ಅಥಣಿ : ಇತ್ತೀಚಿನ ಬಾಂಗ್ಲಾದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಅಟ್ಯಾ ಪಟ್ಯಾ ಕ್ರೀಡಾಕೂಟದಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಪ್ರಥಮಸ್ಥಾನ ಪಡೆದ ಬಸವರಾಜ ತೆಳಗಡೆ ಹಳ್ಳಿಯ ಯುವಕ ನಮಗೆ ಹೆಮ್ಮೆಯ ವಿಷಯ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ಜಿಲ್ಲಾ ಸಂಘಟನಾ ಸಂಚಾಲಕ ಸಂಜಯ ತಳವಲಕರ ಹೇಳಿದರ.
ಅವರು ಅಥಣಿ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ಅಥಣಿ ವತಿಯಿಂದ ಸನ್ಮಾನ ಮಾಡಿ ಹಳ್ಳಿ ಪ್ರತಿಭೆಯನ್ನು ಅಧಿಕಾರಿಗಳನ್ನು ಗುರುತಿಸಿ ಇಂದು ಸಂಘಟನೆ ಪರವಾಗಿ ಸನ್ಮಾನ ಮಾಡಿದಕ್ಕೆ ಧನ್ಯವಾದಗಳು ಹೇಳಿದರು.
ಈ ಸಂದರ್ಭದಲ್ಲಿ ನೂತನ ಅಧಿಕಾರ ಸ್ವೀಕಾರ ಮಾಡಿದ ಅಧಿಕಾರಿಗಳಾದ ಅಥಣಿ ತಾಲೂಕಾ ಕ್ಷೆತ್ರ ಶಿಕ್ಷಣ ಅಧಿಕಾರಿ ಎಮ್ ಆರ್ ಮುಂಜಿ, ಹಾಗೂ. ಪಿಡಬ್ಲ್ಯೂಇ pwd ಅಧಿಕಾರಿಯಾದ ಮಲ್ಲಿಕಾರ್ಜುನ ಮಗದುಮ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಾದ ಸದಾಶಿವ ಮಾಂಗ ಹಾಗೂ ನಿವೃತ್ತಿ ಹೊಂದಿದ ಅಧಿಕಾರಿಯಾದ ಬಸವರಾಜ ಯಾದವಾಡ, ಕೃಷಿ ಇಲಾಖೆ ಅಧಿಕಾರಿಯಾದ ರವಿಕುಮಾರ ಬಂಗಾರಿ ಅವರನ್ನು ಸಂಘಟನೆ ಪರವಾಗಿ ಸನ್ಮಾನ ಮಾಡಲಾಯಿತು.
ಈ ಸಂಧರ್ಭದಲ್ಲಿ ಅಥಣಿ ತಾಲೂಕಾ ಸಂಚಾಲಕ ರವಿ ಕಾಂಬಳೆ, ಜಿಲ್ಲಾ ಸಂಘಟನೆ ಸಂಚಾಲಕ ಮಚ್ಚೆoದ್ರ ಖಾoಡೇಕರ, ಕುಮಾರ ಬನಸೋಡೆ, ಹಿಂದೂಳಿದ ಸಂಚಾಲಕ ಅಶೋಕ ಚೌಗಲಾ, ರಾಜು ಪರ್ನಾಕರ, ಪಂಡಿತ ಕಾಂಬಳೆ,ವಿಲಾಸ ಕಾಂಬಳೆ, ಪಾಂಡು ಕಾಂಬಳೆ, ಗೊರಖನಾಥ ಭಂಡಾರೆ, ಮಹಾಂತೇಶ ಬನಸೋಡೆ, ಅಪ್ಪಸಾಬ ಪವಾರ, ರಮೇಶ ತಳಕೇರಿ, ಹಣಮಂತ ಮದಾಳೆ, ಚಂದು ಬನಸೋಡೆ, ಅಮರ ಕಾಂಬಳೆ, ದತ್ತು ಕಾಂಬಳೆ, ತಮ್ಮಣ್ಣ ಶೇಡಬಾಳೆ, ತುಕಾರಾಮ ಭಜೇಂತ್ರಿ, ಮಹಾಂತೇಶ ಕಾಂಬಳೆ, ಅರುಣ್ ವಾಘಮಾರೆ. ವಿಲಾಸ್ ಕಾಂಬಳೆ. .ಧನಪಾಲ ಕಾಂಬಳೆ, ಅಶೋಕ ಗೇರಡಿ ಇತರರು ಇದ್ದರು.
ವರದಿ : ರಾಜು ವಾಘಮಾರೆ.




