ಭಾಲ್ಕಿ : ತಾಲೂಕಿನ ಭಾಟಸಂಗವಿ ಗ್ರಾಮದ ರೈತ ಶ್ರೀ ನಾಮದೇವ ಭೀಮರಾವ್ ಝಳಕೆ (ವಯಸ್ಸು 65) ಅವರು ಇತ್ತೀಚೆಗೆ ಮಾಂಜ್ರಾ ನದಿಯನ್ನು ದಾಟುವ ಪ್ರಯತ್ನದಲ್ಲಿ ನೀರಿನ ತೀವ್ರ ರಭಸಕ್ಕೆ ಕೊಚ್ಚಿ ಹೋಗಿ ದುರಂತವಾಗಿ ಸಾವನ್ನಪ್ಪಿದರು. ಈ ಘಟನೆಗೆ ಸಂಬಂಧಿಸಿದಂತೆ ಇಂದು ಕರ್ನಾಟಕ ರಾಜ್ಯದ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಈಶ್ವರ ಖಂಡ್ರೆ ಅವರು ಮೃತ ರೈತನ ನಿವಾಸಕ್ಕೆ ಭೇಟಿ ನೀಡಿದರು.

ಮೃತನ ಕುಟುಂಬದವರೊಡನೆ ಮಾತನಾಡಿ ಸಾಂತ್ವನ ಹೇಳಿದರು ಹಾಗೂ ಈ ದುಃಖದ ಸಂದರ್ಭದಲ್ಲಿ ಧೈರ್ಯದಿಂದ ಇರಲು ಮನೋಬಲ ತುಂಬಿದರು. ನಂತರ ಸರ್ಕಾರದಿಂದ ಅನುಮೋದಿಸಲಾದ ₹5 ಲಕ್ಷ ರೂ. ಪರಿಹಾರ ಧನದ ಚೆಕ್‌ನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಸಂತೋಷ ಬಿಜಿ ಪಾಟೀಲ




