——————————————————-ವಿಂಡೀಸ್- ಕಾಂಗರೂ ಟೆಸ್ಟ್ ಸರಣಿ
ಸೇಂಟ್ ಜಾರ್ಜ (ಗ್ರೇಂಡಾ) ವೆಸ್ಟ್ ಇಂಡೀಸ್: ಪ್ರವಾಸಿ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಬ್ಯಾಟ್ಸಮನ್ ಗಳ ಪೆವಿಲಿಯನ್ ಪರೇಡ್ ಮುಂದುವರೆದಿದ್ದು, ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಂತ್ಯಕ್ಕೆ ಆಗಲೇ ಪಂದ್ಯದ ಮೂರನೇ ಸರದಿಯ 2 ವಿಕೆಟ್ ಗಳು ಕೂಡ ಉರುಳಿವೆ.
ಇಲ್ಲಿನ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡನೇ ದಿನದಾಂತ್ಯಕ್ಕೆ ಆಸ್ಟ್ರೇಲಿಯಾ ತನ್ನ ದ್ವಿತೀಯ ಸರದಿಯಲ್ಲಿ 2 ವಿಕೆಟ್ ಗೆ 12 ರನ್ ಗಳಿಸಿತ್ತು. ಆಸ್ಟ್ರೇಲಿಯಾ ಒಟ್ಟಾರೆ ಪಂದ್ಯದಲ್ಲಿ 45 ರನ್ ಗಳ ಮುನ್ನಡೆ ಪಡೆದಿತ್ತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 286 ರನ್ ಗಳಿಸಿದ್ದರೆ, ಪ್ರತಿಯಾಗಿ ಆಸ್ಟ್ರೇಲಿಯಾ 253 ರನ್ ಗಳಿಸಿತ್ತು.




