ಬೆಂಗಳೂರು : ಬಿಗ್ ಬಾಸ್ 11ರ ಸೀನಸ್ ನಂತರ ಸುದೀಪ್ ಅವರು ನಿರೂಪಣೆಯಿಂದ ಹಿಂದೆ ಸರಿದಿದ್ದು, ಹೊಸಬರು ನಿರೂಪಣೆ ಮಾಡಲಿದ್ದಾರೆ ಎಂಬ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದೆ.
ಬಿಗ್ ಬಾಸ್ 12 ಸೀಸನ್ ನಿರೂಪಣೆಗೆ ಕೊನೆಗೂ ಒಪ್ಪಿಕೊಂಡಿರುವ ನಟ ಕಿಚ್ಚ ಸುದೀಪ್ ಅವರು ಇದೀಗ ತಾವೇ ಈ ಸೀನಸ್ ಹೋಸ್ಟ್ ಮಾಡುವುದರ ಬಗ್ಗೆ ಖಚಿತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆಯೋಜಕರು ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ. ಇನ್ನು ನಿರೂಪಣೆ ಮಾಡಲ್ಲ ಅಂದಿದ್ದು ನಿಜ. ನನಗೆ ಅನಿಸಿದ್ದನ್ನು ಅಂದು ಹೇಳಿದ್ದೆ. ಆದರೆ ಅಭಿಮಾನಿಗಳ ಪ್ರತಿಕ್ರಿಯೆ ನೋಡಿ ತಮ್ಮ ಹೃದಯ ಸ್ಪರ್ಶಿಸಿತು ಎಂದು ಸುದೀಪ್ ಅವರು ಇದೀಗ ಹೇಳಿಕೆ ನೀಡಿದ್ದು, ಕಾರ್ಯಕ್ರಮ ಆಯೋಜಕರೂ ಸುದೀಪ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುವುದು ಸ್ಪಷ್ಟ.




