ಸಿಂಧನೂರು : ಜುಲೈ 3 ರಂದು ನಗರದ ಪತ್ರಿಕಾಭಮದಲ್ಲಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿ ಯು ಸಿ ಐ) ಪತ್ರಿಕಾ ಘೋಷ್ಠಿ ನಡೆಸಿ ಸಾಮ್ರಾಜ್ಯಶಾಹಿ ನವ ಉದಾರವಾದಿ ಆರ್ಥಿಕ ನೀತಿಗಳು ಕಾರ್ಮಿಕ ವರ್ಗದ ಶ್ರಮಶಕ್ತಿಯನ್ನು ದೋಚುವ ಗುರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳದ್ದಾಗಿದೆ ಇದಕ್ಕೆ ಬೇಕಾದ ಕಾನೂನುಗಳು ಜಾರಿಗೆ ಮೋದಿ ಸರ್ಕಾರ ಹೊರಟಿದೆ ಆದ್ದರಿಂದಲೇ ನಾವು ನಾಲ್ಕು ಕಾರ್ಮಿಕ ಕೊಡುಗಳು ರದ್ದಾಗುವ ತನಕ ಹೋರಾಡಬೇಕಾಗಿದೆ.
ಬದುಕಿನ ಉದ್ಯೋಗ. ವೇತನ. ಜಮೀನು, ಕೃಷಿ. ಉತ್ಪನ್ನ. ದರ. ವಿದ್ಯೆ.ಆರೋಗ್ಯ. ಸುರಕ್ಷೆ. ಮುಂತಾದ ಮೂಲಭೂತ ಹಾಗೂ ಜ್ವಲಂತ ಸಮಸ್ಯೆಗಳನ್ನು ಮರೆ ಮಾಚಲು ಹಿಂದೂ- ಮುಸ್ಲಿಂ ನಡುವೆ ದ್ವೇಷ ಹಬ್ಬಿಸಲಾಗುತ್ತದೆ ಇದು ಕಾರ್ಪೊರೇಟರ್ ಬಂಡವಾಳಶಾಹಿ ಪ್ರೇರಿತ ಆರ್ ಎಸ್ ಎಸ್. ಫ್ಯಾಸಿಸ್ಟ್ ಆಳ್ವಿಕೆ ಆಗಿದೆ ಇದನ್ನು ಹಿಮ್ಮೆಟ್ಟಿಸುವ ಅತಿ ದೊಡ್ಡ ಜವಾಬ್ದಾರಿ ಭಾರತ ದೇಶದ ಕಾರ್ಮಿಕ ವರ್ಗದ ಮೇಲಿದೆ ಹೀಗಾಗಿ ಪ್ರತಿಯೊಂದು ಕಾರ್ಖಾನೆ. ಕಛೇರಿ. ಅಂಗಡಿ.ರೈಲ್ವೇ.ನೀರು ಸರಬರಾಜು. ವಿದ್ಯುತ್ ಸರಬರಾಜು. ಪೌರ ಸೇವೆ. ಆಸ್ಪತ್ರೆ. ವಸತಿ ಶಾಲೆ.ಗಣಿಗಾರಿಕೆ.ಟೀ ಕಾಫಿ.ಹೊಲ ಗದ್ದೆ. ಉದ್ಯೋಗ ಖಾತ್ರಿ. ಆಶಾ ಅಂಗನವಾಡಿ. ಆರೋಗ್ಯ ಸೇವೆ.ಹೀಗೆ ದೇಶದ ಎಲ್ಲಾ ಕ್ಷೇತ್ರದ ಎಲ್ಲಾ ಕಾರ್ಮಿಕರು ನೌಕರರು ಒಗ್ಗೂಡಿ ಕೆಲಸ ನಿಲ್ಲಿಸಿ ಜುಲೈ 9 ರಂದು ರಾಜ್ಯಾದ್ಯಂತ ಮುಷ್ಕರಕ್ಕೆ ಇಳಿಯಬೇಕೆಂದು.
ಟಿಯುಸಿಐ. ಕೇಂದ್ರ ಸಮಿತಿ ಕರೆಯ ಮೇರೆಗೆ ರಾಜ್ಯ ಸಮಿತಿ ಪತ್ರಿಕೆ ಘೋಷ್ಠಿ ಮೂಲಕ ಮನವಿ ಮಾಡುತ್ತದೆ
ಈ ಸಂದರ್ಭದಲ್ಲಿ ಎಂ. ಡಿ. ಅಮೀರ್ ಅಲಿ ರಾಜ್ಯಾಧ್ಯಕ್ಷರು ಟಿ ಯು ಸಿ ಐ, ಎಂ. ಗಂಗಾಧರ ರಾಜ್ಯ ಉಪಾಧ್ಯಕ್ಷರು ಟಿಯುಸಿಐ. ಜೆ. ತಿಪ್ಪರಾಜ ರಾಜ್ಯ ಸಮಿತಿ ಸದಸ್ಯರು. ಬಸವರಾಜ್ ಹಿರೇ ಹೆಸರೂರು. ಎಚ್ ಆರ್. ಹೊಸಮನಿ. ಮುದಿಯಪ್ಪ. ಇನ್ನು ಅನೇಕರಿದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ




