ಎಜಬಾಸ್ಟನ್ (ಬರ್ಮಿಂಗ್ ಹ್ಯಾಂ): ವೇಗಿಗಳಾದ ಮೊಹ್ಮದ ಶಿರಾಜ್ 70 ಕ್ಕೆ 6 ಹಾಗೂ ಆಕಾಶ ದೀಪ್ 88 ಕ್ಕೆ 4 ಮಾರಕ ಬೌಲಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡ ಇಲ್ಲಿ ನಡೆದಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 180 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಲು ಯಶಸ್ವಿಯಾಯಿತು.
ಮೂರನೇ ದಿನದಾಂತ್ಯಕ್ಕೆ ಭಾರತ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 1 ವಿಕೆಟ್ ಗೆ 64 ರನ್ ಗಳಿಸಿದ್ದು, ಒಟ್ಟಾರೆ 244 ರನ್ ಗಳ ಮುನ್ನಡೆ ಪಡೆದಿದೆ. ಕೆ.ಎಲ್. ರಾಹುಲ್ 28 ಹಾಗೂ ಕರುಣ್ ನಯ್ಯರ 7 ರನ್ ಗಳಿಸಿ ಕ್ರೀಸ್ ಬಳಿ ಇದ್ದರು. ಯಶಸ್ವಿ ಜೈಸ್ವಾಲ್ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಇದಕ್ಕೆ ಮುನ್ನ ಇಂಗ್ಲೆಂಡ್ ತನ್ನ ಮೊದಲ ಸರದಿಯಲ್ಲಿ 407 ರನ್ ಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಇಂಗ್ಲೆಂಡ್ ಪರವಾಗಿ ಹಾರ್ರಿ ಬ್ರೋಕ್ 158 ಹಾಗೂ ಜೆಮ್ಮಿ ಸ್ಮಿತ್ 184 ರನ್ ಗಳಿಸಿದರು.




