ಮೈಸೂರು : ಸಿಎಂ ಸಿದ್ದರಾಮಯ್ಯ ಬದಲಾವಣೆ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.ಈ ಬಾರಿಯ ದಸರಾವನ್ನು ಸಿದ್ದರಾಮಯ್ಯ ಮಾಡುವುದಿಲ್ಲ.ಹೊಸ ಮುಖ್ಯಮಂತ್ರಿಯೇ ದಸರಾ ಮಾಡುತ್ತಾರೆ ಎಂದು ಅಶೋಕ್ ಹೇಳಿದ್ದಾರೆ.
ಮೈಸೂರಲ್ಲಿ ಮಾತಾಡಿದ ವಿಪಕ್ಷ ನಾಯಕ ಅಶೋಕ್,ಸಿಎಂ ಬದಲಾವಣೆ ನಿಶ್ಚಿತವಾಗಿದೆ.ಶಾಸಕರು ಸಚಿವರು ಈಗ ಅದನ್ನೇ ಹೇಳುತ್ತಿದ್ದಾರೆ.ಅಧಿಕಾರ ಹಸ್ತಾಂತರ ಮೊದಲೇ ನಿಶ್ಚಯವಾಗಿದೆ.ಆದರೂ ಸಿದ್ದರಾಮಯ್ಯ, ಏನೂ ಆಗಿಲ್ಲ ಅನ್ನೋ ರೀತಿ ಮಾತನಾಡುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ ಅಧಿಕಾರದ ಕಿತ್ತಾಟ ತಾರಕಕ್ಕೆ ಏರಿದೆ.ಈ ಭ್ರಷ್ಟ ಸರ್ಕಾರ ಯಾವಾಗ ಕಿತ್ತು ಹೋಗುತ್ತದೆ ಎಂದು ಜನರು ಕಾಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ. ಮುಂಬರುವ ದಸರಾವನ್ನು ಸಿಎಂ ಸಿದ್ದರಾಮಯ್ಯ ಮಾಡೋದಿಲ್ಲ. ದಸರಾದ ಒಳಗೆ ಸಿಎಂ ಬದಲಾವಣೆ ಆಗಲಿದೆ.ನಾನು ಈಗಾಗಲೇ ಸದನದಲ್ಲೂ ಹೇಳಿದ್ದೇನೆ. ಸಿಎಂ ಬದಲಾವಣೆ ಆಗಿಯೇ ಆಗತ್ತದೆ.
ಈಗಾಗಲೇ ಕುರ್ಚಿಗೆ ಕಚ್ಚಾಟ ನಡೆಯುತ್ತಿದೆ.ಇದು ಕೇವಲ ಟ್ರೈಲರ್ ಅಷ್ಟೇ.ಮುಂದಿನ ದಿನಗಳಲ್ಲಿ ಪಿಚ್ಚರ್ ಬರುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.




