Ad imageAd image

ಬುಮ್ರಾ ಬದಲಿಗೆ ಆಕಾಶ ದೀಪ್ ಗೆ ಸ್ಥಾನ?

Bharath Vaibhav
ಬುಮ್ರಾ ಬದಲಿಗೆ ಆಕಾಶ ದೀಪ್ ಗೆ ಸ್ಥಾನ?
WhatsApp Group Join Now
Telegram Group Join Now

ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್‌ಗಾಗಿ ಭಾರತದ ಆಡುವ ಬಳಗದಲ್ಲಿ ವಿಶೇಷವಾಗಿ ವೇಗಿಗಳ ವಿಭಾಗದಲ್ಲಿ ಬದಲಾವಣೆ ಕಾಣಲಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಬುಮ್ರಾ ಮೇಲಿ ಕೆಲಸದ ಹೊರೆ ನಿರ್ವಹಣೆಯ ಭಾಗವಾಗಿ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ಎರಡನೇ ಟೆಸ್ಟ್‌ಗೆ ಭಾರತದ ತಂಡದಲ್ಲಿ ಬುಮ್ರಾ ಬದಲಿಗೆ ಅಚ್ಚರಿಯ ಆಟಗಾರ ಅವಕಾಶ ಪಡೆದಿದ್ದಾರೆ ಎಂದು ವರದಿಯಾಗಿದೆ.

ಎಡ್ಜ್‌ಬಾಸ್ಟನ್‌ನಲ್ಲಿ ಹಾಜರಿದ್ದ ಅನೇಕ ಪತ್ರಕರ್ತರ ಪ್ರಕಾರ, 28 ವರ್ಷದ ಬಲಗೈ ಸೀಮರ್ ಆಕಾಶ್ ದೀಪ್ ಬುಮ್ರಾ ಅವರ ಬದಲಿಗೆ ಅವಕಾಶ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಜುಲೈ 2ರ ಬುಧವಾರದಿಂದ ಪ್ರಾರಂಭವಾಗುವ ಎರಡನೇ ಟೆಸ್ಟ್ ಪಂದ್ಯಕ್ಕೆ ಕೇವಲ ಎರಡು ದಿನಗಳು ಬಾಕಿಯಿದ್ದು, ಸೋಮವಾರ ಭಾರತದ ಅಭ್ಯಾಸ ಅವಧಿಯಲ್ಲಿ ಆಕಾಶ್ ದೀಪ್ ವ್ಯಾಪಕ ಅಭ್ಯಾಸ ನಡೆಸಿದ್ದಾರೆ.

ಆಕಾಶ್ ದೀಪ್ ಜೊತೆಗೆ, ಮೊದಲ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಕೂಡ ಹೆಚ್ಚು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಎಡಗೈ ಸೀಮರ್ ಅರ್ಶದೀಪ್ ಸಿಂಗ್ ಕಡಿಮೆ ಪ್ರದರ್ಶನ ನೀಡಿದ್ದು, ವರದಿಗಳ ಪ್ರಕಾರ  ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!