ಬೆಡಕೀಹಾಳ ಸರಕಾರಿ ಶಾಲೆ ಕೊಠಡಿಗಳ ಸಮಸ್ಯೆ ಎರಡೂ ಗ್ರಾಮಗಳ ಸಮನ್ವಯತೆಯಿಂದ ಬಗೆಹರಿಸಿ! ಹಾಲಶುಗರ ಸಂಚಾಲಕ ಜಯಕುಮಾರ್ ಖೋತ ಅಭಿಮತ.
ನಿಪ್ಪಾಣಿ :ಕಳೆದ 8 ದಶಕಗಳಿಂದ ಚಿಕ್ಕೋಡಿ ತಾಲೂಕಿನ ಶಮನೇವಾಡಿ ಸರಕಾರಿ ಕನ್ನಡ ಗಂಡು ಮಕ್ಕಳಿಗಾಗಿ ನಿಪ್ಪಾಣಿ ತಾಲೂಕಿನ ಬೇಡಕೀ ಹಾಳದ ವೃತ್ತದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ ಸಮುಚ್ಚಯದಲ್ಲಿಯ 9 ಕೊಠಡಿ ಗಳಲ್ಲಿಯ 5 ಕೊಠಡಿಗಳನ್ನು ವಿದ್ಯಾಭ್ಯಾಸಕ್ಕಾಗಿ ಬಿಟ್ಟು ಕೊಟ್ಟಿದ್ದಾರೆ.ಇದರ ಸಂಪೂರ್ಣ ಖರ್ಚು,ದುರಸ್ತಿ ಕಾರ್ಯ ಶಮನೇವಾಡಿ ಗ್ರಾಮಸ್ಥರು ನಿಭಾಯಿಸಿದ್ದು ಸದ್ಯ ಚಿಕ್ಕೋಡಿ ತಾಲೂಕು ವಿಭಜನೆಯ ನೆಪವಡ್ಡಿ ಸದರಿ ಕೊಠಡಿಗಳನ್ನು ದುರಸ್ತಿ ಕಾರ್ಯ ಮಾಡಲು ಬೇಡಕೀಹಾಳ ಗ್ರಾಮದ ಕೆಲಮುಖಂಡರು ತಂಟೆ ತಕರಾರು ನಡೆಸುತ್ತಿದ್ದಾರೆ.ಇದು ಸರಿಯಲ್ಲ. ಸದರಿ ಕೊಠಡಿಗಳು ನಮಗೇ ಸೇರಬೇಕಾಗಿದ್ದು. ಎರಡೂ ಗ್ರಾಮಗಳ ಗಣ್ಯರ ಸಮನ್ವಯತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ ವೆಂದು ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕ ಜಯಕುಮಾರ್ ಖೋತ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಶಮನೇವಾಡಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕರೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸುದರ್ಶನ ಖೋತ,ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಕಾಂಬಳೆ ಮಾತನಾಡಿ *ಕಳೆದ ಎಂಟು ದಶಕಗಳಿಂದ ಶಮನೇವಾಡಿ ವಿದ್ಯಾರ್ಥಿಗಳಿಗೆ 5 ಕೊಠಡಿಗಳನ್ನು ವಿದ್ಯಾಭ್ಯಾಸಕ್ಕಾಗಿ ಬಿಟ್ಟು ಕೊಟ್ಟಿದ್ದಾರೆ. ಇದು ಅಲ್ಲದೆ ಈ ಹಿಂದೆಯೂ ಎರಡು ಗ್ರಾಮಗಳ ಮುಖಂಡರ ಸಹಾಯ ಸಹಕಾರ್ಯದಿಂದ ಶಾಲೆಯ ಸಮುಚ್ಛಯದಲ್ಲಿ ಕ್ರೀಡಾಂಗಣ ಬಿಸಿಯೂಟ ಅಡುಗೆ ಕೋಣೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಸದ್ಯ ಶಮನೇವಾಡಿಗೆ ಬಿಟ್ಟುಕೊಡಲಾದ 5 ಕೋಣೆಗಳಲ್ಲಿ ಎರಡು ಕೋಣೆಗಳ ರಿಪೇರಿ ಕಾಮಗಾರಿ ಪೂರ್ಣಗೊಂಡಿದ್ದು ಉಳಿದ ಮೂರು ಕೊಠಡಿಗಳ ರಿಪೇರಿಗಾಗಿ ದಾನಿಗಳಿಂದ ಹಣ ಸಂಗ್ರಹಿಸಿ ರಿಪೇರಿ ಕಾಮಗಾರಿ ನಡೆಯುತ್ತಿದ್ದು ಇದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿರುವುದು ಖಂಡನೀಯ ಎಂದರು.
ಈ ಸಂಧರ್ಭದಲ್ಲಿ ಶಮನೇವಾಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು,ಹಾಲಿ ಸದಸ್ಯರು ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




