ಚೇಳೂರು : ನಲ್ಲಿ ಭಾನುವಾರ ಕಂಪೇಗೌಡ ಜಯಂತಿ ಅದ್ದೂರಿ ಮೆರವಣಿಗೆ ನಡೆಯಿತು. ಪಟ್ಟಣದಲ್ಲಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಕೆಂಪೇಗೌಡರ 516ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಬೆಳ್ಳಿ ರಥದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಪಟ್ಟಣದ ಈಶ್ವರ ದೇವಸ್ಥಾನ ಬಳಿ ಬಾಗೇಪಲ್ಲಿ ಶಾಸಕರು ಸುಬ್ಬಾರೆಡ್ಡಿ, ಸಹದೇವರೆಡ್ಡಿ,ಸಾಹುಕಾರ್ ಶ್ರೀನಿವಾಸ್, ಶಂಕರ್ ರೆಡ್ಡಿ, ಧಾರವಾರಪಲ್ಲಿ,ಈಶ್ವರ ರೆಡ್ಡಿ, ಏನಿಗದಲೆ ಸುಧಾಕರ್ ಸೇರಿದಂತೆ ಒಕ್ಕಲಿಗ ಸಮುದಾಯದ ಮುಖಂಡರು ಸ್ತಬ್ಧಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು.
ಈ ವೇಳೆ ಶಾಸಕ ಸುಬ್ಬಾರೆಡ್ಡಿ ಮಾತನಾಡಿ ಅಂದಿನ ದಿನಗಳಲ್ಲಿಯೇ ಕೆಂಪೇಗೌಡ ಅವರು ಬೆಂಗಳೂರನ್ನು ಆಧುನಿಕ ನಗರ ನಿರ್ಮಾತೃಗಳು ನವ ನಗರಗಳನ್ನು ನಿರ್ಮಾಣ ಮಾಡುವ ರೀತಿಯಲ್ಲಿ ಮಾದರಿ ನಗರವನ್ನಾಗಿ ನಿರ್ಮಿಸಿದ್ದು ಇತಿಹಾಸ. ನಮ್ಮ ಕರ್ನಾಟಕದ ಇತಿಹಾಸದಲ್ಲಿ ರಾಜ, ಮಹರಾಜರು ಪಡೆದಿರುವಷ್ಟು ಜನಪ್ರಿಯತೆ ಗಳಿಸಿರುವ ವ್ಯಕ್ತಿ ಕೆಂಪೇಗೌಡ ಎಂದು ಸ್ಮರಿಸಿದರು.
ಕೆಂಪೇಗೌಡರ ಭಾವಚಿತ್ರಗಳನ್ನು ಹೊತ್ತ ಬೆಳ್ಳಿ ಕುದುರೆ ಸಾರೋಟು, ಕುದುರೆ ಸವಾರಿ ಸೇರಿದಂತೆ ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಯಿಂದ ಒಂದೊಂದು ಪಲ್ಲಕ್ಕಿ ಭಾಗವಹಿಸಿದ್ದವು.ಡೋಲು ಕುಣಿತ,ಕೋಲಾಟ ತಮಟೆವಾದ್ಯಗಳ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ತಾಲ್ಲೂಕಿನ ಮೂಲೆ ಮೂಲೆಗಳಿಂದ ಬಂದಿದ್ದ ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿಭಿನ್ನವಾಗಿ ಕುದುರೆ ಸವಾರಿ ಮಡುವ ಮೂಲಕ ಗಮನ ಸೆಳೆದರು. ತಮಟೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು.ಪಟ್ಟಣದಲ್ಲಿ ಹಬ್ಬದ ವಾತಾವರಣವಿತ್ತು.
ಈಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಎಂ ಜಿ ವೃತ್ತದಿಂದ,ಬಾಗೇಪಲ್ಲಿ ರಸ್ತೆ, ಹೊರಟು,ವೃತ್ತ ನಿರೀಕ್ಷಕರು ಕಚೇರಿಯ ಬಳಿ ತಿರುವು ಪಡೆದು ಕಾರ್ಯಕ್ರಮದ ಸ್ಥಳವಾದ ದರವಾರಪಲ್ಲಿ ಗ್ರಾಮದ ಬಳಿ ಆಯೋಜಿಸಲಾಗಿದ್ದ ವೇದಿಕೆಗೆ ತಲುಪಿತು. ಎಂ ಜಿ ವೃತ್ತಗಳಲ್ಲಿ ಜನಪದ ತಂಡಗಳಾದ ತಮಟೆವಾದ್ಯ, ಡೋಲು ಕುಣಿತ,ಕೋಲಾಟ ತಮ್ಮ ಪ್ರದರ್ಶನ ನೀಡಿದರು.
ಸುಮಾರು 12 ಗಂಟೆಗೆ ಆರಂಭವಾದ ಮೆರವಣಿಗೆ ಮಧ್ಯಾಹ್ನ 02 ಗಂಟೆಗೆ ವೇದಿಕೆ ಸ್ಥಳಕ್ಕೆ ಸೇರಿತು. ಪಲ್ಲಕ್ಕಿ ಮೆರವಣಿಗೆಯಿಂದ ಸಂಚಾರ ಅಸ್ತವ್ಯಸ್ತಗೊಂಡಿತು. ಸಂಚಾರ ವ್ಯವಸ್ಥೆ ತಹಬದಿಗೆ ತರಲು ಪೊಲೀಸರು ಹೆಣಗಾಡಬೇಕಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಚಿತ್ರ ರಂಗ ನಿರ್ಮಾಪಕಾರದ ಉಮಾಪತಿ ಶ್ರೀನಿವಾಸ್ ಗೌಡ, ಯಳುವಳ್ಳಿ ರಮೇಶ್, ಈಶ್ವರೆಡ್ಡಿ, ಶೇಖರ್ ರೆಡ್ಡಿ, ರಾಮಚಂದ್ರ, ಎಚ್ ವಿ ನಾರಾಯಣ ಸ್ವಾಮಿ,ಲಕ್ಷ್ಮಣ್ ರೆಡ್ಡಿ, ಒಕ್ಕಲಿಗರ ಕುಲಬಾಂಧವರು ಹಾಗೂ ಮತ್ತಿತರರು ಹಾಜರಿದ್ದರು.
ವರದಿ:ಯಾರಬ್. ಎಂ




