ಕಾಗವಾಡ : ಶೇಡಬಾಳ ಸ್ಟೇಷನ್ ಗ್ರಾಮದ ಬಿಎಸ್‌ಎಫ್ ಯೋಧ ದಗದು ಮಹಾದೇವ ಪೂಜಾರಿ (45) ರಜೆಯ ಮೇಲೆ ಗ್ರಾಮಕ್ಕೆ ಮರಳಿ, ಆರೋಗ್ಯ ಸಮಸ್ಯೆಯಿಂದ ಬೆಳಗಾವಿಗೆ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಳ್ಳಲು ಹೋಗಿರುವಾಗ ಆಕಸ್ಮಿಕವಾಗಿ ನಿಧನರಾಗಿದ್ದಾರೆ.
ಮೃತ ಯೋಧನು ಅಸ್ಸಾಂ ರಾಜ್ಯದ ಗೋವಾಟಿಯಲ್ಲಿ 170 ಬಟಾಲಿಯನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಐದಾರು ದಿನಗಳ ಹಿಂದೆ ರಜೆಯ ಮೇಲೆ ಸ್ವಗ್ರಾಮಕ್ಕೆ ಮರಳಿದ್ದರು. ಈ ವೇಳೆ ಆರೋಗ್ಯ ಸಮಸ್ಯೆಯಿಂದಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಎಂದು ಹೋಗಿದ್ದಾಗ ಆಕಸ್ಮಿಕವಾಗಿ ನಿಧನರಾಗಿದ್ದಾರೆ.
ಮೃತ ಯೋಧರ ಪಾರ್ಥಿವ ಶರೀರ ಬುಧವಾರ ಸಂಜೆ ಸ್ವ ಗ್ರಾಮದ ಅವರ ತೋಟದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಸರ್ಕಾರಿ ಅಧಿಕಾರಿಗಳು ಗ್ರಾಮದ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.ಮೃತ ಯೋಧರು ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ವರದಿ : ಚಂದ್ರಕಾಂತ ಕಾಂಬಳೆ




