Ad imageAd image

ಸಮಾಜ ಸೇವಕ ಅಶೋಕ್ ಗೌರಗೊಂಡ ಇನ್ನಿಲ್ಲ, ನೆನಪು ಮಾತ್ರ

Bharath Vaibhav
ಸಮಾಜ ಸೇವಕ ಅಶೋಕ್ ಗೌರಗೊಂಡ ಇನ್ನಿಲ್ಲ, ನೆನಪು ಮಾತ್ರ
WhatsApp Group Join Now
Telegram Group Join Now

ಕಳಚಿ ಬಿತ್ತು ತಾಂವಶಿ ಗ್ರಾಮದ ರತ್ನ..

ಉಸಿರು ನಿಲ್ಲಿಸಿತು ಸಮಾಜ ಸೇವಕ ಜೀವ..

ತಾವಂಶಿ ಗ್ರಾಮದ ಅಶೋಕ್ ಗೌರಗೊಂಡ ಇನ್ನಿಲ್ಲ.. ನೆನಪು ಮಾತ್ರ
ತಡ ರಾತ್ರಿ ರಸ್ತೆ ಅಪಘಾತದಲ್ಲಿ ನಿಧನ..

ಅಥಣಿ:ಸದಾ ಬಡವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ಬಂದವರಿಗೆಲ್ಲ ಹೂವು ಶಾಲು ನೀಡಿ ಆತಿಥ್ಯದ ಗೌರವ ಒಂದೆಡೆಯಾದರೆ, ಶಿಕ್ಷಣ ಕ್ಷೇತ್ರದಲ್ಲಿ ಸಾಧಕ ವಿದ್ಯಾರ್ಥಿಗಳಿಗೂ ಹಳ್ಳಿಗಳಿಗೆ ತೆರಳಿ ಸತ್ಕಾರ, ಸನ್ಮಾನ ಮಾಡಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತ ಮುಂಚೂಣಿಯಲ್ಲಿದ್ದವರು.

ಬಡವರಿಗೆ ಸಹಾಯ ಅಂತಾ ಬಂದಾಗಲೆಲ್ಲ ಆಧಾರವಾಗಿ ನಿಲ್ಲುತ್ತಿದ್ದ ಅದೇ ಜೀವ ಇಂದು ರಸ್ತೆ ಅಪಘಾತದಲ್ಲಿ ಉಸಿರು ಚೆಲ್ಲಿದೆ.. ಅಥಣಿ ತಾಲೂಕಿನ ತಾವಂಶಿ ಗ್ರಾಮದ ಶ್ರೀ ಅಶೋಕ ಗೌರಗೊಂಡ ತಡರಾತ್ರಿ ವೇಳೆ ತಾವಂಶಿ ಗ್ರಾಮದಿಂದ ಅಥಣಿ ಪಟ್ಟಣಕ್ಕೆ ತೆರಳುವಾಗ 11:00 ಘಂಟೆ ಸುಮಾರಿಗೆ ಅಥಣಿ ರಸ್ತೆಯ ಖಡಿ ಕೃಶರ್ ಹತ್ತಿರ ಬೈಕ್ ಗೆ ನಾಯಿ ಅಡ್ಡ ಬಂದ ಪರಿಣಾಮ ಅಪಘಾತ ಸಂಭವಿಸಿ ತಲೆಗೆ ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಸಮಾಜ ಸೇವೆಯ ಧ್ವನಿ ಹಾಗೂ ರಾಜಕೀಯ ಮುತ್ಸದ್ದಿ ಅಶೋಕ್ ಗೌರಗೊಂಡ ಅಥಣಿ ಪಟ್ಟಣದಲ್ಲಿ ತಮ್ಮದೇಯಾದ ಒಂದು ಕಾರ್ಯಾಲಯ ಮಾಡಿ ಬಂದವರಿಗೆಲ್ಲ ಹೂಮಾಲೆ ಹಾಕಿ ಸತ್ಕರಿಸಿ ಬಾಂಧವ್ಯ ಬೆಳೆಸುವ ಸ್ವಭಾವದವರು.

ಹಬ್ಬ, ಹರಿದಿನ, ಹಾಗೂ ಜನ್ಮದಿನ ಬಂತೆಂದರೆ ಅದೆಷ್ಟೋ ಕಣ್ಣೇ ಕಾಣದ ಬಡ ಮಕ್ಕಳಿಗೆ, ವೃದ್ಧಾಶ್ರಮದ ವೃದ್ಧ ಜೀವಗಳಿಗೆ ತಮ್ಮ ಅಳಿಲು ಸೇವೆಯ ಮೂಲಕ ಸಹಾಯ ಮಾಡುತಿದ್ದರು. ಆದರೇ ವಿಧಿ ಆಟವೇ ಬೇರೆ. ಅಥಣಿಯ ಹೊರವಲಯದಲ್ಲಿ ಬುಧವಾರ ರಾತ್ರಿ 11ಗಂಟೆಗೆ ತಾಂವಶಿಯಿಂದ ಅಥಣಿಗೆ ಬರುವಾಗ ಬೈಕ್ ಗೆ ನಾಯಿ ಅಡ್ಡ ಬಂದು ಅಪಘಾತ ಸಂಭವಿಸಿ ಅಶೋಕ ಗೌರಗೊಂಡ, ತಾಂವಶಿಯವರು ನಮ್ಮೆಲ್ಲರನ್ನು ಬಿಟ್ಟು ಈಹ ಲೋಕಕ್ಕೆ ಅಗಲಿದ್ದಾರೆ.

ಇವರು ಹರಿಹರ ಪೀಠ ದ ಶ್ವಾಸ ಗುರು ವಚನಾನಂದ ಸ್ವಾಮೀಜಿಯವರ ಸಹೋದರ ಮತ್ತು ಇವರಿಗೆ ತಾಯಿ, ಪತ್ನಿ ಮತ್ತು ಮೂರು ಹೆಣ್ಣು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

ಕೈ. ಅಶೋಕ ಗೌರಗೊಂಡ ಅವರಿಗೆ ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲೆಂದು ಆ ಭಗವಂತನಲ್ಲಿ ಕೇಳೋಣ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!