ಸಿಂಧನೂರು : ಜುಲೈ 7, ಬೆಂಗಳೂರಿನ ಗಾಂಧಿ ಭವನದಲ್ಲಿ ಒಟ್ಟು 51 ಎಸ್ಸಿ ಜನಾಂಗದವರ ಪೈಕಿ 49 ಪರಿಶಿಷ್ಟ ಜಾತಿ ಅಭಿವೃದ್ಧಿ ಮಂಡಳಿಯ ಜನಾಂಗದ ಮುಖಂಡರನ್ನು ಹೆಚ್. ಆಂಜನೇಯ ಮಾಜಿ ಸಚಿವರ ನೇತೃತ್ವದಲ್ಲಿ ಜುಲೈ 5 ರಂದು ಸಭೆ ಕರೆದಿದ್ದು ಈ ಸಭೆಯಲ್ಲಿ ಕೊರಮ ಮತ್ತು ಕೊರಚ ಸಮಾಜದ ಮುಖಂಡರನ್ನು ಆಹ್ವಾನಿಸದೆ ಅನ್ಯಾಯ ಮಾಡಿದ್ದಾರೆ.
ಇದಲ್ಲದೆ ಅದೇ ದಿನದಂದು ಎಸ್ ಸಿ ಮತ್ತು ಎಸ್ ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಜಿ. ಮತ್ತು ಇವರ ಜೊತೆಗೆ ಶ್ರೀಮತಿ ಪ್ರಭಾವತಿ ನಮ್ಮ ಸಮಾಜದ ಮಹಿಳಾ ಮುಖಂಡರು ಸಭೆಗೆ ಹೋಗಿ ನಮ್ಮ ಸಮಾಜದವರನ್ನು ಯಾಕೇ ಆಹ್ವಾನಿಸಿಲ್ಲ ಎಂದು ಕೇಳಿದ್ದಕ್ಕೆ ಅಲೆಮಾರಿ ಜನಾಂಗದ ಮುಖಂಡರಾದ ಲೋಹಿತಾಕ್ಷ ಸುಡುಗಾಡು ಸಿದ್ಧ ಸಮಾಜದ ಅಧ್ಯಕ್ಷ. ಮತ್ತು ಬಿಜೆಪಿ ಪಕ್ಷದ ವಕ್ತರ ಹಾಗೂ ವೀರೇಶ್ ಸುಡುಗಾಡು ಸಿದ್ಧ ಸಮಾಜದ ಮುಖಂಡ ಇನ್ನು ಅನೇಕ ಜನರು ಹೆಚ್. ಆಂಜನೇಯ ಅವರ ಮುಂದೆ ನಮ್ಮ ಜನಾಂಗದ ಮಹಿಳೆಯ ಮುಖಂಡರನ್ನು ಸೀರೆ ಹಿಡಿದು ಎಳೆದಾಡಿ ಅವಮಾನ ದೌರ್ಜನ್ಯ ಮಾನಹಾನಿ ಮಾಡಿದ್ದಾರೆ.
ಕೂಡಲೆ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಿಂಧನೂರು ತಾಲೂಕು ಕುಳುವ ಮಹಾ ಸಂಘ ಸಮುದಾಯಗಳ ಒಕ್ಕೂಟದಿಂದ ತಾಲೂಕ ದಂಡಾಧಿಕಾರಿ ಕಛೇರಿ ಮುಂದೆ ಪ್ರತಿಭಟಿಸಿ ತಹಸಿಲ್ದಾರ್ ರವರ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ಕುಳುವ ಮಹಾ ಸಂಘದ ತಾಲೂಕಾಧ್ಯಕ್ಷ ರಾಮಕೃಷ್ಣ ಭಜಂತ್ರಿ ತಿಳಿಸಿದರು.
ಈ ಸಂದರ್ಭದಲ್ಲಿ ಕುಳುವ ಮಹಾ ಸಂಘದ ಮುಖಂಡರಾದ ಬಾಲಪ್ಪ ಮನ್ನಾಪುರ. ಮರಿಯಪ್ಪ ತುರಡಗಿ. ಹನುಮಂತ ಕಾರಕುಂಟೆ. ಹುಲುಗಪ್ಪ ಎಮ್ಟಿಎಸ್, ಇನ್ನು ಅನೇಕರಿದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ




