ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವದ ಬದಲಾವಣೆಯ ವಿಚಾರ, ಸೆಪ್ಟೆಂಬರ್ ಕ್ರಾಂತಿಯ ಕೂಗು ಪಕ್ಷದಲ್ಲಿ ತೀವ್ರ ತಳಮಳ ಎಬ್ಬಿಸಿದೆ.
ಸಿಎಂ ಆಗುವ ಕನಸು ಕಾಣುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರದ ಹಂಚಿಕೆ ವಿಚಾರ ಇಲ್ಲವೇ ಇಲ್ಲ.ಪೂರ್ಣಾವಧಿಗೆ ನಾನೇ ಸಿಎಂ ಎನ್ನುತಾ ತಣ್ಣೀರು ಎರೆಚುತ್ತಿದ್ದಾರೆ.
ಸಿಎಂ ದಸರಾ ವೇಳೆ ಕುರ್ಚಿ ಕಳೆದುಕೊಳ್ಳಲಿದ್ದಾರೆ ಎಂದು ಒಂದೆಡೆ ವಿಪಕ್ಷಗಳು ಭವಿಷ್ಯ ನುಡಿಯುತ್ತಿವೆ. ಇದೀಗ ಜೆಡಿಎಸ್ ಸಿಎಂ ಆಗಿ ಸಿದ್ದರಾಮಯ್ಯ ಅವರು ಇಂದು ನಡೆಸಿರುವ ಸಚಿವ ಸಂಪುಟ ಸಭೆ ಇದೇ ಇವರ ಕೊನೆಯ ಸಭೆಯಾಗಲಿದೆ ಎಂದು ಲೇವಡಿ ಮಾಡಿದೆ.
ಇಂದಿನ ಸಚಿವ ಸಂಪುಟ ಸಭೆಗಾಗಿ ಚಿಕ್ಕಬಳ್ಳಾಪುರದ ನಂದಿಗಿರಿಧಾಮಕ್ಕೆ ಆಗಮಿಸುವ ಮುನ್ನ ಸಿಎಂ ನಂದಿ ಗ್ರಾಮದಲ್ಲಿರುವ ಶ್ರೀ ಭೋಗನಂದೀಶ್ವರ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಸಚಿವರೊಂದಿಗೆ ಸಿಎಂ ಫೋಟೊಶೂಟ್ ನಲ್ಲಿ ಕಾಣಿಸಿಕೊಂಡರು.
ಇದೇ ಫೋಟೋವನ್ನು ಉಲ್ಲೇಖಿಸಿ ಟ್ವೀಟಿಸಿರುವ ರಾಜ್ಯ ಜೆಡಿಎಸ್, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯರ ಕೊನೆಯ ಸಚಿವ ಸಂಪುಟ ಸಭೆಯ ಚಿತ್ರವಿದು. ಮುಂದಿನ ಸಚಿವ ಸಂಪುಟ ಸಭೆಯ ವೇಳೆ ಸಿದ್ದರಾಮಯ್ಯ ಅವರು ಸಿಎಂ ಆಗಿ ಇರಲ್ಲ ಎಂಬ ಅರ್ಥದಲ್ಲಿ ದಳ ಕಾಲೆಳೆದಿದೆ.
ಒಂದೆಡೆ ಪೂರ್ಣಾವಧಿಗೆ ನಾನೇ ಸಿಎಂ ಆಗಿರುವೆ ಎಂಬ ಸಿದ್ದರಾಮಯ್ಯರ ಪುನರುಚ್ಛಾರಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆಶಿಯವರು, ನನ್ನ ಬಳಿ ಬೇರೆ ಆಯ್ಕೆ ಇಲ್ಲ. ಬೆಂಬಲ ಮಾಡಲೇಬೇಕು. ಮಾಡುತ್ತೇನೆ ಎಂದಿದ್ದಾರೆ. ಈ ಮೂಲಕ ಸಿಎಂ ಸದ್ಯದ ಕುರ್ಚಿ ಕಿತ್ತಾಟಕ್ಕೆ ಕೊಂಚ ಬ್ರೇಕ್ ಹಾಕಿದಂತೆ ಮಾಡಿದ್ದಾರೆ.




