನ್ವಿ-03:
ಮಾನ್ವಿ: ತಾಲೂಕಿನ ಪೋತ್ನಾಳ್ ಗ್ರಾಮದಲ್ಲಿನ ಗ್ರಾಮ ಪಂಚಾಯತಿ ಆವರಣದಲ್ಲಿ ಖರಾಬಾದಿನ್ನಿ ಗ್ರಾಮದ ನೂರಾರು ನರೇಗಾ ಕೂಲಿ ಕಾರ್ಮಿಕರು ವಿವಿಧ ಬೇಡಿಕೆ ಈಡೆರಿಕೆಗಾಗಿ ಪ್ರತಿಭಟನೆ ನಡೆಸಿದರು.
ಖರಾಬಾದಿನ್ನಿ ಗ್ರಾಮದ ನರೇಗಾ ಕೂಲಿ ಕಾರ್ಮಿಕರಿಂದ ಪ್ರತಿಭಟನೆ




