ರಮೇಶ್ ಅವರ ಕಾರ್ಯ ಬ್ಯಾಂಕಿನ ಬಗ್ಗೆ ಕಾಳಜಿ ಮೆಚ್ಚುವಂತದ್ದು : ಅಧ್ಯಕ್ಷ ಕಲ್ಯಾಣೆ
ಭಾಲ್ಕಿ : ಪಟ್ಟಣದ ಶಿವಾಜಿ ವೃಟದಲ್ಲಿರುವ ಪ್ರತಿಷ್ಠಿತ ಅರ್ಬನ್ ಬ್ಯಾಂಕ್ ಸಿಬ್ಬಂದಿ ರಮೇಶ ಅವರ ವಯೋ ನಿವೃತ್ತಿ ಕಾರ್ಯಕ್ರಮ ಬ್ಯಾಂಕ ಕಟ್ಟಡದ ಮೇಲಮಹಡಿ ಸಭಾಭವನದಲ್ಲಿ ಜರುಗಿತು.
ಬ್ಯಾಂಕ್ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರು ಸೇರಿ ಅವರಿಗೆ ವಿಶ್ರಾಂತಿ ಜೀವನಕ್ಕೆ ಶುಭಕೋರಿ ಗೌರವ ಸತ್ಕಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತಾಡಿದ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಶಿವಕುಮಾರ ಕಲ್ಯಾಣೆ ರಮೇಶ ಅವರ ಜೀವನ ಅವರ ಕಾರ್ಯ ಶಬ್ದ ಮುಕ್ತವಾಗಿತ್ತು ಅವರು ಸುಮಾರು 31 ವರ್ಷಗಳ ಕಾಲ ಈ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ್ದು ಎಲ್ಲರ ಮನಸು ಗೆಲ್ಲುವುದರೊಂದಿಗೆ ಒಳ್ಳೆಯ ಕಾರ್ಯ ಮಾಡಿದ್ದಾರೆ ಅವರ ನಡೆ ನುಡಿ ತುಂಬಾ ಶಾಂತವಾಗಿರುವುದು ನಿಜಕ್ಕೂ ಶ್ಲಾಘನಿಯ ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ರಮೇಶ ಗಜಕೋಶ ನನಗೆ ಬ್ಯಾಂಕಿನಲ್ಲಿ ಕೆಲಸ ಮಾಡಲು ಸಿಕ್ಕಿದ್ದು ನನ್ನ ಸೌಭಾಗ್ಯ ಸುಮಾರು ಜನ ವ್ಯವಸ್ಥಾಪಕರು ಆಡಳಿತ ಪ್ರತಿಯೊಬ್ಬರೊಂದಿಗೆ ಕೆಲಸ ಮಾಡಿದ ಅನುಭವ ಖುಷಿ ತಂದಿದೆ
ಇವತ್ತು ಎಲ್ಲರೂ ಸೇರಿ ನಮ್ಮ ದಂಪತಿಗಳಿಗೆ ಸನ್ಮಾನಿಸಿ ಸತ್ಕಾರಿಸಿದ್ದು ಅತ್ಯಾನಂದ
ವಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಆಡಳಿತ ಮಂಡಳಿಯ ಸದಸ್ಯರಾದ ಶೇಖರ್ ವಂಕೆ, ಜೀವನ ಪೆದ್ದೆ, ನಿರಂಜನ ಅಷ್ಟೂರೇ, ಬಸವರಾಜ ಬೋರ್ಡೇ, ಅನೀಲ ಲೋಖಂಡೇ, ಬಾಲಾಜಿ ಬಾಮಣೆ, ಮನಿಶಾ ವಾಲೆ, ಶೃತಿ ಪಾಟೀಲ ಸೇರಿದಂತೆ ಬ್ಯಾಂಕ ಸಿಬ್ಬಂದಿ ಕಾವೇರಿ ಕಾಕನಾಳೆ,
ಕಿರಣ ಟಿಗಳೇ, ನಿವರ್ತಿ ಯಾದವ, ಶಿವರಾಜ ಗೊರಟೆ, ಉಮಾಕಾಂತ್ ತಗರಖೇಡೆ, ಸುಪ್ರಿಯಾ ವಲಂಡೇ, ಚನ್ನಬಸವ ಕುಂಚಗೆ, ವಿಜಯಕುಮಾರ್ ಶಿಂದೆ, ಮಹೇಶ್ ಅಷ್ಟೂರೇ ಪಿಗ್ಮಿ ಎಜಂಟರು ಸೇರಿದಂತೆ ಇತರರು ಇದ್ದರು.
ಕಾವೇರಿ ಕಾಕನಾಳೆ ಸಂಚಾಲನೆ ಮಾಡಿದರು
ನಿವರ್ತಿ ಯಾದವ ವಂದನಾರ್ಪಣೆ ಮಾಡಿದರು.
ವರದಿ: ಸಂತೋಷ ಬಿಜಿ ಪಾಟೀಲ




