ಚಿಟಗುಪ್ಪ:ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಬೀದರ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮದಲ್ಲಿ ಸಂಭ್ರಮ,ಸಡಗರದಿಂದ ಆಚರಿಸಲಾಯಿತು.
ಎಂದಿನಂತೆ ಹಿಂದೂ ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಪೀರ್ ಪಂಜಿಗಳ ಮೆರವಣಿಗೆ ನಡೆಸಿ,ಭಕ್ತಿ ಅರ್ಪಿಸಿದರು.
ಹಬ್ಬದ ಹಿಂದಿನ ದಿನದ ಮಧ್ಯ ರಾತ್ರಿಯಿಂದಲೇ ಗ್ರಾಮಸ್ಥರು,ಜಾತಿ ಭೇದವಿಲ್ಲದೇ ಪೂರ್ವ ಪದ್ಧತಿಗೆ ಅನುಗುಣವಾಗಿ ಭುಲಾಯಿ ಹಾಡು ಹಾಡುತ್ತ,ಪೀರ್ ಮೆರವಣಿಗೆಯ ಸಿಂಗಾರ ನಡೆಸಿದರು.
ಬಳಿಕ ಮಧ್ಯರಾತ್ರಿಯಲ್ಲಿ ಪಿರ್ ಪಂಜಿಗಳನ್ನು ಎಬ್ಬಿಸಿ ದರ್ಗಾಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಬೆಳೆಗ್ಗೆ ಗ್ರಾಮದಲ್ಲಿ ಮೆರವಣಿಗೆ ಮೂಲಕ ದರ್ಶನ ನೀಡಿ ಮದ್ಯಾಹ್ನ ಮುಕ್ತಾಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಇನಾಯತ ಅಲಿ, ಸಾಹೇಬ್,ದತ್ತು ಸಾಹೇಬ್,ಅಲ್ಲಾವುದ್ದಿನ ಸಾಹೇಬ್,ಪಿರ್ ಪಂಜಿ ಮೆರವಣಿಗೆ ಉಸ್ತುವಾರಿಗಳಾದ ಮುಸಾಮಿಯಾ, ಇಸಾಮಿಯ, ಸಲಾಂಪಾಶ, ತೊಫಿಕ್, ಮಾಸ್ತನ, ಸಲಾಂ, ರುಕುಮೋದ್ದಿನ, ಧನರಾಜ ಡೆಬ್ಬಿ, ಮಹೇಶ ಔಂಟಿ,ಸುನಿಲ ಸಾಹೇಬ್,ನಾಗಪ್ಪ ವಿಶ್ವಕರ್ಮ,ರಮೇಶ ಕಂದಗುಳೆ,ಪ್ರಭು ಪಂಚಾಳ,ಅಜ್ಜು ಪಟೇಲ್, ಸಮೀರ್ ಉಡಬಾಳ ಸೇರಿದಂತೆ ಇತರರು ಇದ್ದರು.
ವರದಿ:ಸಜೀಶ ಲಂಬುನೋರ




