ಅಧಿಕಾರ ಸ್ವೀಕರಿಸಿದ ಏಳೆಂಟು ತಿಂಗಳಲ್ಲೇ ಕಾನೂನುಬಾಹಿರ ಕೃತ್ಯಗಳಿಗೆ ಲಗಾಮು ಹಾಕಿದ sp
ಗುರುಮಠಕಲ್ : ಯಾದಗಿರಿ ಜಿಲ್ಲೆಗೆ ದಕ್ಷತೆಯಿಂದ ಕೆಲಸ ಮಾಡುತ್ತಿರುವ ಅಧಿಕಾರಿಯನ್ನು ಸರ್ಕಾರದ ಕ್ರಮಕ್ಕೆ ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಅಧ್ಯಕ್ಷ ಕಾಶಪ್ಪ ಹೆಗ್ಗಣಗೆರಾ ಅವರು ತೀವ್ರ ಕಂಡಿಸುವಾದರ ಜೊತೆಗೆ ವಿರೋಧ ವ್ಯಕ್ತಪಡಿಸಿದೆ ಮಾದಿಗ ದಂಡೋರ
ಇವರು ಸುದ್ದಿಗಾರರೊಂದಿಗೆ ಮಾತನಾಡಿ ಈ ಕುರಿತು ಹೇಳಿಕೆ ನೀಡಿರುವ ಕರ್ನಾಟಕ ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ಬೆಂಗಳೂರು ಕಾಶಪ್ಪ ಹೆಗ್ಗಣಗೆರಾ ಇವರು ದಕ್ಷ ಹಾಗೂ ನಮ್ಮ ಹಿಂದುಳಿದ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ಹೀಗ ಅಂಧಾ ದರ್ಬಾರ್ ನಡೆಸುವ ಮೂಲಕ ವರ್ಗಾವಣೆ ಮಾಡಿರುವುದು ಅತ್ಯಂತ ನಾಚಿಕೆಗೇಡು ಸಂಗತಿಯಾಗಿದೆ ಆಕ್ರೋಶ ವ್ಯಕ್ತಪಡಿಸಿದರು
ಯಾದಗಿರಿ ಜಿಲ್ಲಾ ಆಗಬೇಕಾದರೆ ಹಿಂದುಳಿದ ಜಿಲ್ಲೆಯನ್ನು ಮುಂದುವರೆದ ಜಿಲ್ಲೆಯನ್ನಾಗಿಸಬೇಕೆಂದರೆ ಅಭಿವೃದ್ಧಿಪರ ಚಿಂತನೆಯುಳ್ಳ ಜೊತೆಗೆ ಪ್ರಾಮಾಣಿಕ ಅಧಿಕಾರಿಗಳ ಇರುವಿಕೆಯೂ ಸಹ ಅಷ್ಟೇ ಮುಖ್ಯ. ಆದರೆ ನಮ್ಮ ಯಾದಗಿರಿ ಜಿಲ್ಲೆಯಲ್ಲಿ ಅವ್ಯಾಹರ ನಡೆಯುತ್ತಿದ್ದರ ವಿವಿಧ ರೀತಿಯ ಅಕ್ರಮ ತಡೆಗಟ್ಟುವುದು ಸೇರಿದಂತೆ ಜನಹಿತ ಚಿಂತನೆಗಳುಳ್ಳ ಕಾರ್ಯಗಳಿಗೆ ಮುಂದಾದ ಅಧಿಕಾರಿಗಳಿಗೆ ವರ್ಗಾವಣೆ ವಣೆ ಶಿಕ್ಷೆ ವಿಧಿಸಲಾಗುತ್ತಿದೆಯೇ? ಎಂದು ಯಾದಗಿರಿ ಜಿಲ್ಲೆಯ ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗೆರಾ ಸರಕಾರ ತಕ್ಷಣ ಕೈ ಬಿಡಬೇಕು ಇಲ್ಲ ಅಂದ್ರೆ ಮಾದಿಗ ದಂಡೋರ ಸರಕಾರ ವಿರುದ್ಧ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಅಕ್ರಮಕೋರರ ನಿದ್ದೆಗೆಡಿಸಿದ್ದ ಅಧಿಕಾರಿ ವರ್ಗಾವಣೆ ?
ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರನ್ನೂ ವರ್ಗಾವಣೆಗೆ ಸರ್ಕಾರ ಸಿದ್ಧತೆ ನಡೆಸಿದ್ದು, ಒಂದೆರೆಡು ದಿನಗಳಲ್ಲಿ ಅವರನ್ನೂ ಸಹ ಇಲ್ಲಿಂದ ಬೀಳ್ಕೊಡುವ ಸಿದ್ದತೆ ತೆರೆಮರೆಯಲ್ಲೇ ನಡೆದಿವೆ ಎಂದು ಜನಸಾಮಾನ್ಯರಲ್ಲಿ ಗುಸು ಗುಸು ಶುರುವಾಗಿದೆ . 2018 ರ ಬ್ಯಾಚಿನ, ಮಂಡ್ಯ ಮೂಲದ ಐಪಿಎಸ್ ಅಧಿಕಾರಿ ವೃಥ್ವಿಕ್ ಶಂಕರ್ ಕಳೆದ ನವೆಂಬರಿನಲ್ಲಿ ಯಾದಗಿರಿ ಜಿಲ್ಲೆ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದಕ್ಕೂ ಮುನ್ನ, ಸಿಐಡಿಯಲ್ಲಿ ಎಸ್ಪಿಯಾಗಿದ್ದವೃದ್ಧಿಕ್ ಶಂಕರ್, ಯಾದಗಿರಿ ನಗರ ಠಾಣೆಯ ಪಿಎಸ್‌ಐ ಆಗಿದ್ದ ಪರಶುರಾಮ್ ಸಾವಿನ ಪ್ರಕರಣದ ತನಿಖೆಯನ್ನೂ ನಡೆಸಿದ್ದರು. ಅಕ್ರಮಗಳ ವಿರುದ್ಧ ಸಮರ ಸಾರಿರುವ ಪೃಥ್ವಿಕ್, ದಂಧೆಕೋರರ ಸದ್ದಡಗಿಸಿದ್ದರು. ಆದರೆ, ಎಸ್ಪಿ ನಡೆಯಿಂದಾಗಿ ಅಕ್ರಮ ದಂಧೆಕೋರರ ವ್ಯಾಪಾರ ಸ್ಥಗಿತಗೊಂಡಂತಾಗಿದೆ. ಇದು ಪ್ರಭಾವಿಗಳ ವಲಯದಲ್ಲೂ ಸಹ ಒಂದಿಷ್ಟು ಉಸಿರು ಗಿಟ್ಟಿಸುವ ವಾತಾವರಣಕ್ಕೆ ಕಾರಣವಾಗಿರುವುದರಿಂದ, ಪೃಥ್ವಿಕ್ ಶಂಕರ್ ಅವರನ್ನೂ ವರ್ಗಾವಣೆಗೊಳಿಸುವಂತೆಯಾಗಿದೆಯ ಎಂದು ಅನುಮಾನ ಶುರುವಾಗಿದೆ
ಏಳೆಂಟು ತಿಂಗಳಲ್ಲೇ ದಿಟ್ಟ ಅಧಿಕಾರಿಯ ವರ್ಗಾವಣೆಗೊಳಿಸಿದರೆ ಜನಾಕ್ರೋಶದ ಜೊತೆಗೆ ಮುಂದಲ್ಲಿ ಅವರು ಕಾನೂನು ಮೊರೆ ಹೋದರೆ ಸರ್ಕಾರದ ಮರ್ಯಾದೆ ಏನಾದೀತು ಎಂಬುದಾಗಿ ಸರ್ಕಾರ/ಮಂತ್ರಿಗಳ ಮಟ್ಟದಲ್ಲಿ ಇದು ಚರ್ಚೆಗೆ ಬಂತೆನ್ನಲಾಗಿದೆ. ಸಮುದಾಯದ ಮುಖಂಡರೊಬ್ಬರನ್ನು ಬೆಂಗಳೂರಿಗೆ ವಶೀಲಿಗೆ ಕಳುಹಿಸಿ, ವರ್ಗಾವಣೆಗೆ ಸಹಿ ಹಾಕಿಸುವ ಯತ್ನ ನಡೆಯುತ್ತಿದೆ. ಬೇರೊಬ್ಬ ಅಧಿಕಾರಿಗೆ ಈಗಾಗಲೇ ರಾಜಕೀಯ ವಲಯ ‘ರೆಡ್ ಕಾರ್ವೆಟ್’ ಮಿನಟ್ಸ್ ನೀಡಿದೆ ಎಂಬ ಮಾತು ಪೊಲೀಸ್ ವಲಯದಲ್ಲಿ ಕೇಳಿ ಬರುತ್ತಿದೆ. ಅಧಿಕಾರ ಸ್ವೀಕರಿಸಿದ ಏಳೆಂಟು ತಿಂಗಳಲ್ಲೇ ಕಾನೂನುಬಾಹಿರ ಕೃತ್ಯಗಳಿಗೆ ಲಗಾಮು ಹಾಕಿ, ಖಾಕಿಪಡೆಯ ಪ್ರಾಮಾಣಿಕ ವಲಯ ಹಾಗೂ ಜನರಲ್ಲಿ ಹೊಸ ಆಶಾಭಾವ ಮೂಡಿಸಿದ ಅಧಿಕಾರಿಯ ವರ್ಗಾವಣೆಗೆ ಸರ್ಕಾರ ಮುಂದಾಗುತ್ತಿದೆ ಎಂಬ ಮಾತುಗಳು ಕೆಳಹಂತದ ಅಧಿಕಾರಿಗಳಿಗೆ ಸ್ಥೆರ್ಯ ಕುಗ್ಗಿಸಿದಂತಿದೆ.
ಜಿಲ್ಲಾಡದೆಂತ ಕಣ್ಣುಗವಲು ನೀಗ ವಾಸಿಸುವ ಅವಧಿಪೂರ್ವ ದಲ್ಲೇ ವರ್ಗಾವಣೆ ಶಿಕ್ಷೆಗೆ ಗುರಿಯಾದರು ಎಂಬ ಮಾತು ಇಲಾಖೆ ಯಲ್ಲೇ ಕೇಳಿ ಬರುತ್ತಿವೆ. ಜೊತೆಗೆ, ಎಸಿಎಫ್ ವರ್ಗಾವಣೆಗೂ ಬಿಗಿಪಟ್ಟು ಹಿಡಿದಿದ್ದ ರಾಜಕೀ ಯ ಪುಢಾರಿಗಳ ವಿರುದ್ಧ ಕಿಡಿಕಾರಿದ್ದರೆ
ವರದಿ : ರವಿ ಬುರನೋಳ




