ಮಾನ್ವಿ: ತಾಲೂಕಿನ ಗೋರ್ಕಲ್ ಗ್ರಾಮದಲ್ಲಿ ಕುರ್ಡಿ ರೈತ ಸಂಪರ್ಕ ಕೇಂದ್ರ ವತಿಯಿಂದ ಗೋರ್ಕಲ್ ಗ್ರಾಮದಲ್ಲಿ ರಾಷ್ಟಿçಯ ಅಹಾರ ಭದ್ರತೆ ಯೋಜನೆಯಡಿಯಲ್ಲಿ ರೈತ ಫಲಾನುಭವಿಗಳಿಗೆ ತೊಗರಿ ಬೀಜಗಳನ್ನು ವಿತರಿಸಿ ಕುರ್ಡಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಾ.ಶಿವಶಂಕರ್ ಮಾತನಾಡಿ ತೊಗರಿ ಬೆಳೆ ನಮ್ಮ ರಾಜ್ಯದ ಪ್ರಮುಖ ದ್ವಿದಳ ಧಾನ್ಯ ಆಹಾರ ಬೆಳೆಗಳಲ್ಲಿ ಒಂದಾಗಿದ್ದು ರೈತರು ಮುಂಗಾರು ಹಂಗಾಮಿನಲ್ಲಿ ಈ ಭಾಗದ ಹವಾಮಾನಕ್ಕೆ ಹೊಂದಿಕೊಳ್ಳುವ ಸೂಕ್ತವಾದ ತೋಗರಿ ತಳಿಗಳನ್ನು ಅಯ್ಕೆ ಮಾಡಿಕೊಂಡು ಮಳೆಯಾಶ್ರಿತ ಹಾಗೂ ನೀರಾವರಿ ಅಡಿಯಲ್ಲಿ ಏಕ ಬೆಳೆ ಹಾಗೂ ಹತ್ತಿಯೊಂದಿಗೆ ಮಿಶ್ರ ಬೆಳೆಯಾಗಿಯು ಬೆಳೆಯಬಹುದಾಗಿದೆ.
ಈ ಸಾಲಿನ ಮುಂಗಾರಿನಲ್ಲಿ ರೈತ ಸಂಪರ್ಕ ಕೇಂದ್ರದಿAದ ಜಿ.ಆರ್.ಜಿ. 811 ತಳಿಯ ತೋಗರಿ ಬೀಜಗಳನ್ನು ರೈತರಿಗೆ ವಿತರಿಸಲಾಗುತ್ತಿದ್ದು ಈ ತಳಿಯು 180 ದಿನಗಳಲ್ಲಿ ಕೋಯ್ಲಿಗೆ ಬರುವ ತಳಿಯಾಗಿದೆ ಸೂಕ್ತ ನಿರ್ವಹಣೆಯಲ್ಲಿ ಎಕರೆಗೆ 8 ಕ್ವೀಂಟಾಲ್ ವರೆಗೆ ತೋಗರಿಯಲ್ಲಿ ಇಳುವರಿಯನ್ನು ಪಡೆಯಬಹುದು . ರೈತರು ಬೆಳೆ ಪರಿವರ್ತನೆಯೊಂದಿಗೆ ತೋಗರಿ ಬೆಳೆಯನ್ನು ಬೆಳೆದಲ್ಲಿ ಉತ್ತಮ ಇಳುವರಿ ಹಾಗೂ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು .
ರೈತರು ಬೀಜವನ್ನು ಬಿತ್ತುವ ಪೂರ್ವದಲ್ಲಿ ಜೈವಿಕ ಶಿಲೀಂದ್ರ ನಾಶಕವಾದ ಟ್ರೆöÊಕೋಡರ್ಮ ಬಳಸಿ ಬಿಜೋಪಚಾರ ಮಾಡುವುದರಿಂದ ರೋಗಬಾದೆಯನ್ನು ತಡೆಯುವುದಕ್ಕೆ ಸಾಧ್ಯವಾಗುತ್ತದೆ. ಕೀಟ ನಿರ್ವಹಣೆಗೆ ಸಮಗ್ರ ಕೀಟ ನಿವಾರಣೆ ಪದ್ದತಿಯನ್ನು ಅಳವಡಿಸಿಕೊಳ್ಳುವುದರಿಂದ ಹಾಗೂ ಬೇವು ಅಧಾರಿತ ಕೀಟ ನಾಶಕಗಳನ್ನು ಬಳಸುವುದರಿಂದ ಪರಿಸರಕ್ಕೆ ಹಾನಿಯಾಗದಂತೆ ಕಡಿಮೆ ವೆಚ್ಚದಲ್ಲಿ ಕೀಟಗಳನ್ನು ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆ.ತೋಗರಿ ಬೆಳೆಯನ್ನು ಕೃಷಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವೈಜ್ಞಾನಿಕವಾಗಿ ಬೆಳೆದಾಗ ಮಾತ್ರ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿಯನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಸರ್ಕಾರವು ಕೃಷಿ ಇಲಾಖೆಯಿಂದ ರೈತರಿಗಾಗಿ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರೈತರಿಗೆ ತೋಗರಿ ಬೆಳೆಯಲ್ಲಿ ಬಿತ್ತನೆಗೆ ಪೂರ್ವ ಕೈಗೊಳ್ಳ ಬೇಕಾದ ಬಿಜೋಪಚಾರ ,ಕೀಟಮತ್ತು ರೋಗ ನಿರ್ವಹಣೆ ಹಾಗೂ ರಸಗೋಬ್ಬರ ಬಳಕೆ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಂಬಣ್ಣ, ಅತ್ಮ ಯೋಜನೆಯ ತಾಂತ್ರಿಕ ಸಹಾಯಕ ವ್ಯವಸ್ಥಾಪಕ ಸೈಯಾದ್ ಜಲಾಲ್, ಅನುವುಗಾರ ಲಕ್ಷö್ಮಣ ,ಗ್ರಾಮದ ರೈತರಾದ ಪಂಚಾಯ್ಯ ಸ್ವಾಮಿ ಹಿರೇಮಠ,ಪಂಪನಗೌಡ ಪೊಲೀಸ್ ಪಾಟೀಲ್,ಮೆಹಬೂಬ್ ಜೈನುದ್ದಿನ್, ಮಹಾಂತಪ್ಪಗೌಡ,ಗೂಳೆಪ್ಪ ವಾಲೇಕರ್,ಹುಲಿಗೇಪ್ಪ, ಬಸವರಾಜ .ಜಿ.ಸೇರಿದಂತೆ ಇನ್ನಿತರರು ಇದ್ದರು.




