ಚಿಕ್ಕೋಡಿ: ಸದಲಗಾ ಪಟ್ಟಣದ ಚನ್ನಮ್ಮ ವೃತ್ತದಲ್ಲಿರುವ ನವನಾಥ ಜ್ಯುವೆಲ್ಲರ್ಸನಲ್ಲಿ ಕಳ್ಳರು ಚಿನ್ನ ಮತ್ತು ಬೆಳ್ಳಿ ಆಭರಣ ಅಂಗಡಿಯ ಶೆಟರ್ ಮುರಿದು ಒಳಗೆ ನುಗ್ಗಿ ಆಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.

ಅಂಗಡಿಯ ಮಾಲೀಕ ವಿನಾಯಕ ವಿಜಯಕುಮಾರ ಮಾಳಿ ಸದಲಗಾ ಪೊಲೀಸರಿಗೆ ದೂರು ನೀಡಿದ್ದಾರೆ. ಡಿಎಸ್ಪಿ ಗೋಪಾಲಕೃಷ್ಣ ಗೌಡರ, ಸಿಪಿಐ ವಿಶ್ವನಾಥ್ ಚೌಗಲಾ, ಸದಲಗಾ ಪಿಎಸ್ಐ ಶಿವಕುಮಾರ್ ಬಿರಾದಾರ. ಮಾರ್ಗದರ್ಶನದಲ್ಲಿ
ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕಳ್ಳರು 8 ಲಕ್ಷ ರೂ. ಮೌಲ್ಯದ 9 ಕೆಜಿ ಬೆಳ್ಳಿ ಆಭರಣ ಮತ್ತು 16,000 ರೂ. ನಗದು ಕದ್ದಿದ್ದಾರೆ.ಅದಲ್ಲದೇ ಬುಧ್ಧ ವಿಹಾರ ಮುಂಭಾಗದಲ್ಲಿದ್ದ 2 ದ್ವಿಚಕ್ರ ಬೈಕಗಳನ್ನು ಕದಿದ್ದಾರೆ ಎಂದು ತಿಳಿದು ಬಂದಿದೆ.

ಚನ್ನಮ್ಮ ವೃತ್ತ ಮತ್ತು ಮಹಾಲಿಂಗಸ್ವಾಮಿ ಶಾಲೆಯ ನಡುವಿನ ರಸ್ತೆಯಲ್ಲಿರುವ ದೀಪಸ್ತಂಭಗಳನ್ನು ರಸ್ತೆ ನವೀಕರಣಕ್ಕಾಗಿ ಸಿಸಿ ಕ್ಯಾಮೇರಾ ತಗೆಯಲಾಗಿದೆ.ಚನ್ನಮ್ಮ ವೃತ್ತದಲ್ಲಿರುವ ಹೈಮಾಸ್ಟ್ ದೀಪವನ್ನು ಕಳೆದ ಎರಡು-ಮೂರು ದಿನಗಳಿಂದ ಆಫ ಆಗಿರುವುದರಿಂದ ಕಳ್ಳರು ಕತ್ತಲೆಯ ಲಾಭವನ್ನು ಪಡೆದುಕೊಂಡಿದ್ದಾರೆ.
ಖಾಸಗಿ ಸಿಸಿಟಿವಿಯಲ್ಲಿ ಕಳ್ಳರ ಓಡಾಟ ದೃಶ್ಯ ಸೆರೆಯಾಗಿದೆ.ಈ ದೃಶ್ಯಗಳನ್ನು ಆಧರಿಸಿ ಕಳ್ಳರ ಪತ್ತೆಗಾಗಿ ಬಲೆಬಿಸಿದ್ದಾರೆ.
ವರದಿ: ರಾಜು ಮುಂಡೆ




