ಪಾವಗಡ: ಪುರಸಭೆಯ ಆವರಣದಲ್ಲಿ ದಿನಾಂಕ 3/07/25 ಗುರುವಾರ ಸಂಜೆ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಬೇಕೆಂದು ಕರ್ನಾಟಕ ರಾಜ್ಯ ಮೇಲ್ವಿಚಾರಣಾ ಸಮಿತಿ ಸದಸ್ಯ ಡಾ. ಕೆ.ಬಿ. ಓಬಳೇಶ್ ಹೇಳಿದರು.
ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಪೌರಕಾರ್ಮಿಕರ ಆರೋಗ್ಯವನ್ನು ಕಾಪಾಡುವುದು ಹಾಗೂ ಅವರಿಗೆ ಗೌರವ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಜೊತೆಗೆ ಎಸ್‌ಸಿ ಮೀಸಲು ನಿಧಿಯಿಂದ ಉಪಹಾರ ಮತ್ತು ಸುರಕ್ಷಾ ಸಾಮಗ್ರಿಗಳ ಖರೀದಿಯನ್ನು ನಿಲ್ಲಿಸಿ, ಪುರಸಭಾ ನಿಧಿಯಿಂದ ಪೂರೈಕೆಯಾಗಬೇಕು ಎಂದು ಹೇಳಿದರು.
ಪುರಸಭಾ ಅಧ್ಯಕ್ಷ ಸುದೇಶ್ ಬಾಬು ಮಾತನಾಡಿ, ಪಾವಗಡದಲ್ಲಿ 17 ಪೌರಕಾರ್ಮಿಕರ ಮನೆ ನಿರ್ಮಾಣದ ಶೇಕಡಾ 80% ಕೆಲಸ ಪೂರ್ಣವಾಗಿದ್ದು, ಮುಖ್ಯಮಂತ್ರಿ ಆಗಮಿಸುವ ವೇಳೆ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.

ಪ್ರಮುಖರಾದ ನಿವೃತ್ತ ಪ್ರಾಂಶುಪಾಲ ಬಸವಲಿಂಗಪ್ಪ ಮತ್ತು ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಡಾ. ಚಂದ್ರಶೇಖರ್ ಆರ್.ವಿ. ಸಮಾಜದ ಏಕತೆ ಮತ್ತು ಮುನ್ನಡೆಯ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಮಾಲೀನ್ ತಾಜ್, ಮಾಜಿ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಬಾಲಸುಬ್ರಮಣ್ಯಂ, ವಿಜಯ್ ಕುಮಾರ್, ನಾಮಿನಿ ಸದಸ್ಯರಾದ ಗಂಗಾಧರ್,ಮುಖ್ಯ ಅಧಿಕಾರಿ ಜಾಪರ್ ಷರೀಫ್, ಹಿರಿಯ ಆರೋಗ್ಯ ನಿರೀಕ್ಷಕ ಶಂಸುದ್ದೀನ್, ದಲಿತ ಸಂಘಟನೆಗಳ ಮುಖಂಡರಾದ ಹನುಮಂತರಾಯಪ್ಪ HRFDL. ಸುಬ್ಬರಾಯಪ್ಪ, ಸಿ ಕೆ ಪುರ ಹನುಮಂತರಾಯಪ್ಪ. ಕಲಾತಂಡ. ಕಡಪಲ ಕೆರೆ ನರಸಿಂಹಪ್ಪ HRFDL. ಬಳಸಮುದ್ರ ವೆಂಕಟೇಶ್, ರಾಮಕೃಷ್ಣ ಪೋತಗಾನಹಳ್ಳಿ. ಪೊನ್ನ ಸಮುದ್ರ ನಾಗರಾಜ್. ಶಿವಪ್ಪ ನೆಲಗಾನಹಳ್ಳಿ. ಬಿ ಕೆ ಹಳ್ಳಿ ಮುರಳಿ ಕೃಷ್ಣ. ಶಿವ R, ಶಿವಪ್ಪ. ವಿಶ್ವನಾಥ್. ಬಸವರಾಜ. ಇನ್ನು ಮುಂತಾದವರು ಸೇರಿದಂತೆ ಹಲವರು ಹಾಜರಿದ್ದರು
ವರದಿ: ಶಿವಾನಂದ ಪಾವಗಡ




