ಸೇಡಂ: ತಾಲೂಕಿನ ರಂಜೊಳ್ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣವನ್ನು ಕೇವಲ ಕಸದ ತೊಟ್ಟಿಯಂತೆ ಆಗಿದೆ.
ಇದು ಇವತ್ತಿನಿಂದ ಅಲ್ಲಾ ಸುಮಾರು ವರ್ಷಗಳಿಂದ ಈ ಬಸ್ ನಿಲ್ದಾಣಕ್ಕೆ ಈ ಸ್ಥಿತಿಯಿದೆ.
ಬಸ್ ನಿಲ್ದಾಣವನ್ನು ಕೇವಲ ಕಲ್ಲು , ಮಣ್ಣು, ಕಸ ಸೇರಿದಂತೆ ಇನ್ನಿತರ ರೀತಿಯಲ್ಲಿ ಉಪಯೋಗಿಸುವಂತೆ ಆಗಿದೆ.
ರಂಜೊಳ್ ಗ್ರಾಮವು ಇಡೀ ತಾಲೂಕಿನಲ್ಲಿ ಅತಿ ದೊಡ್ಡ ಗ್ರಾಮಗಳಲ್ಲಿ ಇದೊಂದಾಗಿದೆ ಅಷ್ಟೇ ಅಲ್ಲದೆ ಸರ್ವಧರ್ಮ ಸಮನ್ವಯ ಹಬ್ಬವಾದ ಮೊಹರಂ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಪ್ರತಿ ವರ್ಷ ಮೊಹರಂ ಹಬ್ಬದ ನಿಮಿತ್ಯ ಸುತ್ತಮುತ್ತಲಿನ ಹಳ್ಳಿಗಳ ಜನರು ಅಷ್ಟೇ ಅಲ್ಲದೆ ವಲಸೆ ಹೋಗಿರುವ ಕಾರ್ಮಿಕರು ಸಹ ಆಗಮಿಸಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಊರಲ್ಲಿ ಒಂದು ಸಾರ್ವಜನಿಕ ಬಸ್ ನಿಲ್ದಾಣವು ಸರಿಯಾದ ರೀತಿಯಲ್ಲಿ ಇಲ್ಲವೆಂದರೆ ಸಾರ್ವಜನಿಕರಿಗೆ ಅದೆಷ್ಟೋ ತೊಂದರೆ ಆಗುತ್ತದೆ.
ಅಷ್ಟೇ ಅಲ್ಲದೆ ಶಾಲಾ ಮಕ್ಕಳಿಗೆ ಹಾಗೂ ಸೇಡಂ ಕಾರ್ಖಾನೆಗೆ ಹೋಗುವ ಕಾರ್ಮಿಕರಿಗೆ ತುಂಬಾ ತೊಂದರೆ ಆಗುತ್ತಿರುವುದು ಅಧಿಕಾರಿಗಳು ಕಣ್ಣಾರೆ ನೋಡಿ ಕೂಡ ಬೇಜವಾಬ್ದಾರಿ ತೋರುತ್ತಿದ್ದಾರೆ ಅಂದರೆ ಅದೆಷ್ಟು ದೌರ್ಭಾಗ್ಯ ಈ ಊರಿನವರದು.
ರಂಜೊಳ್ ಗ್ರಾಮವು ಗ್ರಾಮ ಪಂಚಾಯಿತಿ ಕಾರ್ಯಾಲಯ ಹೊಂದಿದ್ದು ಕೂಡ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಇದರ ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಬಸ್ ನಿಲ್ದಾಣದ ಪಕ್ಕದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಅನಾವರಣಕ್ಕೆ ಸಿದ್ಧತೆ ಇದೆ.
ಆದಷ್ಟು ಬೇಗ ಅಧಿಕಾರಿಗಳು ಎಚ್ಚೆತ್ತುಕೊಂಡು ಬಸ್ ನಿಲ್ದಾಣವನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರ ಅಭಿಪ್ರಾಯ ಆಗಿದೆ ಆದರೆ ಅಂತಹ ಲಕ್ಷಣಗಳು ಇಲ್ಲಿನ ಅಧಿಕಾರಿಗಳಲ್ಲಿ ಕಾಣುತ್ತಿಲ್ಲ.
ಯಾಕಂದರೆ ಇದೀಗ ಈ ಬಸ್ ನಿಲ್ದಾಣ ಕುರಿತು ಅನೇಕ ಬಾರಿ ವರದಿಗಳು ಆಗಿದ್ದವು ಆದರೆ ಯಾವುದೇ ಸ್ಪಂದನೆ ಅಧಿಕಾರಿಗಳು ನೀಡಿಲ್ಲ.
ಅದ ಕಾರಣ ಸಂಬಂಧಪಟ್ಟ ತಾಲೂಕ ಪಂಚಾಯತ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಬಸ್ ನಿಲ್ದಾಣವನ್ನು ಸ್ವಚ್ಛತೆ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




