ಅರಸೀಕೆರೆ: “ಸ್ನೇಹ ಆಕಸ್ಮಿಕ ಅಗಲಿಕೆ ಅನಿವಾರ್ಯ” ಎಂಬ ಹಾಗೆ ವ್ಯಕ್ತಿ ಯಾವತ್ತು ಶಾಶ್ವತ ಅಲ್ಲ. ಆದರೆ ಅವರು ಮಾಡಿದ ಉತ್ತಮ ಕೆಲಸ ನಮ್ಮೂಂದಿಗೆ ಸಹ ಅಚ್ಚು ಹಸಿರಾಗಿರುತ್ತದೆ ಎಂದು ಶಾಖಾ ಪ್ರಬಂಧಕ ರಿಷಿ ಚರಣ್ ಅಭಿಪ್ರಾಯ ಪಟ್ಟರು.
ನಗರದ ಜೀವ ವಿಮಾ ನಿಗಮದ ಕಛೇರಿಯಲ್ಲಿ ಆಯೋಜಿಸಿದ್ದ ಉಪಶಾಖಾಧಿಕಾರಿ ಶ್ರೀನಿವಾಸ್ ಅವರ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು ಕಳೆದ ಮೂರುವರೆ ವರ್ಷಗಳ ಕಾಲ ಈ ಶಾಖೆಯಲ್ಲಿ ರಾಷ್ಟ್ರ ಮಟ್ಟದ ಗುರಿ ಸಾಧನೆಗೆ ಇವರ ಪಾತ್ರ ಅಪಾರ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಸಿಎಲ್ಐ ಅಧಿಕಾರಿ ಲೋಕೇಶ್ ಮಾತನಾಡಿ ಶ್ರೀನಿವಾಸ್ ಒಬ್ಬ ವಿಚಾರವಂತ ಹಾಗು ಬುದ್ಧಿ ಚುರುಕುಳ್ಳ ವ್ಯಕ್ತಿ ಎಂದು ಹೇಳಿದರು ಈ ಸಂದರ್ಭದಲ್ಲಿ ಅರಸೀಕೆರೆ ಶಾಖೆಯಲ್ಲಿ ಪ್ರಪ್ರಥಮ ಎಂ,ಡಿ,ಆರ್,ಟಿ, ಸಾಧನೆ ಮಾಡಿದ್ದ ಬಸವರಾಜು ಅವರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಮಹಿಳಾ ಏಜೆಂಟ್ ರು ಶ್ರೀನಿವಾಸ್ ದಂಪತಿಗಳಿಗೆ ಸನ್ಮಾನಿಸಲಾಯಿತು. ಇದೆ ಸಂದರ್ಭದಲ್ಲಿ ಕುಂದುರು ಶಿವಮೂರ್ತಿ,ನರೇಂದ್ರ,ಬೆಂಡೆಕೆರೆ ನಾಗರಾಜ್,ರಾಮಚಂದ್ರ,ಗಣೇಶ್, ವಸಂತಕುಮಾರಿ, ರಾಜೇಶ್ವರಿ,ಆಶಾ, ಇತರರು ಮಾತನಾಡಿದರು. ಕಡೆಯಲ್ಲಿ ಉಪಶಾಖಾಧಿಕಾರಿ ಶ್ರೀನಿವಾಸ್ ಮಾತನಾಡಿ ಗುರಿ ಮತ್ತು ನಿಷ್ಠೆ ಪ್ರಾಮಾಣಿಕತೆ,ಸೇವೆ ಇವುಗಳನ್ನು ಪಾಲಿಸಿದ್ದಾರೆ ಆದರೆ ಪಾಲಿಸಿ ತಾನಾಗಿಯೇ ಬರುತ್ತದೆ ಎಂದು ಹೇಳಿದರು.
ವರದಿ: ರಾಜು ಅರಸಿಕೆರೆ




