ಮೊಳಕಾಲ್ಮುರು : ಮುಸಲ್ಮಾನರ ಪವಿತ್ರ ಹಬ್ಬ ಮೊಹರಂ ಸಂಭ್ರಮ. ಮೊಹರಂ ಕೇವಲ ಮುಸಲ್ಮಾನ ಧರ್ಮಕ್ಕೆ ಸೀಮಿತವಾಗಿಲ್ಲ ಇದನ್ನು ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಹಿಂದೂ ಮುಸಲ್ಮಾನರು ಒಟ್ಟುಗೂಡಿ ಭಾವೈಕ್ಯತೆಯಿಂದ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ದೇಶದೆಲ್ಲೆಡೆ ಮುಸ್ಲಿಂ ಬಾಂಧವರು ತ್ಯಾಗ, ಬಲಿದಾನದ ಸಂಕೇತದ ಪ್ರತೀಕವಾಗಿ ಈ ಹಬ್ಬ ಆಚರಿಸುತ್ತಿದ್ದಾರೆ.
ರಂಜಾನ್ ನಂತರ ಮೊಹರಂನ್ನು ಇಸ್ಲಾಮಿಕ್ ಕ್ಯಾಲೆಂಡರ್ ನ ಪವಿತ್ರ ತಿಂಗಳು ಎಂದು ಪರಿಗಣಿಸಲಾಗಿದೆ. ಮೊಹರಂ ಇಸ್ಲಾಂನಲ್ಲಿ ಅಪಾರ ಪ್ರಾಮುಖ್ಯತೆ ಹೊಂದಿರುವ ತಿಂಗಳು ಮತ್ತು ಮುಸ್ಲಿಂ ಸಮುದಾಯದವರು ಆಚರಿಸುವ ಪವಿತ್ರ ತಿಂಗಳುಗಳಲ್ಲಿ ಇದು ಸಹ ಒಂದು.
ಹಿಂದೂ-ಮುಸ್ಲಿಮರ ಭಾವೈಕ್ಯತೆ ಸಾರುವ ಹಬ್ಬ ಮೊಹರಂ, ಯಾವುದೇ ತಾರತಮ್ಯವಿಲ್ಲದೆ ಸರ್ವಧರ್ಮೀಯರು ಪಾಲ್ಗೊಂಡು ಹಬ್ಬ ಆಚರಿಸುತ್ತಾರೆ. ಹುತಾತ್ಮರನ್ನು ನೆನೆಯುವ ಉದ್ದೇಶದಿಂದ ವಿಶ್ವಾದಾದ್ಯಂತ ಮೊಹರಂ ಹಬ್ಬವನ್ನು ಜಾತಿ ಭೇದವಿಲ್ಲದೇ ಶೋಕದ ಮೂಲಕ ಆಚರಿಸಲಾಗುತ್ತದೆ.ಮೊಹರಂ ಸರ್ವ ಧರ್ಮೀಯರ ಹಬ್ಬವಾಗಿದೆ.
ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ದೊಡ್ಡ ಪೇಟೆಯಲ್ಲಿ ಭಾನುವಾರದಂದು ಮೊಹರಂ ಹಬ್ಬದ ಪ್ರಯುಕ್ತ ಪೀರಲು ದೇವರುಗಳನ್ನು ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಬಹುತೇಕ ಸಾರ್ವಜನಿಕರು ಪೀರಲು ದೇವರುಗಳು ಮುಖಾಮುಖಿ ಆಗುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪಟ್ಟಣದ ಬಿಇಒ ಮೋಕಾ ಮಸೀದಿ, ಗಿಡ್ಡು ಮಸೀದಿ, ನಾದೆಅಲಿ ಮಸೀದಿಗಳಲ್ಲಿ ಕುಳ್ಳಿರಿಸಿದ ಪೀರಲು ದೇವರುಗಳನ್ನು ದೊಡ್ಡ ಪೇಟೆಯಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಭಕ್ತರು ಮೆಣಸು, ಮಂಡಕ್ಕಿ, ಬೆಲ್ಲ ಎರಚಿ ಭಕ್ತಿ ಸಮರ್ಪಿಸಿದರು.
ಪ್ರತಿ ವರ್ಷವೂ ಕೂಡ ಪಟ್ಟಣದಲ್ಲಿ ವಿಶೇಷವಾಗಿ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತ ಬರಲಾಗುತ್ತಿದ್ದು ವಿಶೇಷವಾಗಿ ಮೊಹರಂ ಹಬ್ಬದ ಪ್ರಯುಕ್ತವಾಗಿ ಪೀರಲು ದೇವರುಗಳು ಮುಖಮುಖಿಯಾಗುವುದನ್ನು ನೋಡಲು ಸಾವಿರಾರು ಜನಸಂಖ್ಯೆಯಲ್ಲಿ ಜನ ಜಮಾಹಿಸುತ್ತಾರೆ, ಎಷ್ಟೇ ಜನ ಜಮಾಹಿಸಿದರು ಯಾವುದೇ ಅಶಾಂತಿಗೆ ಕಾರಣವಾಗದೆ ಪ್ರತಿವರ್ಷದಂತೆ ಶಾಂತಿಯುತವಾಗಿ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆಯಲ್ಲಿ ಹಿಂದೂ ಮತ್ತು ಮುಸಲ್ಮಾನರು ಒಟ್ಟುಗೂಡಿ ಕುಣಿದು ಸಂಭ್ರಮಿಸಿದರು ವಿಶೇಷವಾಗಿತ್ತು.
ವರದಿ : ಪಿಎಂ ಗಂಗಾಧರ




