————ಪುತ್ರ ರಾಹುಲ್ ಜಾರಕಿಹೊಳಿ ಸ್ಪರ್ಧೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿಯವರು ಏನಂದ್ರು
ಬೆಳಗಾವಿ: ಹೌದು ಇಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ವಾಯುವ್ಯ ಸಾರಿಗೆ ನಿಗಮ ಮಂಡಳಿ ಅಧ್ಯಕ್ಷ ರಾಜು ಕಾಗೆ ನೇತೃತ್ವದಲ್ಲಿ ಬೆಳಗಾವಿ ನಗರದಲ್ಲಿ ಇಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಘಟಕಗಳು ಮತ್ತು ವಿಭಾಗಗಳ ಕುಂದು ಕೊರತೆ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಈ ವೇಳೆ ನೂತನ ಬಸ್ ಘಟಕ/ನಿಲ್ದಾಣಗಳ ಬೇಡಿಕೆ, ನೆಲಸಮಗೊಳಿಸಬೇಕಾದ ಶಿಥಿಲಾವಸ್ಥೆಯಲ್ಲಿರುವ ಬಸ್ ಘಟಕಗಳನ್ನು ಮರು ನಿರ್ಮಿಸುವುದು, ಹೊಸ ಬಸ್ ಗಳ ಬೇಡಿಕೆ ಹಾಗೂ ಹೊಸ ಮಾರ್ಗಗಳ ಬೇಡಿಕೆ ಹಾಗೂ ನೌಕರರ ಸಮಸ್ಯೆಗಳು ಹಾಗೂ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಅವುಗಳ ಪರಿಹಾರಕ್ಕಾಗಿ ಕೆಲವು ಮಹತ್ವದ ತೀರ್ಮಾನ ಕೈ ಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಸಂಸ್ಥೆಯ ಎಂಡಿ ಶ್ರೀಮತಿ ಪ್ರಿಯಾಂಕಾ ಎಮ್. ಶ್ರೀ ಪೀರಸಾಬ ಕೈತಾಳ, ಶಾಸಕರಾದ ಶ್ರೀ ರಾಜು ಸೇಠ್, ಶ್ರೀ ವಿಶ್ವಾಸ ವೈದ್ಯ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ನಂತರ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂವಾದದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಜಿಲ್ಲೆಯಲ್ಲಿರುವ ಬಸ್ ಸಮಸ್ಯೆಗಳು ಹಾಗೂ ರಾಹುಲ್ ಜಾರಕಿಹೊಳಿ ಬೆಳಗಾವಿ ತಾಲ್ಲೂಕಿನಿಂದ ಸ್ಪರ್ಧೆ , ಸಿ.ಎಂ ಸ್ಥಾನ ಹೀಗೆ ವಿವಿಧ ಪ್ರಶ್ನೆಗಳಿಗೆ ಬಗ್ಗೆ ಉತ್ತರ ನೀಡಿದರು ನೀಡಿದರು.
ವರದಿ: ಬಸವರಾಜು




