ಆಡಳಿತ ಯಂತ್ರ ಕಾರ್ಯವೈಖರಿ ಹಾಗೂ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಸಮಸ್ಯೆ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡಿದ್ದೇನೆ ಅದರ ಬಗ್ಗೆ ಅವರು ಸೂಕ್ತ ಸ್ಪಂದನೆ ನೀಡಿದ್ದಾರೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.ಅವರು ಗುರುವಾರ ದಿ.03 ರಂದು ಕಾಗವಾಡ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಗವಾಡ-ಕಲಾದಗಿ ರಸ್ತೆ ಅಗಲೀಕರಣವನ್ನು ಚನ್ನಮ್ಮ ವೃತ್ತದಿಂದ ಆರ್ ಟಿಒ ಕಛೇರಿವರೆಗಿನ ಕಾಮಗಾರಿಗೆ ಮಾತನಾಡುತ್ತಿದ್ದರು.

ಅವರು ಮುಂದೆ ಮಾತನಾಡುತ್ತಾ. ಆಡಳಿತದ ಕಾರ್ಯವೈಖರಿ ಬಗ್ಗೆ ಸಿಎಂ ಹಾಗೂ ವರಿಷ್ಠರ ಗಮನಕ್ಕೆ ತಂದಿದ್ದೇನೆ ಅದಕ್ಕೆ ಅವರು ಅದರ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.ಎಲ್ಲ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುತ್ತಾರೆ ಎಂಬ ಭರವಸೆ ಇದೆ ಹೇಳಿದರು.ಇದೆ ವೇಳೆ ಕಾಮಗಾರಿ ವಿಳಂಭ ಮಾಡುತ್ತಿರುವ ಗುತ್ತಿಗೆದಾರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮಲ್ಲಿಕಾರ್ಜುನ ಮಗದುಮ್.ಮುಖಂಡರಾದ ಜ್ಯೋತಿಕುಮಾರ ಪಾಟೀಲ್, ರಮೇಶ ಚೌಗುಲೆ,ಕಾಕಾ ಪಾಟೀಲ್, ಚಿದಾನಂದ ಅವಟಿ,ಸೌರಭ.ಪಾಟೀಲ್ ವಿಧ್ಯಾಧರ ದೊಂಡಾರೆ.ಪದ್ಮಾ ಕರವ,ವಿನಾಯಕ ಚೌಗಲಾ,ಗುತ್ತಿಗೆದಾರ ತಿಪ್ಪಣ್ಣ ಭಜಂತ್ರಿ ಸೇರಿದಂತೆ ಅನೇಕರು ಇದ್ದರು.
ವರದಿ: ಚಂದ್ರಕಾಂತ ಕಾಂಬಳೆ




