————————————————————————–ಸ್ವತಂತ್ರ ಪಂಚಾಯತಿ ನೀಡಬೇಕೆಂದು ಆಗ್ರಹ
ಅಥಣಿ:ಮೂಲಭೂತ ಸೌಕರ್ಯದಿಂದ ವಂಚಿತವಾದ ಬಳವಾಡ ಗ್ರಾಮ , ಲೈಟ್ , ಚರಂಡಿ , ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣವಾಗಿ ಸಮಸ್ಯೆಗಳಿಂದ ಬಳಲುತ್ತಿರುವ ಗ್ರಾಮವಾಗಿದೆ.

ಗ್ರಾಮ ಪಂಚಾಯತಿಯಿಂದ ಕಡೆಗಣನೆ:-ಶಿರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಳಪಡುವ ಗ್ರಾಮವಾಗಿದೆ ,ಅದ್ಯಕ್ಷ ಶಿರಹಟ್ಟಿ ಗ್ರಾಮದವಾರಿಗಿದ್ದರಿಂದ ಬಳವಾಡ ಗ್ರಾಮವನ್ನ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎನ್ನುತ್ತಿದ್ದಾರೆ ಬಳವಾಡ ಗ್ರಾಮಸ್ಥರು , ಶಿರಹಟ್ಟಿ ಪಂಚಾಯತಿಗೆ ೧೮ ಜನ ಪಂಚಾಯತಿ ಸದಸ್ಯರು ಇದ್ದಾರೆ ಅದರಲ್ಲಿ 4 ಜನ ಬಳವಾಡ ಗ್ರಾಮಕ್ಕೆ ಸೇರಿದವರು , 4 ಜನಸದಸ್ಯರಿರುವ ಗ್ರಾಮಕ್ಕೆ ಯಾವುದೆ ಅನುದಾನ ನಿಡುತ್ತಿಲ್ಲಾ ಎಂದು ಸದಸ್ಯರು ಸೇರಿದಂತೆ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ .

ಬೀದಿ ದೀಪಗಳೆ ಇಲ್ಲಾ:-ಒಂದು ತಿಂಗಳಿನಂದ ಗ್ರಾಮದಲ್ಲಿ ಬೀದಿ ದೀಪಗಳೆ ಇಲ್ಲಾದಂತಾಗಿದೆ , ಪ್ರಮುಖ ಬೀದಿಗಳಲ್ಲಿ ಸೇರಿದಂತೆ , ಗ್ರಾಮದ ಎಲ್ಲೆಡೆ ಬೀದಿ ದೀಪಗಳೆ ಇಲ್ಲಾ ಸುಮಾರು ಒಂದು ತಿಂಗಳಿನಿಂದ ಪಂಚಾಯತಿಗೆ ತಿರುಗಾಡಿದರು ಬೀದಿ ದೀಪಗಳು ಹಾಕುತ್ತಿಲ್ಲಾ ಮಳೆಗಾಲದ ಸಂದರ್ಭದಲ್ಲಿ ನದಿ ತೀರದ ಗ್ರಾಮ ಹಾವು ಸೇರಿದಂತೆ ಅನೇಕು ವಿಷಕಾರಿ ಜಂತುಗಳ ತೊಂದರೆ ಇದೆ ಎಂದು ಕೇಳಿಕೊಂಡರು ಕ್ಯಾರೆ ಎನ್ನದ ಪಂಚಾಯತಿ ಅದಿಕಾರಿಗಳು .
ಅವೈಜ್ಞಾನಿಕ ಚರಂಡಿ :- ಇತ್ತಚೇಗೆ ಪ್ರಮುಖ ಬೀದಿಯಲ್ಲು ಚರಂಡಿ ನಿರ್ಮಿಸಿದರು ಅದು ಸಂಪೂರ್ಣ ಅವೈಜ್ಞಾನಿಕವಾಗಿದೆ , ಎರಡು ಬದಿಯಲ್ಲಿನ ನೀರು ಬಂದು ಮದ್ಯದಲ್ಲಿ ನಿಂತು ದುರ್ನಾತ ಬರುತ್ತೀದ್ದು ಜನರಿಗೆ ತೊಂದರೆಯಾಗುತ್ತಿದೆ, ಚರಂಡು ಸ್ವಚ್ಚತೆ ಮಾಡುವ ಪಂಚಾಯತಿ ಸಿಬ್ಬಂದಿಗಳ ವೇತನ ಮಾಡದ ಕಾರಣ ಚರಂಡಿ ಸ್ವಚ್ಚತೆಯನ್ನೆ ಮಾಡಿಲ್ಲಾ ಆದ್ದರಿಂದ ಗ್ರಾಮದ ತುಂಬಾ ಚರಂಡು ನೀರುಗಳು ರಸ್ತೆ ಮೇಲೆ ನೀರುಗಳ ಹರಿದಾಡುತ್ತಿವೆ .
ಅಡುಗೆ ಕೋಣೆ ಇಲ್ಲದೆ ಪರದಾಡುತ್ತಿರುವ ಶಾಲಾ ಸಿಬ್ಬಂದಿ-ಅಡುಗೆ ಕೋಣೆ ನಿರ್ಮಾಣ ಮಾಡುಲು ಪೂಜೆ ಮಾಡಿ ಎರಡು ತಿಂಗಳು ಕಳೆದರು ಈವರೆಗೂ ಕಟ್ಟಣಡ ಕಾಮಗಾರಿ ಶುರುವಾಗಿಲ್ಲಾ ಈ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯತಿ ಹೋದರು ಈ ಬಗ್ಗೆ ಯಾವುದೆ ಸ್ಪಂದನೆ ಸಿಗುತ್ತಿಲ್ಲಾ .
ಬಾಕ್ಸ:-ಬಳವಾಡ ಗ್ರಾಮವನ್ನ ಸಂಪೂರ್ಣವಾಗಿ ಕಡೆಗಣನೆ ಮಾಡಿದ್ದಾರೆ , ನಾವು ಪಂಚಾಯತಿ ಸದಸ್ಯರಾಗಿ ಅಭಿವೃದ್ಧಿಗೆ ಆಗ್ರಹಿಸಿದರು ಪಂಚಾಯತಿ ಅದ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅದಿಕಾರಿ ನಮಗೆ ಸ್ಪಂದಿಸುತ್ತೀಲ್ಲಾ , ಗ್ರಾಮ ಪಂಚಾಯತಿ ಸದಸ್ಯರಾಗಿ ನಮ್ಮ ಪರಿಸ್ಥಿತಿ ಈ ತರಹವಾಗಿದೆ ಇನ್ನೂ ಸಾಮಾನ್ಯ ಜನರ ಪರಿಸ್ಥಿತಿ ಹೇಗೆ ಎನ್ನುವ ಚಿಂತೆ ನಮ್ಮಲ್ಲಿ ಕಾಡುತ್ತಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಮಾಹಾದೇವ ಮಾದರ ಬೇಸರ ವ್ಯಕ್ತಪಡಿಸಿದರು .
ಊರಾಗ ಎಲ್ಲಾ ಸಮಸ್ಯೆಗಳ ಆಗ್ಯಾವ ಚಲೋ ಏನ ಐತ್ರಿ , ಊರಾನ ಪಿಲ್ಟರ ಹೌಸ ಬಂದ ಬಿದ್ದ ವರ್ಷ ಆತು ಅದನ್ನು ಚಾಲೂನ ಮಾಡವಾಲರಿ , ಚರಂಡಿ ನೀರ ಎಲ್ಲಾ ಊರಾಗ ದಾರಿ ಮ್ಯಾಗ ಬಂದ ನಿಂತ ವಾಸ ಎದ್ದೇತಿರಿ ಎಂದು ಸಿದ್ದರಾಮ ಸವದಿ ಬೇಸರ ವ್ಯಕ್ತ ಪಡಿಸಿದರು .
ವರದಿ: ಅಜಯ ಕಾಂಬಳೆ




