Ad imageAd image

‘ಹಿಂದೂ ಮಹಾಗಣಪತಿ ಹಬ್ಬದ ಅದ್ದೂರಿ ಆಚರಣೆಗೆ ಎಲ್ಲ ಸಹಕಾರ ಅಗತ್ಯ: ವಿನಯ್ ಕುಮಾರ್

Bharath Vaibhav
‘ಹಿಂದೂ ಮಹಾಗಣಪತಿ ಹಬ್ಬದ ಅದ್ದೂರಿ ಆಚರಣೆಗೆ ಎಲ್ಲ ಸಹಕಾರ ಅಗತ್ಯ: ವಿನಯ್ ಕುಮಾರ್
WhatsApp Group Join Now
Telegram Group Join Now

ಮೊಳಕಾಲ್ಮುರು : ಪಟ್ಟಣದಲ್ಲಿ ವಿಘ್ನ ವಿನಾಯಕ ಗಣಪತಿಯನ್ನು ಅದ್ದೂರಿಯಾಗಿ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಮಹಾ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಅವರು ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಮಹಾ ಗಣಪತಿ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮಹಾಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳು ಭಕ್ತರು ತನು ಮನ ಅರ್ಪಿಸಿ ಎಲ್ಲರೂ ಸಹಕಾರ ನೀಡಬೇಕು ಎಂದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಕೆಪಿ ಗೋಪಾಲ್ ಕೃಷ್ಣ ಮಾತನಾಡಿ ಗಣೇಶ ಮೂರ್ತಿಯನ್ನು ಆಗಸ್ಟ್ 27ರಂದು ಬುಧವಾರ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು ಅದೇ ರೀತಿ ಸೆಪ್ಟೆಂಬರ್ 7 ರಂದು ಭಾನುವಾರ ಅದ್ದೂರಿ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಗುವುದು. ಈ ಬಾರಿ 12 ಜನಗಳ ಕಾಲ ವಿವಿಧ ಪೂಜೆ ಕೈಕಾರಿಗಳು ನಡೆಯುತ್ತವೆ ಆಸಕ್ತರು 12 ದಿನಗಳಲ್ಲಿ ಯಾವುದಾದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಬಹುದು. 12 ದಿನಗಳ ಕಾಲ ನೃತ್ಯ ಭಜನೆ ಹರಿಕಥೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇನ್ನು ಹಲವು ಕಾರ್ಯಕ್ರಮಗಳು ಆಯೋಜಿಸಲಾಗಿದ್ದು ಆಹ್ವಾನ ಪತ್ರಿಕೆಯಲ್ಲಿ ಕಳೆದ ವರ್ಷದಷ್ಟೇ ಸೇವಾ ಶುಲ್ಕ ನಿಗದಿ ಪಡಿಸಲಾಗಿದೆ. ಕಳೆದ ಸಾಲಿನಲ್ಲಿ ಭಕ್ತರು ನೀಡಿದ ಸೇವಾ ಶುಲ್ಕದಲ್ಲಿ ಎಲ್ಲಾ ಖರ್ಚನ್ನು ತೆಗೆದು 32 ಸಾವಿರ ರೂಗಳು ಉಳಿತಾಯ ಮಾಡಲಾಗಿದೆ ಎಂದರು. ಈ ಬಾರಿ ರಿಯಾಲಿಟಿ ಶೋನಲ್ಲಿ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಕಲಾವಿದರನ್ನು ಕರೆಸಲು ಚರ್ಚಿಸಲಾಯಿತು.

 

ಹಿರಿಯ ಮುಖಂಡ ಚಂದ್ರಶೇಖರ್ ಗೌಡ ಮಾತನಾಡಿ ದೇಶದಲ್ಲಿ ಹಿಂದುಗಳು ಒಟ್ಟಾಗಿ ನಡೆಯುವ ಗಣಪತಿ ಹಬ್ಬದಲ್ಲಿ ಆಚರಿಸಿ ಸನಾತನ ಧರ್ಮವನ್ನು ಉಳಿಸಬೇಕಾಗಿದೆ ಯಾವುದೇ ಜಾತಿ ತಾರೆ ತಮ್ಮವಿಲ್ಲದೆ ಎಲ್ಲರೂ ಒಂದೇ ಎಂಬ ಮನೋಭಾವದೊಂದಿಗೆ ಎಲ್ಲರೂ ಒಗ್ಗಟ್ಟಾಗಿ ಗಣಪತಿಯನ್ನು ವಿಜೃಂಭಣೆಯಿಂದ ನಡೆಸಬೇಕು ಎಂದರು. ಅದೇ ರೀತಿ ಮುಖಂಡರಾದ ಡಿಎಂ ಈಶ್ವರಪ್ಪ ತಮ್ಮ ಅನಿಸಿಕೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಟಿಟಿ ಕುಮಾರ್ ಮಾಜಿ ಉಪಾಧ್ಯಕ್ಷ ಬಿ ಎನ್ ಮಂಜಣ್ಣ ಗಣಪತಿ ಸೇವಾ ಸಮಿತಿಯ ಶಾಂತರಾಮ್ ಬಸಪತಿ ಟೈಮ್ಸ್ ಆಫ್ ಕರ್ನಾಟಕ ವರದಿಗಾರರಾದ ಈರಣ್ಣ ಯಾದವ್ ಉದಯ್ ಕುಮಾರ್ ಡಿಸಿ ರಾಜು ಕೆ ಎಚ್ ಸಣ್ಣ ಯಲ್ಲಪ್ಪ ಪಿ ಆರ್ ಸಿದ್ದಣ್ಣ ಪಾರ್ಥಸಾರಥಿ ಗಾಯಕವಾಡ, ರಾಜಶೇಖರ್ ಗುರುಮೂರ್ತಿ ಎಸ್‌ಟಿ ಚಂದ್ರಣ್ಣ ಬಸಣ್ಣ ಸಂತೋಷ್ ಸಂಜೀವಪ್ಪ ರವಿಕುಮಾರ್ ಎಜ್ಜೇನಳ್ಳಿ ನಾಗರಾಜ್ ಮಂಜುನಾಥ್ ಭೀಮಣ್ಣ ಗೋವಿಂದರಾಜು ಇನ್ನು ಹಲವರು ಉಪಸ್ಥಿತರಿದ್ದರು.

ವರದಿ: ಸಿಎಂ ಗಂಗಾಧರ 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!