ಇಳಕಲ್ಲ : ಹುಟ್ಟು ಹಬ್ಬದಂದು ಸಾರ್ವಜನಿಕರು ದುಂದು ವೆಚ್ಚ ಮಾಡಿ ಅದ್ದೂರಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವುದು ಸಂಪ್ರದಾಯ ಆದರೆ ಇಳಕಲ್ಲ ನಗರದ ಬಸವನಗರ ಬಡಾವಣೆಯ ನಿವಾಸಿ ಯುವ ಪತ್ರಕರ್ತ ಸಚಿನ ಸಾಲಿಮಠ ಅವರ ಜನ್ಮ ದಿನವನ್ನು ನಗರದ ಸರಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆ ಮಕ್ಕಳಿಗೆ ರಾಷ್ಟ್ರ ನಾಯಕರ ಭಾವಚಿತ್ರವನ್ನು ನೀಡಿ ಹುಟ್ಟು ಹಬ್ಬ ಸರಳವಾಗಿ ಆಚರಿಸಿಕೊಂಡರು. ನಗರದ ಸರಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆಗೆ ರಾಷ್ಟ್ರ ನಾಯಕರ ಭಾವಚಿತ್ರ ವನ್ನು ನೀಡಲಾಯಿತು.
ಶಾಲೆ ಮುಖ್ಯಗುರುಗಳಾದ ಶ್ರೀಧರ ಜೋಗಿನ ಶಾಲೆ ಶಿಕ್ಷಕ ಸಂಗಮೇಶ ಬಂಡರಗಲ್, ವಿ ಎಸ್ ಹೊಸಗೌಡ್ರ, ಡಿ ಎಮ್ ಪೂಜಾರಿ,ಅಶ್ವಿನಿ ಜಂಗ್ಲಿ,ವಿಮಲಾ ಹಾಗೂ ಶಾಲೆ ಮುದ್ದು ಮಕ್ಕಳು ಇದ್ದರು. ಇದೇ ಸಂಧರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಪತ್ರಕರ್ತ ಸಾಲಿಮಠ ಅವರಿಗೆ ಶಾಲು ಹಾರ ಹಾಕಿ ಸನ್ಮಾನಿಸಿದರು ಸ್ವಾಮಿ ವಿವೇಕಾನಂದ ಪುಸ್ತಕ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ರಾದ ಕೆ ಎಚ್ ಸೋಲಾಪುರ,ಶರಣಗೌಡ ಕಂದಕೂರ ಇತರರು ಇದ್ದರು.
ವರದಿ : ದಾವಲ್ ಶೇಡಂ




